ದೇಶದಲ್ಲಿ ಇದೆ 3167 ಹುಲಿಗಳು – ಪ್ರಕೃತಿಯನ್ನು ರಕ್ಷಿಸುವುದು ಭಾರತೀಯ ಸಂಸ್ಕೃತಿಯ ಭಾಗ: ಮೋದಿ

Public TV
1 Min Read

ಮೈಸೂರು: ಭಾರತದಲ್ಲಿ (India) ಈಗ 3,167 ಹುಲಿಗಳಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮೈಸೂರಿನ (Mysuru) ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಆಯೋಜನೆಗೊಂಡ ಹುಲಿ ಯೋಜನೆಯ (Tiger Project) ಸುವರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ನರೇಂದ್ರ ಮೋದಿ (Narendra Modi) 2022ರ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದರು. ಇದನ್ನೂ ಓದಿ: ಬಂಡೀಪುರದಲ್ಲಿ ಮೋದಿ ಸಫಾರಿ – ಪ್ರಕೃತಿ ಸೌಂದರ್ಯ ಸವಿದ ಪ್ರಧಾನಿ

ಈ ವೇಳೆ ಮಾತನಾಡಿದ ಅವರು, ಪ್ರಕೃತಿಯನ್ನು ರಕ್ಷಿಸುವುದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಪ್ರಾಜೆಕ್ಟ್ ಟೈಗರ್‌ನ ಯಶಸ್ಸು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಹೆಮ್ಮೆಯ ವಿಷಯವಾಗಿದೆ. ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಪೂರ್ಣಗೊಳಿಸಿದೆ ಮತ್ತು ಮತ್ತು ಅದೇ ಸಮಯದಲ್ಲಿ, ವಿಶ್ವದ ಒಟ್ಟು ಹುಲಿಗಳ ಪೈಕಿ ಶೇ.75 ರಷ್ಟು ಭಾರತದಲ್ಲಿದೆ ಎಂದು ಹೇಳಿದರು.

ವಿಶ್ವದ ಭೂ ಪ್ರದೇಶದ ಕೇವಲ ಶೇ.2.4 ರಷ್ಟು ಭೂಮಿಯನ್ನು ಹೊಂದಿರುವ ಭಾರತವು ಜಾಗತಿಕ ವೈವಿಧ್ಯತೆಗೆ ಶೇ.8 ರಷ್ಟು ಕೊಡುಗೆ ನೀಡುತ್ತದೆ. ದಶಕಗಳ ಹಿಂದೆಯೇ ಭಾರತದಲ್ಲಿ ಚಿತಾಗಳು ಅಳಿದು ಹೋಗಿದ್ದವು. ನಾವು ಈಗ ಚೀತಾವನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

ವರದಿಯಲ್ಲಿ ಏನಿದೆ?
ಭಾರತದಲ್ಲಿ ಒಟ್ಟು ಈಗ 3167 ಹುಲಿಗಳಿವೆ. 2006ರಲ್ಲಿ 1,411 ಇದ್ದರೆ 2018ರಲ್ಲಿ ಈ ಸಂಖ್ಯೆ 2,967ಕ್ಕೆ ಏರಿಕೆಯಾಗಿತ್ತು. 30 ಸಾವಿರಕ್ಕೂ ಹೆಚ್ಚು ಏಷ್ಯಾಟಿಕ್ ಆನೆಗಳಿದ್ದರೆ ಒಂದು ಕೊಂಬಿನ ಘೇಂಡಾಮೃಗ 3000 ಇದೆ. 675 ಸಿಂಹಗಳು ಇದೆ.

ಯಾವುದು ಎಷ್ಟಿದೆ?
2014ರಲ್ಲಿ 2,226 ಹುಲಿಗಳಿದ್ದರೆ 2022ರಲ್ಲಿ ಇದು 3,167ಕ್ಕೆ ಏರಿಕೆಯಾಗಿದೆ. 2014ರಲ್ಲಿ 523 ಸಿಂಹಳಿದ್ದರೆ 2020ರಲ್ಲಿ 674ಕ್ಕೆ ಏರಿಕೆಯಾಗಿದೆ. 2014ರಲ್ಲಿ 7,910 ಚಿರತೆಗಳಿದ್ದರೆ 2018ರಲ್ಲಿ 12,852ಕ್ಕೆ ಏರಿಕೆಯಾಗಿದೆ.

Share This Article