ಭಾರತದಲ್ಲಿ ಮುಂಬರುವ ವಾರಗಳಲ್ಲಿ ಓಮಿಕ್ರಾನ್ ಅಲೆ ತೀವ್ರಗೊಳ್ಳಬಹುದು ಎಂದ ತಜ್ಞರು!

Public TV
1 Min Read

ನವದೆಹಲಿ: ಭಾರತದಲ್ಲಿ ಮುಂಬರುವ ವಾರಗಳಲ್ಲಿ ಓಮಿಕ್ರಾನ್ ಅಲೆ ತೀವ್ರಗೊಳ್ಳಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೂಪಾಂತರ ಓಮಿಕ್ರಾನ್ ಸಹ ಹೆಚ್ಚು ಪತ್ತೆಯಾಗುತ್ತಿದೆ. ಈ ಹಿನ್ನೆಲೆ ಕೆಲವು ಉನ್ನತ ತಜ್ಞರು, ಸೋಂಕು ಮುಂಬರುವ ವಾರಗಳಲ್ಲಿ ತೀವ್ರ ಏರಿಕೆಯಾಗಬಹುದು ಎಂದು ಹೇಳಿದ್ದಾರೆ. ಕೊರೊನಾ ಸೋಂಕು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಮಾತ್ರ ಸೋಂಕು ಪತ್ತೆಯಾಗುತ್ತಿಲ್ಲ. ಅದನ್ನು ಬಿಟ್ಟರೆ ಹೆಚ್ಚು ದೇಶಗಳಲ್ಲಿ ಸೋಂಕು ಪತ್ತೆಯಾಗುತ್ತಿದೆ. ಈ ಪರಿಣಾಮ ಆಸ್ಪತ್ರೆಗಳಲ್ಲಿ ಸೋಂಕಿತರು ಹೆಚ್ಚು ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಸಾಂಕ್ರಾಮಿಕ ನಿರ್ಣಾಯಕ ಹಂತದಲ್ಲಿದೆ: WHO ಮುಖ್ಯಸ್ಥ

ಕಳೆದ 24 ಗಂಟೆಗಳಲ್ಲಿ 3,06,064 ಸೋಂಕು ದೇಶದಲ್ಲಿ ವರದಿಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ವರದಿಯಾದ ಸರಾಸರಿ ಪ್ರಕರಣಗಳಲ್ಲಿ 8% ಇಳಿಕೆಯಾಗಿದೆ. 439 ಸಾವುಗಳು ಸಂಭವಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತೀಯ ಎಸ್‍ಎಆರ್‍ಎಸ್-ಕೋವಿ-2 ಜೀನೋಮಿಕ್ಸ್ ಕನ್ಸೋರ್ಟಿಯಂ(INSACOG) ಓಮಿಕ್ರಾನ್ ಕುರಿತು ಜ.10 ರಂದು ವರದಿ ಮಾಡಿದ್ದು, ಓಮಿಕ್ರಾನ್ ಈಗ ಭಾರತದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದೆ. ಕಳೆದ ಎರಡು ವಾರಗಳಲ್ಲಿ ಪ್ರಮುಖ ನಗರಗಳಾದ ರಾಜಧಾನಿ ದೆಹಲಿ, ಮುಂಬೈ, ಮಹಾರಾಷ್ಟ್ರದಲ್ಲಿ ಪ್ರಕರಣಗಳು ಹೆಚ್ಚು ಕಾಣಿಸುತ್ತಿದೆ.

ಕೋವಿಡ್‍ನ ರಾಷ್ಟ್ರೀಯ ಕಾರ್ಯಪಡೆಯ ಸದಸ್ಯ ಡಾ.ಸುಭಾಷ್ ಸಾಳುಂಕೆ ಈ ಕುರಿತು ಮಾತನಾಡಿದ್ದು, ಈ ರೂಪಾಂತರವು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹರಡುತ್ತಿದೆ. ಮುಂದಿನ 8 ರಿಂದ 10 ವಾರಗಳಲ್ಲಿ ರಾಜ್ಯದಲ್ಲಿ ಸೋಂಕಿನ ಪಟ್ಟಿ ಹೆಚ್ಚಾಗುತ್ತೆ ಎಂಬ ನಿರೀಕ್ಷೆಯಿದೆ. ಈ ಹಿಂದೆ ಮಹಾರಾಷ್ಟ್ರ ಸರ್ಕಾರಕ್ಕೆ ನಾನು ಈ ಕುರಿತು ಸಲಹೆ ನೀಡಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಅಧಿಕೃತ ಸಭೆ ಅಲ್ಲ ಎಂದಿದ್ದ ಬಾಲಚಂದ್ರ ಜಾರಕಿಹೊಳಿಗೆ ಕತ್ತಿ ಟಾಂಗ್

ದೇಶದ ಒಟ್ಟಾರೆ ಸೋಂಕುಗಳ ಸಂಖ್ಯೆ 39.54 ಮಿಲಿಯನ್ ತಲುಪಿದೆ. ಪರಿಣಾಮ ಯುನೈಟೆಡ್ ಸ್ಟೇಟ್ಸ್‍ನ ನಂತರ ಭಾರತ ಎರಡನೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರವಾಗಿದೆ. ದೇಶದಲ್ಲಿ 4,89,848 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *