ಭಾರತ ನೀಲಿಯಿಂದ ಕೇಸರಿ ಮಯವಾಗಿದ್ದು ಹೇಗೆ?

Public TV
2 Min Read

– 1984ರಲ್ಲಿ ಬಿಜೆಪಿ ಗೆದ್ದಿದ್ದು ಕೇವಲ 2 ಸ್ಥಾನ

ಬೆಂಗಳೂರು: ಬಿಜೆಪಿಯು 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿದ್ದು, ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್‍ನ್ನು ಮೂಲೆ ಗುಂಪು ಮಾಡಿದೆ. 1984ರಲ್ಲಿ 2 ಸ್ಥಾನಗಳಲ್ಲಿ ಜಯ ಗಳಿಸಿದ್ದ ಬಿಜೆಪಿ ಸದ್ಯ ಭಾರತವನ್ನು ಕೇಸರಿ ಮಯವಾಗಿಸಿದೆ.

ಬಿಜೆಪಿಯು 1980 ಏಪ್ರಿಲ್ 6ರಂದು ಸ್ಥಾಪನೆಯಾಗಿದೆ. 1984ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯ ಎದುರಿಸಿ ಆಂಧ್ರಪ್ರದೇಶ ಹಾಗೂ ಗುಜರಾತ್‍ನಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ಮೊದಲ ಯತ್ನದಲ್ಲಿಯೇ ಎರಡು ರಾಜ್ಯದಲ್ಲಿ ತನ್ನ ಖಾತೆಯನ್ನು ತೆರೆದಿತ್ತು. ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸಿದ ಬಿಜೆಪಿಯು 1989ರ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರೇಶ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನದಲ್ಲಿ ತನ್ನ ಪ್ರಾಬಲ್ಯ ಮೇರೆದೆ, 85 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

ಕರ್ನಾಟಕದಲ್ಲಿ ಅರಳಿದ ಕಮಲ:
ಬಿಜೆಪಿಯು 1991ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕವನ್ನು ಪ್ರವೇಶಿಸಿತು. ಆ ವರ್ಷ ಬಿಜೆಪಿಯು ಕರ್ನಾಟಕದ ನಾಲ್ಕು ಕ್ಷೇತ್ರ ಸೇರಿದಂತೆ ದೇಶದಾದ್ಯಂತ 120 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಕಾಂಗ್ರೆಸ್‍ಗೆ ಬಿಜೆಪಿಯು 1996ರಲ್ಲಿ ಭರ್ಜರಿ ಶಾಕ್ ಕೊಟ್ಟಿತ್ತು. ಬಿಜೆಪಿ 161 ಹಾಗೂ ಕಾಂಗ್ರೆಸ್ 140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಆದರೆ ಕಾಂಗ್ರೆಸ್ ಮೈತ್ರಿ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚನೆ ಮಾಡಿತ್ತು. ಬಳಿಕ ನಡೆದ 1998ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 182 ಕ್ಷೇತ್ರಗಳಲ್ಲಿ ಜಯ ಗಳಿಸಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿತ್ತು. ಆದರೆ ಬಹುಮತ ಸಾಬೀತು ಮಾಡಲು ಸಾಧ್ಯವಾಗದೇ ಸರ್ಕಾರ ಬಿದ್ದಿತ್ತು. ಈ ವೇಳೆ ಅಟಲ್ ಜೀ ಅವರು ಮಾಡಿದ ಭಾಷಣ ವಿವಿಧ ಪಕ್ಷಗಳ ನಾಯಕರ ಮೇಲೆ ಪರಿಣಾಮ ಬೀರಿತ್ತು. ಅಷ್ಟೇ ಅಲ್ಲದೆ ಇದೇ ವೇಳೆ ಬಿಜೆಪಿ ತನ್ನ ನೇತೃತ್ವದಲ್ಲಿ ಎನ್‍ಡಿಎ ಒಕ್ಕೂಟ ಆರಂಭಿಸಿತು. ಹೀಗಾಗಿ 1999ರ ಚುನಾವಣೆಯಲ್ಲಿಯೂ 182 ಸ್ಥಾನಗಳಿಸಿದ ಬಿಜೆಪಿಗೆ ವಿವಿಧ ಪಕ್ಷಗಳು ಬೆಂಬಲ ನೀಡಿ, ಅಟಲ್ ಜೀ ಅವರ ನೇತೃತ್ವದಲ್ಲಿ 5 ವರ್ಷಗಳ ಕಾಲ ಸರ್ಕಾರ ನಡೆಸಿದ್ದವು.

ಬಿಜೆಪಿಯು 2004ರಲ್ಲಿ 138 ಸ್ಥಾನ ಹಾಗೂ 2009ರಲ್ಲಿ 116 ಸ್ಥಾನ ಗಳಿಸಿ ಮುಗ್ಗರಿಸಿತ್ತು. ಆದರೆ ಮೋದಿ ಅಲೆಯು 2004ರಲ್ಲಿ ಬಿಜೆಪಿ ಭರ್ಜರಿ ಗೆಲುವು ತಂದು ಕೊಟ್ಟಿತ್ತು. ಆ ವರ್ಷ 282 ಕ್ಷೇತ್ರಗಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. 2019ರ ಚುನಾವಣೆಯಲ್ಲಿ ದೇಶವು ಕೇಸರಿಮಯವಾಯಿದೆ. ಈ ಬಾರಿ ಬಿಜೆಪಿಯು 303 ಸ್ಥಾನಗಳನ್ನು ಪಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *