ನೋಟ್ ಬ್ಯಾನ್, ಜಿಎಸ್‍ಟಿಯಿಂದಾಗಿ ಭಾರತದ ಆರ್ಥಿಕತೆಯ ಬೆಳವಣಿಗೆ ಕುಂಠಿತವಾಗಿದೆ: ರಘುರಾಂ ರಾಜನ್

Public TV
1 Min Read

ವಾಷಿಂಗ್ಟನ್: ನೋಟು ಅಮಾನ್ಯೀಕರಣ ಹಾಗೂ ನೂತನ ಜಿಎಸ್‍ಟಿ ತೆರಿಗೆಯಿಂದಾಗಿ ಭಾರತದ ಆರ್ಥಿಕತೆಯ ಬೆಳವಣಿಗೆ ಕುಂಠಿತವಾಗಿದೆಯೆಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಅಭಿಪ್ರಾಯ ಪಟ್ಟಿದ್ದಾರೆ.

ಶುಕ್ರವಾರ ಬರ್ಕಲಿಯಾದ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಭಟ್ಟಾಚಾರ್ಯರವರ ಭಾರತದ ಭವಿಷ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2012 ರಿಂದ 2016ರ ವರೆಗೆ ಭಾರತದ ಬೆಳವಣಿಗೆಯ ವೇಗ ಹೆಚ್ಚಾಗಿತ್ತು. ಆದರೆ 2017ರಲ್ಲಿ ನೋಟು ಅಮಾನ್ಯೀಕರಣ ಹಾಗೂ ಜಿಎಸ್‍ಟಿಯಿಂದಾಗಿ ಇದರ ವೇಗಕ್ಕೆ ತಡೆಯುಂಟಾಗಿದೆ. ಇವುಗಳ ಹೊಡೆತದಿಂದಾಗಿ ದೇಶದ ಆರ್ಥಿಕತೆ ಕುಂಠಿತವಾಗಿದೆ. ಜಗತ್ತು ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವಾಗ ಭಾರತದ ಆರ್ಥಿಕತೆಗೆ ಇವುಗಳಿಂದ ಹೊಡೆತ ಬಿದ್ದಿದೆ ಎಂದು ತಿಳಿಸಿದರು.

ಸತತ 25 ವರ್ಷಗಳ ಕಾಲಮಾನಕ್ಕೆ ಹೋಲಿಸಿದರೆ, ಇಂದಿನ ಶೇ.7 ರಷ್ಟು ಆರ್ಥಿಕ ಬೆಳವಣಿಗೆಯೇ ಅತ್ಯಂತ ಬಲಿಷ್ಠವಾಗಿದೆ. ಆದರೆ ಇದನ್ನು ಕೆಲವರು ಹಿಂದೂ ಬೆಳವಣಿಗೆ ದರ ಎಂದು ಹೇಳುತ್ತಿದ್ದಾರೆ. ಈ ಮೊದಲು ಹಿಂದೂ ಬೆಳವಣಿಗೆಯ ದರ ಕೇವಲ ಶೇ.3.5ರಷ್ಟಿತ್ತು. ಪ್ರಸ್ತುತ ಇರುವ ಶೇ.7 ರಷ್ಟು ಬೆಳವಣಿಗೆ ಸಾಕಾಗುವುದಿಲ್ಲ. ಮುಂಬರುವ ದಿನಗಳಲ್ಲಿ ದೇಶದಲ್ಲಿ ಉದ್ಯೋಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತದೆ. ಹೀಗಾಗಿ ನಾವು ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳಲು ಸಾಧ್ಯವಿಲ್ಲ. ಜಾಗತೀಕ ಬೆಳವಣಿಗೆಯಲ್ಲಿ ಭಾರತವನ್ನು ಸೂಕ್ಷ್ಮವಾಗಿ ನೋಡಿದರೆ, ಇಂದು ಅತಿ ಹೆಚ್ಚಿನ ಮುಕ್ತ ಅರ್ಥವ್ಯವಸ್ಥೆಯಾಗಿ ಬೆಳೆದಿದೆ. ಜಾಗತಿಕ ಅರ್ಥವ್ಯವಸ್ಥೆ ಬೆಳೆದರೇ, ಭಾರತವೂ ಬೆಳೆಯುತ್ತದೆ ಎಂದು ವಿವರಿಸಿದರು.

2017 ರಲ್ಲಿ ಭಾರತ ಅರ್ಥವ್ಯವಸ್ಥೆ ಇಳಿಮುಖವಾಗಿತ್ತು. ಇದಕ್ಕೆ ನೇರ ಕಾರಣ ನೋಟು ಅಮಾನ್ಯೀಕರಣ ಹಾಗೂ ಜಿಎಸ್‍ಟಿ. ಇವುಗಳ ಹೊಡೆತ ಎಷ್ಟು ಬಲವಾಗಿತ್ತು ಎನ್ನುವುದಕ್ಕೆ ಇದೇ ನಿದರ್ಶನವಾಗಿದೆ. ಸದ್ಯದ ಭಾರತದ ಅರ್ಥವ್ಯವಸ್ಥೆ ಚೇತರಿಕೆಯ ಹಾದಿಯಲ್ಲಿದೆ. ಆದರೆ ತೈಲ ಬೆಲೆ ಏರಿಕೆಯಿಂದಾಗಿ, ಇದಕ್ಕೂ ಅಡ್ಡಿಯುಂಟಾಗುತ್ತಿದೆ. ಭಾರತದ ಅತ್ಯಧಿಕ ಸಂಪನ್ಮೂಲಗಳು ತೈಲ ಉತ್ಪನ್ನಗಳ ಆಮದಿಗೆ ವೆಚ್ಚವಾಗುತ್ತಿದೆ ಎಂದು ತಿಳಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *