ಸೇನಾ ಸಾಮರ್ಥ್ಯಕ್ಕೆ ಇನ್ನಷ್ಟು ಬಲ – ಭಾರತದ ʻಬ್ರಹ್ಮಾಸ್ತ್ರʼ ಅಗ್ನಿ-5 ಬಂಕರ್ ಬಸ್ಟರ್? – ಪಾಕ್‌ಗೆ ನಡುಕ

Public TV
2 Min Read

ನವದೆಹಲಿ: ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ (US AirStrike) ನಡೆಸಿದ ಬೆನ್ನಲ್ಲೇ, ಭಾರತವು ತನ್ನ ಬಂಕರ್-ಬಸ್ಟರ್ ಕ್ಷಿಪಣಿ (Bunker Buster Missile) ಯೋಜನೆಯನ್ನು ತೀವ್ರಗೊಳಿಸಿದೆ ಎಂದು ವರದಿಯಾಗಿದೆ. ಈ ಯೋಜನೆಯು ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ, ಅದರಲ್ಲೂ ವಿಶೇಷವಾಗಿ ಭೂಗತ ಸೌಲಭ್ಯಗಳನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿದೆ.

ಭಾರತವು ಅಮೆರಿಕದ ‘ಬಂಕರ್ ಬಸ್ಟರ್’ ಬಾಂಬ್‌ಗಳಿಗಿಂತಲೂ ಹೆಚ್ಚು ಶಕ್ತಿಶಾಲಿ ಅಸ್ತ್ರವನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಅಗ್ನಿ-5 ಕ್ಷಿಪಣಿಯ ಹೊಸ, ವಾಯುಪಡೆಯ ಆವೃತ್ತಿಯಾಗಿದೆ. ಈ ಕ್ಷಿಪಣಿಯು ಪಾಕಿಸ್ತಾನ ಮತ್ತು ಚೀನಾದ ರಹಸ್ಯ ಭೂಗತ ಪರಮಾಣು ಬಂಕರ್‌ಗಳನ್ನು ಕೆಲವೇ ನಿಮಿಷಗಳಲ್ಲಿ ನಾಶಮಾಡುವ ಸಾಮರ್ಥ್ಯ ಹೊಂದಿದೆ. ಶತ್ರುಗಳ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ, ನಿಖರವಾಗಿ ಗುರಿ ತಲುಪುವ ಈ ‘ಬ್ರಹ್ಮಾಸ್ತ್ರ’ವು ವಾಯುಪಡೆಯ (IAF) ಬತ್ತಳಿಕೆಗೆ ಸೇರಿದರೆ, ಭಾರತದ ಸೇನಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಲಿದೆ. ಈ ಬೆಳವಣಿಗೆಯು ಪ್ರತಿಸ್ಪರ್ಧಿ ರಾಷ್ಟ್ರಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ: ಹಲವು ಮಹಿಳೆಯರ ಜೊತೆ ಅಫೇರ್‌ ಇಟ್ಕೊಂಡಿದ್ದ – ಯಶ್‌ ದಯಾಳ್‌ ವಿರುದ್ಧ ಮಹಿಳೆಯಿಂದ ಮತ್ತೊಂದು ಆರೋಪ

ಇದೇ ಜೂನ್ 22 ರಂದು ಅಮೆರಿಕದ B2 ಸ್ಟೆಲ್ತ್ ಬಾಂಬರ್‌ಗಳು ಇರಾನ್‌ನ ಫೊರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಪರಮಾಣು ಕೇಂದ್ರಗಳ ಮೇಲೆ 30,000 ಪೌಂಡ್ ತೂಕದ GBU-57 ಮ್ಯಾಸಿವ್ ಆರ್ಡಿನೆನ್ಸ್ ಪೆನೆಟ್ರೇಟರ್ ಬಾಂಬ್‌ಗಳನ್ನು ಬಳಸಿ ದಾಳಿ ನಡೆಸಿದವು. ಈ ಬಂಕರ್-ಬಸ್ಟರ್ ಬಾಂಬ್‌ಗಳು 200 ಅಡಿ ಆಳದ ಭೂಗತ ರಚನೆಗಳನ್ನು ಭೇದಿಸಿ ಇಸ್ರೇಲ್‌ನ ನ್ಯೂಕ್ಲಿಯರ್‌ ಘಟಕಗಳನ್ನು ಧ್ವಂಸ ಮಾಡಿದ್ದವು. ಈ ದಾಳಿಯು ಇರಾನ್‌ನ ಪರಮಾಣು ಯೋಜನೆಗೆ ಗಣನೀಯ ಹಿನ್ನಡೆ ಉಂಟುಮಾಡಿದೆ ಎಂದು US ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್‌ಸೆತ್ ಹೇಳಿದ್ದಾರೆ. ಇದನ್ನೂ ಓದಿ: ಭಾರತ್-NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಇನ್ನೋವಾ ಹೈಕ್ರಾಸ್‌ಗೆ ಸಿಕ್ತು 5 ಸ್ಟಾರ್ ರೇಟಿಂಗ್

ಈ ಘಟನೆಯಿಂದ ಪ್ರೇರಿತದ ಭಾರತವು ತನ್ನ ಭೂಗತ ಗುರಿಗಳನ್ನು ಭೇದಿಸುವ ಸಾಮರ್ಥ್ಯವಿರುವ ಕ್ಷಿಪಣಿಗಳ ಅಭಿವೃದ್ಧಿಯನ್ನು ಚುರುಕುಗೊಳಿಸಿದೆ. ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಈ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಭಾರತವು ಈಗಾಗಲೇ SPICE-2000 ಮತ್ತು HAMMER ಕ್ಷಿಪಣಿಗಳಂತಹ ನಿಖರ ಗುರಿಯ ಶಸ್ತ್ರಾಸ್ತ್ರಗಳನ್ನು 2019ರ ಬಾಲಕೋಟ್ ದಾಳಿಯಲ್ಲಿ ಬಳಸಿದೆ, ಆದರೆ GBU-57 ರಂತಹ ದೊಡ್ಡ ಪ್ರಮಾಣದ ಬಂಕರ್-ಬಸ್ಟರ್ ಬಾಂಬ್‌ಗಳಿಗೆ ಸಮನಾದ ಶಸ್ತ್ರಾಸ್ತ್ರವನ್ನು ಇನ್ನೂ ಅಭಿವೃದ್ಧಿಪಡಿಸಿಲ್ಲ. ಈ ಹೊಸ ಕ್ಷಿಪಣಿ ಯೋಜನೆಯು ಭಾರತದ ರಕ್ಷಣಾ ಶಕ್ತಿಯನ್ನು ಆಧುನೀಕರಿಸುವ ಭಾಗವಾಗಿದೆ. ಇದನ್ನೂ ಓದಿ: ತೆಲಂಗಾಣ | ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ – 8 ಮಂದಿ ದುರ್ಮರಣ, ಹಲವರಿಗೆ ಗಾಯ

ಇದು ಶತ್ರು ರಾಷ್ಟ್ರಗಳ ಭೂಗತ ಕಮಾಂಡ್ ಸೆಂಟರ್‌ಗಳು, ಶಸ್ತ್ರಾಸ್ತ್ರ ಗೋದಾಮುಗಳು ಮತ್ತು ಪರಮಾಣು ಸೌಲಭ್ಯಗಳಂತಹ ಗುರಿಗಳನ್ನು ನಿಖರವಾಗಿ ಭೇದಿಸುವ ಗುರಿಯನ್ನು ಹೊಂದಿದೆ. DRDO ಈಗಾಗಲೇ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಯ ಯಶಸ್ಸನ್ನು ತೋರಿಸಿದೆ, ಇದು 450 ಕಿಮೀ ಗಿಂತಲೂ ಹೆಚ್ಚಿನ ವ್ಯಾಪ್ತಿ ಹೊಂದಿದೆ. ಆದರೆ, ಭೂಗತ ಗುರಿಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಸುಧಾರಿತ ತಂತ್ರಜ್ಞಾನದ ಅಗತ್ಯವಿದೆ. ಹೀಗಾಗಿ DRDO ತನ್ನ ಗಮನವನ್ನು ದೀರ್ಘ-ವ್ಯಾಪ್ತಿಯ, ಭೂಗತ ಗುರಿಗಳನ್ನು ಭೇದಿಸುವ ಕ್ಷಿಪಣಿಗಳ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ.

ಈ ಯೋಜನೆಯು ಭಾರತದ ರಾಷ್ಟ್ರೀಯ ಭದ್ರತೆಯನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದು ರಕ್ಷಣಾ ತಜ್ಞರು ಭಾವಿಸಿದ್ದಾರೆ. ಈ ಕ್ಷಿಪಣಿಗಳು ಭಾರತೀಯ ವಾಯುಪಡೆಯ ಸುಖೋಯ್-30 MKI ಮತ್ತು ರಫೇಲ್ ಯುದ್ಧ ವಿಮಾನಗಳಿಂದ ಉಡಾಯಿಸಬಹುದಾದಂತೆ ವಿನ್ಯಾಸಗೊಳಿಸಲಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಕೋಲ್ಕತ್ತಾ ಗ್ಯಾಂಗ್‌ ರೇಪ್ ಕೇಸ್ – ವಿದ್ಯಾರ್ಥಿನಿಯನ್ನು ಎಳೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share This Article