ಅಮೆರಿಕದಲ್ಲಿ ಆತಂಕ ಸೃಷ್ಟಿಸಿರುವ ಓಮಿಕ್ರಾನ್ ಉಪತಳಿ BQ.1 ಭಾರತದಲ್ಲಿ ಪತ್ತೆ

Public TV
1 Min Read

ಮುಂಬೈ: ಕೊರೊನಾ (Corona) ವೈರಸ್‌ ಭೀತಿಯಿಂದ ಹೊರ ಬಂದಿರುವ ಜನರು ದೀಪಾವಳಿ (Diwali) ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧವಾಗುತ್ತಿದ್ದಾರೆ. ಆದರೆ ಈ ನಡುವೆ ಅಮೆರಿಕದಲ್ಲಿ (America) ಹೆಚ್ಚು ಸೋಂಕು ಹರಡಲು ಕಾರಣವಾಗಿದ್ದ ಓಮಿಕ್ರಾನ್ (Omicron) ಉಪತಳಿ ‘BQ.1’ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ.

ಪುಣೆ (Pune) ಮೂಲದ ವ್ಯಕ್ತಿಯೊಬ್ಬರ ಕೊರೊನಾ ಸ್ಯಾಂಪಲ್‌ನ ಜೀನೋಮ್ ಪರೀಕ್ಷೆ ವೇಳೆ ಈ ಹೊಸ ಓಮಿಕ್ರಾನ್ ಉಪತಳಿ ಪತ್ತೆಯಾಗಿದೆ. ಈ ಬಗ್ಗೆ ರಾಜ್ಯ ಕಣ್ಗಾವಲು ಅಧಿಕಾರಿ ಪ್ರದೀಪ್ ಅವಟೆ ಮಾಹಿತಿ ನೀಡಿದ್ದು, ಹಬ್ಬದ ದಿನಗಳಲ್ಲಿ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

BQ.1 ಮತ್ತು BQ.1.1 ಓಮಿಕ್ರಾನ್‌ನ BA.5 ಉಪತಳಿಗಳಾಗಿವೆ. ಈ ಎರಡು ತಳಿಗಳು ಅಪಾಯಕಾರಿ ಎಂದು ವಿವರಿಸಲಾಗಿದೆ. ವ್ಯಾಕ್ಸಿನ್ ಶಕ್ತಿಯನ್ನು ಮೀರಿ ಹರಡುವ ಶಕ್ತಿ ಹೊಂದಿರುವ ಈ ತಳಿಗಳು ಅಮೆರಿಕದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 10% ಕ್ಕಿಂತ ಹೆಚ್ಚಿನ ಪ್ರಮಾಣವನ್ನು ಹೊಂದಿದೆ.

ಅ. 16ರಂದು ಕೊನೆಗೊಂಡ ವಾರದಲ್ಲಿ ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳು 17.7% ರಷ್ಟು ಹೆಚ್ಚಾಗಿದೆ. ಸೋಮವಾರ, ರಾಜ್ಯವು 201 ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಮಹಾರಾಷ್ಟ್ರದಲ್ಲಿ (Maharashtra) ಸಾವಿನ ಪ್ರಮಾಣ 1.82% ರಷ್ಟಿದೆ. ಪುಣೆಯಲ್ಲಿ 23 ಹೊಸ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ

OMICRON Karnataka

ಥಾಣೆ, ರಾಯಗಢ ಮತ್ತು ಮುಂಬೈಗೆ ಪ್ರಕರಣಗಳ ಹೆಚ್ಚಳವು ಸೀಮಿತವಾಗಿದೆ. ವಿಶೇಷವಾಗಿ ಹಬ್ಬ ಹರಿದಿನಗಳಲ್ಲಿ ಪ್ರಕರಣಗಳು ಹೆಚ್ಚಾಗಬಹುದು ಎಂದು ಪ್ರದೀಪ್ ಅವಟೆ ಆತಂಕ ವ್ಯಕ್ತಪಡಿಸಿದ್ದಾರೆ. ಜ್ವರ ತರಹದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಆದಷ್ಟು ಬೇಗ ವೈದ್ಯಕೀಯ ಸಲಹೆ ಪಡೆಯಿರಿ, ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆಯನ್ನು ಪಾಲಿಸಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಅಪ್ಪನಾಣೆ ಇನ್ನೂ ಐದು ವರ್ಷ ನಾನೇ MLA ಆಗಿರ್ತೀನಿ: ಶ್ರೀನಿವಾಸ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *