ಭಾರತಕ್ಕೆ ಮೋಸ – ಚೀಟಿಂಗ್‌ ಕತಾರ್‌ ವಿರುದ್ಧ ಅಭಿಮಾನಿಗಳು ಕೆಂಡ

By
2 Min Read

ದೋಹಾ: ಏಷ್ಯನ್‌ ಚಾಂಪಿಯನ್‌ ಕತಾರ್‌ (Qatar) ತಂಡದ ಮೋಸದ ಆಟದಿಂದ 2026ರ ಫಿಫಾ ವಿಶ್ವಕಪ್‌ ಅರ್ಹತಾ ಟೂರ್ನಿಯಿಂದ (FIFA WC Qualifiers) ಭಾರತ ಹೊರಬಿದ್ದಿದೆ.

ಅರ್ಹತಾ ಟೂರ್ನಿಯ 2ನೇ ಹಂತದ ಕೊನೆಯ ಪಂದ್ಯದ 75 ನಿಮಿಷದಲ್ಲಿ ನಡೆದ ಮೋಸದಿಂದಾಗಿ ಭಾರತದ (India) ಕನಸು ನುಚ್ಚುನೂರಾಯಿತು. ಕತಾರ್‌ ವಿರುದ್ಧ 2-1 ಗೋಲುಗಳಿಂದ ಸೋತ ಭಾರತ ಟೂರ್ನಿಯಿಂದ ನಿರ್ಗಮಿಸಿತು.

37ನೇ ನಿಮಿಷದಲ್ಲಿ ಚಾಂಗ್ಟೆ ಗೋಲು ಹೊಡೆಯುವ ಮೂಲಕ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. 75 ನಿಮಿಷದಲ್ಲಿ ಕತಾರ್‌ ಗೋಲ್‌ ಗಳಿಸಲು ಮುಂದಾಯಿತು. ಈ ವೇಳೆ ಚೆಂಡು ಗೆರೆಯನ್ನು ದಾಟಿ ಹೊರಗಡೆ ಹೋಗಿತ್ತು. ಬಾಲ್‌ ಹೊರಗಡೆ ಹೋಗಿದ್ದರೂ ಕತಾರ್‌ ಆಟಗಾರ ಅಲ್‌ ಹಸನ್‌ ಚೆಂಡನ್ನು ಎಳೆದು ಯೂಸುಫ್‌ ಅಯೇಮ್‌ ನೀಡಿದರು. ಯೂಸೂಫ್‌ ಅವರು ಚೆಂಡನ್ನು ಗೋಲ್‌ ಪೆಟ್ಟಿಗೆ ತಳ್ಳಿದರು. ಗೋಲ್‌ ಹೊಡೆದ ಬಳಿಕ ಕತಾರ್‌ ಆಟಗಾರರು ಸಂಭ್ರಮಿಸತೊಡಗಿದರು.  ಇದನ್ನೂ ಓದಿ: India vs Pakistan: ಟ್ರ್ಯಾಕ್ಟರ್‌ ಮಾರಿ ಕ್ರಿಕೆಟ್‌ ನೋಡಲು ಬಂದ ಪಾಕ್ ಅಭಿಮಾನಿಗೆ ನಿರಾಸೆ


ಕೂಡಲೇ ಭಾರತದ ಗೋಲ್‌ ಕೀಪ್‌ ಪ್ರೀತ್‌ ಸಂಧು ರೆಫ್ರಿ ಬಳಿ ಹೋಗಿ ಬಾಲ್‌ ಚೆಂಡು ದಾಟಿ ಹೊರಗಡೆ ಬಂದಿದೆ. ಹೀಗಾಗಿ ಈ ಗೋಲನ್ನು ಪರಿಗಣಿಸಬಾರದು ಎಂದು ಪರಿ ಪರಿಯಾಗಿ ಮನವಿ ಮಾಡಿದರು. ಭಾರತದ ಮನವಿಯನ್ನು ರೆಫ್ರಿ ಪುರಸ್ಕರಿಸಲಿಲ್ಲ. 85ನೇ ನಿಮಿಷದಲ್ಲಿ ಕತಾರ್‌ ಮತ್ತೊಂದು ಗೋಲು ಹೊಡೆದು 2 ಗೋಲುಗಳ ಮುನ್ನಡೆ ಪಡೆದು ಕೊನೆಗೆ ಜಯ ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಕುವೈತ್ ಗೆದ್ದಿದ್ದು ‘ಎ’ ಗುಂಪಿನಿಂದ 2ನೇ ತಂಡವಾಗಿ ಅರ್ಹತಾ ಟೂರ್ನಿಯ 3ನೇ ಸುತ್ತಿಗೇರಿದೆ.

ಈಗ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಫುಟ್‌ಬಾಲ್‌ ಅಭಿಮಾನಿಗಳು ಸಿಟ್ಟಾಗಿ ಕತಾರ್‌ ಮತ್ತು ರೆಫ್ರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಕತಾರ್‌ ಈಗಾಗಲೇ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಹೀಗಿರುವಾಗ ಮೋಸ ಮಾಡುವ ಅಗತ್ಯ ಏನಿತ್ತು ಎಂದು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

Share This Article