ಪಾಕ್‌ಗೆ ಬೆಂಬಲ ನೀಡಿದ ಟರ್ಕಿ, ಅಜೆರ್ಬೈಜಾನ್‌ಗೆ ಭಾರತ ಪೆಟ್ಟು – 2 ದೇಶಗಳಿಗೆ ಟೂರ್‌ ಪ್ಯಾಕೇಜ್‌ ಸ್ಥಗಿತ

Public TV
1 Min Read

ನವದೆಹಲಿ: ಉಗ್ರರ ಪೋಷಕ ಪಾಕಿಸ್ತಾನಕ್ಕೆ (Pakistan) ಬೆಂಬಲ ನೀಡಿದ ಟರ್ಕಿ (Turkey) ಮತ್ತು ಅಜೆರ್ಬೈಜಾನ್‌ಗೆ (Azerbaijan) ಭಾರತ ಪೆಟ್ಟು ನೀಡಿದೆ. ಪ್ರಮುಖ ಪ್ರಯಾಣ ಕಂಪನಿಗಳು ಈ ಎರಡೂ ದೇಶಗಳಿಗೆ ಎಲ್ಲಾ ಪ್ಯಾಕೇಜ್‌ಗಳನ್ನು ಸ್ಥಗಿತಗೊಳಿಸಿವೆ.

ಭಯೋತ್ಪಾದನೆ ವಿರುದ್ಧ ಭಾರತ ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ನಡೆಸುತ್ತಿದೆ. ಪರಿಣಾಮವಾಗಿ ಭಾರತ ಮತ್ತು ಪಾಕ್‌ ನಡುವೆ ಉದ್ವಿಗ್ನತೆ ತೀವ್ರಗೊಂಡಿದೆ. ಇಂತಹ ಸನ್ನಿವೇಶದಲ್ಲಿ ಉಗ್ರರ ಬೆಂಬಲಿಸುವ ಪಾಕಿಸ್ತಾನಕ್ಕೆ ಈ ಎರಡು ದೇಶಗಳು ಬೆಂಬಲ ಘೋಷಿಸಿವೆ. ಅದರ ಬೆನ್ನಲ್ಲೇ ಈ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ದಾಳಿ ವೇಳೆ ಕುತಂತ್ರ ಮಾಡಿದ್ರೂ ಭಾರತದ ಉತ್ತರಕ್ಕೆ ಪಾಕ್‌ ತತ್ತರ!

TURKEY PRESIDENT

ಈಸ್‌ಮೈಟ್ರಿಪ್, ಕಾಕ್ಸ್ & ಕಿಂಗ್ಸ್ ಹಾಗೂ ಟ್ರಾವೊಮಿಂಟ್, ಟರ್ಕಿ ಮತ್ತು ಅಜೆರ್ಬೈಜಾನ್‌ಗೆ ಬುಕಿಂಗ್‌ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಇದು ರಾಷ್ಟ್ರೀಯ ಭಾವನೆಗೆ ಅನುಗುಣವಾಗಿ ಮತ್ತು ಸುರಕ್ಷತೆ ಮತ್ತು ರಾಜತಾಂತ್ರಿಕ ಪರಿಣಾಮಗಳ ಬಗ್ಗೆ ಹೆಚ್ಚುತ್ತಿರುವ ಕಳವಳವನ್ನು ಪ್ರತಿಬಿಂಬಿಸುತ್ತದೆ.

ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಅಜೆರ್ಬೈಜಾನ್, ಉಜ್ಬೇಕಿಸ್ತಾನ್ ಮತ್ತು ಟರ್ಕಿಗೆ ಎಲ್ಲಾ ಹೊಸ ಪ್ರಯಾಣ ಕೊಡುಗೆಗಳನ್ನು ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ. ನಮಗೆ ಮತ್ತು ನಮ್ಮ ದೇಶದ ಜನರಿಗೆ ಬದ್ಧತೆಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ” ಎಂದು ಕಾಕ್ಸ್ & ಕಿಂಗ್ಸ್‌ನ ನಿರ್ದೇಶಕ ಕರಣ್ ಅಗರ್ವಾಲ್ ಹೇಳಿದ್ದಾರೆ. ಇದನ್ನೂ ಓದಿ: ದೇಶದ ಕರೆಗೆ ಹನಿಮೂನ್‌ ಮೊಟಕುಗೊಳಿಸಿ ಸೇವೆಗೆ ತೆರಳಿದ ಯೋಧ

ಪರಿಸ್ಥಿತಿ ಸ್ಪಷ್ಟವಾಗುವವರೆಗೆ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವಂತೆ ಅವರು ಭಾರತೀಯ ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ. ಈ ಅನಿಶ್ಚಿತ ಸನ್ನಿವೇಶದಲ್ಲಿ ಪ್ರಯಾಣಿಕರ ಸುರಕ್ಷತೆಯ ಮಹತ್ವವನ್ನು ಈಸ್‌ಮೈಟ್ರಿಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ನಿಶಾಂತ್ ಪಿಟ್ಟಿ ಒತ್ತಿ ಹೇಳಿದ್ದಾರೆ.

Share This Article