ಭಾರತೀಯ ರೆಸ್ಟೊರೆಂಟ್‍ನಿಂದ ಫ್ರಾನ್ಸ್ ಗೆ ಖಾಸಗಿ ವಿಮಾನದಲ್ಲಿ ಚಿಕನ್ ಕರ್ರಿ ಡೆಲಿವರಿ!

Public TV
2 Min Read

ಪ್ಯಾರಿಸ್: ಕೆಲವೊಮ್ಮೆ ಆ್ಯಪ್ ಅಥವಾ ಆನ್‍ಲೈನ್ ಮೂಲಕ ಊಟ ಆರ್ಡರ್ ಮಾಡುವಾಗ ಕೆಲವು ಪ್ರದೇಶಗಳಿಗೆ ಡೆಲಿವರಿ ನೀಡಲು ಸಾಧ್ಯವಿಲ್ಲ ಅನ್ನೋದನ್ನ ಕೇಳಿ ಬೇಸವಾಗಿರುತ್ತೆ. ಆದ್ರೆ ಇಂಗ್ಲೆಂಡ್‍ನಲ್ಲಿನ ಭಾರತೀಯ ರೆಸ್ಟೊರೆಂಟ್‍ವೊಂದು 500 ಮೈಲಿ ದೂರಕ್ಕೆ ಖಾಸಗಿ ವಿಮಾನದಲ್ಲಿ ಚಿಕನ್ ಕರ್ರಿಯನ್ನ ಡೆಲಿವರಿ ಮಾಡಿದೆ ಅಂದ್ರೆ ನೀವು ನಂಬಲೇಬೇಕು.

ಇಂಗ್ಲೆಂಡ್ ನ ಹ್ಯಾಂಪ್‍ಶೈರ್‍ನಲ್ಲಿರುವ ಆಕಾಶ್ ರೆಸ್ಟೊರೆಂಟಿನಿಂದ ಬ್ರಿಟಿಷ್ ವ್ಯಕ್ತಿಯೊಬ್ಬರಿಗಾಗಿ ಚಿಕನ್ ಫಾಲ್ ಕರ್ರಿ ಜೊತೆಗೆ ಮತ್ತಷ್ಟು ಖಾದ್ಯಗಳನ್ನ ಫ್ರಾನ್ಸ್ ನ ಬಾರ್ಡಿಯಾಕ್ಸ್ ಗೆ ವಿಮಾನದ ಮೂಲಕ ಡೆಲಿವರಿ ಮಾಡಲಾಗಿದೆ.

ಫ್ರಾನ್ಸ್ ನಲ್ಲಿ ವಾಸವಿರುವ ಪೈಲಟ್ ಜೇಮ್ಸ್ ಎಮೆರಿ ಹಾಗೂ ಅವರ ಸ್ನೇಹಿತರಿಗಾಗಿ ಊಟವನ್ನ 500 ಕಿ.ಮೀ ದೂರ ಕಳಿಸಿಕೊಡಲಾಗಿದೆ. 100 ಚಿಕನ್ ಕರ್ರಿ ಜೊತೆಗೆ, 170 ಡಿಶ್‍ಗಳು, 75 ಪ್ಲೇಟ್ ಅನ್ನ, 100 ಹಪ್ಪಳ ಹಾಗೂ 10 ಮಾವಿನಕಾಯಿ ಚಟ್ನಿಯನ್ನ ಆರ್ಡರ್ ಮಾಡಲಾಗಿತ್ತು. ಆಕಾಶ್ ರೆಸ್ಟೊರೆಂಟ್ ತನ್ನ ಫೇಸ್‍ಬುಕ್ ಪೇಜಿನಲ್ಲಿ ಚಿಕನ್ ಕರ್ರಿಯನ್ನ ಫ್ರಾನ್ಸ್ ಗೆ ಕಳಿಸಿಕೊಡುತ್ತಿರುವ ವಿಡಿಯೋಗಳನ್ನ ಹಂಚಿಕೊಂಡಿದೆ.

ನಾನು ಕಳೆದ 20 ವರ್ಷಗಳಿಂದ ಆಕಾಶ್ ರೆಸ್ಟೊರೆಂಟಿನ ಗ್ರಾಹಕನಾಗಿದ್ದೇನೆ. ಇಲ್ಲಿಗೆ ಬಂದಾಗಲೆಲ್ಲಾ ಫ್ರಾನ್ಸ್ ನಲ್ಲಿ ಸಿಗೋ ಭಾರತೀಯ ಊಟದ ರುಚಿ ಅಷ್ಟೊಂದು ಚೆನ್ನಾಗಿರಲ್ಲ ಅಂತ ದೂರುತ್ತಿರುತ್ತೇನೆ ಅಂತ ಎಮೆರಿ ಹೇಳಿದ್ದಾರೆ. ಎಮೆರಿ ಅತಿಥಿಗಳಂತೂ ಆಕಾಶ್ ರೆಸ್ಟೊರೆಂಟಿನ ಭಾರತೀಯ ಖಾದ್ಯಗಳನ್ನ ಸವಿದು ಆಹಾ… ಎಂದಿದ್ದಾರೆ.

ಕರ್ರಿಯ ಒಟ್ಟು ಮೊತ್ತ 600-700 ಪೌಂಡ್ಸ್ (ಅಂದಾಜು 50-60ಸಾವಿರ ರೂ.) ಆಗುತ್ತದೆ. ಇವರು ನಮಗೆ ಪ್ರತಿ ತಲೆಗೆ 32 ಕ್ವಿಡ್(ಅಂದಾಜು 2800 ರೂ.) ನೀಡುತ್ತಿದ್ದಾರೆ. 12 ಪೌಂಡ್ಸ್ ಗಿಂತ ಹೆಚ್ಚಿನ ಮೊತ್ತದ ಆರ್ಡರ್‍ಗೆ ಫ್ರೀ ಡೆಲಿವರಿ ನೀಡಲಾಗುತ್ತೆ. ಅದಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಆಕಾಶ್ ರೆಸ್ಟೊರೆಂಟಿನ ಫಾಸ್ ಅಹಮದ್ ಹೇಳಿದ್ದಾರೆ.

ವಿಮಾನದ ಬಾಡಿಗೆ ಮೊತ್ತವೇ 15 ಸಾವಿರ ಪೌಂಡ್ಸ್(ಅಂದಾಜು 13 ಲಕ್ಷ ರೂ.) ಆಗುತ್ತದೆ. ಆದ್ರೆ ಸ್ಪಾನ್ಸರರ್‍ಗಳು ಇದಕ್ಕೆ ನೆರವು ನೀಡಿದ್ದಾರೆ. ತೆಗೆದುಕೊಂಡು ಹೋದ ಊಟವನ್ನ 50 ಅತಿಥಿಗಳಿಗೆ ಬಡಿಸಲಾಗಿದೆ ಎಂದು ವರದಿಯಾಗಿದೆ.

ಇದರಿಂದ ಆಕಾಶ್ ರೆಸ್ಟೊರೆಂಟ್ ಹಾಗೂ ಫಾಸ್ ಅಹಮದ್ ಅವರಿಗೆ ವಿದೇಶದಲ್ಲಿ ಭಾರೀ ಪಬ್ಲಿಸಿಟಿಯೂ ಸಿಕ್ಕಿದೆ. ಕರ್ರಿ ಬೈ ಏರ್ ಎಂಬ ಹ್ಯಾಶ್‍ಟ್ಯಾಗ್‍ನೊಂದಿಗೆ ವರದಿಗಳು ಪ್ರಸಾರವಾಗಿವೆ.

https://www.facebook.com/TheAkashRest/videos/10156208418829235/

https://www.facebook.com/TheAkashRest/videos/10156208276479235/

 

Share This Article
Leave a Comment

Leave a Reply

Your email address will not be published. Required fields are marked *