ಐಪಿಎಲ್‌ ಹಬ್ಬದಲ್ಲಿ ಏನೆಲ್ಲಾ ವಿಶೇಷ – ಚೊಚ್ಚಲ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿ ಆರ್‌ಸಿಬಿ ಕಲಿಗಳು

Public TV
4 Min Read

– ಹಾರ್ದಿಕ್‌ ನಾಯಕತ್ವದಲ್ಲಿ ರೋಹಿತ್‌ ಅಖಾಡಕ್ಕೆ
– ಧೋನಿಗೆ ಕೊನೆಯ ಐಪಿಎಲ್‌ ಆಗುತ್ತಾ?
– ನೆಚ್ಚಿನ ತಾರೆಯರಿಗಾಗಿ ಕಾದು ಕುಳಿತಿದ್ದಾರೆ ಫ್ಯಾನ್ಸ್‌

ಚೆನ್ನೈ: 17ನೇ ಆವೃತ್ತಿಯ ಐಪಿಎಲ್‌ ಟೂರ್ನಿ (IPL 2024) ಆರಂಭಕ್ಕೆ ಕ್ಷಣಗಣನೆ ಬಾಕಿಯಿದೆ. ಚೆನ್ನೈನ ಚಿದಂಬರಂ (ಚೆಪಾಕ್) ಕ್ರಿಕೆಟ್​ ಕ್ರೀಡಾಂಗಣದಲ್ಲಿ ಶುಕ್ರವಾರ ಅದ್ಧೂರಿ ಸಮಾರಂಭದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದ್ದು, ಇನ್ನೆರಡು ತಿಂಗಳ ಕಾಲ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.

ಚುನಾವಣೆ ಹೊರತಾಗಿಯೂ ಈ ಬಾರಿ ಸಂಪೂರ್ಣ ಐಪಿಎಲ್‌ ಲೀಗ್‌ ಭಾರತದಲ್ಲೇ ಆಯೋಜಿಸುವುದಾಗಿ ಬಿಸಿಸಿಐ (BCCI) ಕಾರ್ಯದರ್ಶಿ ಜಯ್‌ ಶಾ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಮೊದಲ 15 ದಿನಗಳ ಕಾಲ ನಡೆಯಲಿರುವ 21 ಪಂದ್ಯಗಳಿಗೆ ಮಾತ್ರ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಉಳಿದ ಪಂದ್ಯಗಳ ವೇಳಾಪಟ್ಟಿಯೂ ಶೀಘ್ರದಲ್ಲೇ ಪ್ರಕಟವಾಗುವ ನಿರೀಕ್ಷೆಯಿದೆ.

ಶುಕ್ರವಾರ (ಮಾ.22) ಉದ್ಘಾಟನಾ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ 3 ಬಾರಿ ರನ್ನರ್‌ ಅಪ್‌ ಪ್ರಶಸ್ತಿ ಪಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು (RCB) ಮುಖಾಮುಖಿಯಾಗಲಿವೆ. ಆರ್‌ಸಿಬಿ ಮತ್ತು ಚೆನ್ನೈ ನಡುವೆ 31 ಪಂದ್ಯಗಳು ನಡೆದಿದ್ದು, 20 ಪಂದ್ಯಗಳಲ್ಲಿ ಚೆನ್ನೈ, 10 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿದೆ.

ಧೋನಿಗೆ ಇದು ಕೊನೇ ಐಪಿಎಲ್‌?
2023ರ ಟೂರ್ನಿ ಆರಂಭದಿಂದಲ್ಲೇ ನಿವೃತ್ತಿಯ ಸುಳಿವು ನೀಡಿದ್ದ ಸಿಎಸ್‌ಕೆ ನಾಯಕ ಎಂ.ಎಸ್‌ ಧೋನಿ (MS Dhoni) ಅವರಿಗೆ 17ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಕೊನೇ ಲೀಗ್‌ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ ಮಹಿ ಆಪ್ತರು ಇನ್ನೂ ಎರಡು ಸೀಸನ್‌ ಆಡಬಹುದು ಎಂದು ಸುಳಿವು ಕೊಟ್ಟಿದ್ದಾರೆ. ಈ ನಡುವೆ ಆಸೀಸ್‌ ಬ್ಯಾಟರ್‌ ಡೇವಿಡ್‌ ವಾರ್ನರ್‌, ಭಾರತದ ಅಮಿತ್‌ ಮಿಶ್ರಾ, ಶಿಖರ್‌ ಧವನ್‌, ಪಿಯೂಶ್‌ ಚಾವ್ಲಾ ಅವರಿಗೂ ಇದು ಕೊನೆಯ ಟೂರ್ನಿ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ನಾಯಕನಲ್ಲದ ರೋಹಿತ್‌ನತ್ತ ಚಿತ್ತ:
ಸದ್ಯ ಮುಂಬೈ ತಂಡವನ್ನು 5 ಬಾರಿ ಚಾಂಪಿಯನ್‌ ಪಟ್ಟಕ್ಕೇರಿಸಿರುವ ರೋಹಿತ್‌ ಶರ್ಮಾ (Rohit Sharma) 17ನೇ ಆವೃತ್ತಿಯಲ್ಲಿ ಹಾರ್ದಿಕ್‌ ಪಾಂಡ್ಯ ಅವರ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಮುಂದಿನ ಜೂನ್‌ ತಿಂಗಳಲ್ಲೇ ಟಿ20 ವಿಶ್ವಕಪ್‌ ಹಿನ್ನೆಲೆ ರೋಹಿತ್‌ ಅವರ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಹಾರ್ದಿಕ್‌ ಪಾಂಡ್ಯ (Hardik Pandya) ಅವರಿಗೆ ನಾಯಕತ್ವದ ಹೊಣೆ ನೀಡಲಾಗಿದೆ ಎಂದು ಹೇಳಲಾಗಿದೆ. ಹಾಗಾಗಿ ನಾಯಕನಲ್ಲದ ಹಿಟ್‌ಮ್ಯಾನ್‌ ಪ್ರದರ್ಶನ ಅನ್ನೋದು ಎಲ್ಲರ ಕುತೂಹಲ.

ತಾರೆಯರ ಕಂಬ್ಯಾಕ್‌:
2022ರ ಡಿಸೆಂಬರ್‌ನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿ 4 ತಿಂಗಳ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಸ್ಟಾರ್‌ ಕ್ರಿಕೆಟಿಗ ರಿಷಭ್‌ ಪಂತ್‌ ಮತ್ತೆ ಡೆಲ್ಲಿ ತಂಡದ ನಾಯಕನಾಗಿ ಕಂಬ್ಯಾಕ್‌ ಮಾಡಿದ್ದಾರೆ. ಜೊತೆಗೆ ಏಕದಿನ ವಿಶ್ವಕಪ್‌ ಟೂರ್ನಿ ವೇಳೆ ಗಾಯಗೊಂಡಿದ್ದ ಹಾರ್ದಿಕ್‌ ಪಾಂಡ್ಯ, ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ವೇಳೆ ಗಾಯಗೊಂಡಿದ್ದ ಕೆ.ಎಲ್‌ ರಾಹುಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಕೂಡ ನಾಯಕರಾಗಿ ಕಂಬ್ಯಾಕ್‌ ಮಾಡಿದ್ದಾರೆ.

ಉದ್ಘಾಟನೆಗೆ ಬಾಲಿವುಡ್‌ ತಾರೆಯರ ದಂಡು:
ಮಾ.22 ರಂದು ಚೇಪಾಕ್‌ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ಆಯೋಜಿಸಿದ್ದು, ಸಂಜೆ 6:30ಕ್ಕೆ ಸಮಾರಂಭ ಆರಂಭವಾಗಲಿದೆ. ಬಾಲಿವುಡ್‌ ನಟರಾದ ಅಕ್ಷಯ್‌ ಕುಮಾರ್‌, ಟೈಗರ್‌ ಶ್ರಾಫ್‌, ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌ ರೆಹಮಾನ್‌ ಖ್ಯಾತ ಗಾಯಕ ಸೋನು ನಿಗಮ್‌ ಸೇರಿದಂತೆ ಪ್ರಮುಖ ತಾರಾ ಬಳಗ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಯಾರ ನಡುವೆ, ಯಾವ ದಿನ, ಎಲ್ಲಿ ಪಂದ್ಯ?
1. ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಮಾರ್ಚ್ 22 ಚೆನ್ನೈ,
2. ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 23, ಮೊಹಾಲಿ,
3. ಕೋಲ್ಕತ್ತಾ ನೈಟ್​ ರೈಡರ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 23, ಕೋಲ್ಕತ್ತಾ
4. ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಮಾರ್ಚ್ 24, ಜೈಪುರ
5. ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್, ಮಾರ್ಚ್ 24, ಅಹಮದಾಬಾದ್
6. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಮಾರ್ಚ್ 25, ಬೆಂಗಳೂರು
7. ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ಮಾರ್ಚ್ 26, ಚೆನ್ನೈ
8. ಸನ್​ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್, ಮಾರ್ಚ್ 27, ಹೈದರಾಬಾದ್
9. ಆರ್‌ಆರ್‌ vs ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 28 ಜೈಪುರ
10. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್​ ರೈಡರ್ಸ್, ಮಾರ್ಚ್ 29 ಬೆಂಗಳೂರು
11. ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್, ಮಾರ್ಚ್ 30, ಲಕ್ನೋ
12. ಗುಜರಾತ್ ಟೈಟಾನ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 31, ಅಹಮದಾಬಾದ್
13. ಡೆಲ್ಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಮಾರ್ಚ್ 31, ವಿಶಾಖಪಟ್ಟಣಂ
14. ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ಏಪ್ರಿಲ್ 1, ಮುಂಬೈ
15. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್, ಏಪ್ರಿಲ್ 2, ಬೆಂಗಳೂರು
16. ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್​ ರೈಡರ್ಸ್, ಏಪ್ರಿಲ್ 3, ವಿಶಾಖಪಟ್ಟಣಂ
17. ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್, ಏಪ್ರಿಲ್ 4, ಅಹಮದಾಬಾದ್
18. ಸನ್​ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್, ಏಪ್ರಿಲ್ 5, ಹೈದರಾಬಾದ್
19. ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಏಪ್ರಿಲ್ 6, ಜೈಪುರ
20. ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಏಪ್ರಿಲ್ 7, ಮುಂಬೈ
21. ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್, ಏಪ್ರಿಲ್ 7, ಲಕ್ನೋ

Share This Article