ದೇವರೇ ನಮ್ಮಿಂದ ತಪ್ಪಾಗಿದೆ, ದಯವಿಟ್ಟು ಕಾಪಾಡು – ಸಂಸತ್‌ನಲ್ಲಿ ಕಣ್ಣೀರಿಟ್ಟ ಪಾಕ್‌ ಸಂಸದ

By
1 Min Read

ಇಸ್ಲಾಮಾಬಾದ್‌: ದೇವರೇ ನಾವು ತಪ್ಪಿತಸ್ಥರು, ನಮ್ಮನ್ನು ದಯವಿಟ್ಟು ರಕ್ಷಿಸು ಎಂದು ಪಾಕ್‌ (Pakistan) ಸಂಸದ ತಾಹಿರ್ ಇಕ್ಬಾಲ್ (Tahir Iqbal) ಸಂಸತ್ತಿನಲ್ಲಿ ಕಣ್ಣೀರಿಟ್ಟಿದ್ದಾನೆ.

ಭಾರತದ ಆಪರೇಷನ್ ಸಿಂಧೂರ (Operation Sindoor) ನಂತರ ಪಾಕ್‌ ತತ್ತರಿಸಿದೆ. ಈ ಬಗ್ಗೆ ಪಾಕಿಸ್ತಾನದ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದೆ. ಸಂಸತ್ತಿನಲ್ಲಿ ಚರ್ಚೆಯ ಸಮಯದಲ್ಲಿ, ಸಂಸದ ತಾಹಿರ್ ಇಕ್ಬಾಲ್ ಅಲ್ಲಾನು ನಮ್ಮನ್ನು ರಕ್ಷಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: India Strikes | ಯುಸ್‌ ನಾಗರಿಕರು ಪಾಕ್‌ ತೊರೆಯುವಂತೆ ಅಮೆರಿಕ ರಾಯಭಾರ ಕಚೇರಿ ಸೂಚನೆ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ತೀವ್ರಗೊಂಡಿದೆ. ಈ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ, ತಕ್ಕ ಉತ್ತರ ಕೊಟ್ಟಿದೆ. ಈ ದಾಳಿಯಲ್ಲಿ ನೂರಕ್ಕೂ ಹೆಚ್ಚು ಉಗ್ರರ ಹತ್ಯೆಯಾಗಿದೆ.

ಈ ದಾಳಿಗೆ ಪ್ರತಿಯಾಗಿ ಪಾಕ್‌ ಸೇನೆ ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸುತ್ತಿದೆ. ಪಾಕ್‌ನ ದುಷ್ಕೃತ್ಯಕ್ಕೆ 15ಕ್ಕೂ ಹೆಚ್ಚು ನಾಗರೀಕರು ಸಾವಿಗೀಡಾಗಿದ್ದಾರೆ. 43 ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಪಾಕ್‌ ಪುಂಡಾಟಕ್ಕೆ ಭಾರತ ತಕ್ಕ ಉತ್ತರ ನೀಡಿದ್ದು, ಪಾಕ್‌ ಏರ್‌ಡಿಫೆನ್ಸ್‌ ಸಿಸ್ಟಮ್‌ನ್ನು ಹೊಡೆದು ಹಾಕಿದೆ. ಇದನ್ನೂ ಓದಿ: ಪಾಕಿಸ್ತಾನದ HQ-9 ವಾಯು ರಕ್ಷಣಾ ಕ್ಷಿಪಣಿ ಉಡಾವಣಾ ಕೇಂದ್ರಗಳೇ ಉಡೀಸ್‌

Share This Article