ಹುಟ್ಟುಹಬ್ಬದಂದೇ ಅಮೆರಿಕದ ಜಲಪಾತದಲ್ಲಿ ಮುಳುಗಿ ಭಾರತ ಮೂಲದ ಟೆಕ್ಕಿ ಸಾವು

1 Min Read

ವಾಷಿಂಗ್ಟನ್: 26ನೇ ವರ್ಷದ ಹುಟ್ಟುಹಬ್ಬದಂದೇ ಜಲಪಾತದಲ್ಲಿ (Waterfall) ಮುಳುಗಿ ಭಾರತೀಯ ಮೂಲದ ಟೆಕ್ಕಿ (Techie) ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ (America) ನಡೆದಿದೆ.

ಆಂಧ್ರಪ್ರದೇಶದ ಸಾಫ್ಟ್‌ವೇರ್ ಎಂಜಿನಿಯರ್ ಸಿಂಗಿರೆಡ್ಡಿ ಸಾಯಿ ಶ್ರೀಹರಿಕೃಷ್ಣ (26) ಮೃತ ಟೆಕ್ಕಿ. ಶನಿವಾರ ಘಟನೆ ನಡೆದಿದೆ. ಅಂದು ಹರಿಕೃಷ್ಣ ಅವರ ಹುಟ್ಟುಹಬ್ಬ ಹಿನ್ನೆಲೆ ಸ್ನೇಹಿತರೊಂದಿಗೆ ಕ್ಯಾಲಿಫೋರ್ನಿಯಾದ (California) ಜಲಪಾತಕ್ಕೆ ಹೋಗಿದ್ದರು. ಇದನ್ನೂ ಓದಿ: ಹಾರ್ದಿಕ್ ವಿಕೆಟ್‌ ಉರುಳಿದಾಗ ಕುಣಿದು ಕುಪ್ಪಳಿಸಿದ ಅಣ್ಣ ಕೃನಾಲ್ ಪಾಂಡ್ಯ – ಬ್ರದರ್‌ vs ಬ್ರದರ್ ವಿಡಿಯೋ ವೈರಲ್‌!

ಸಿಂಗಿರೆಡ್ಡಿ ಸಾಯಿ ಶ್ರೀಹರಿಕೃಷ್ಣ ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ, ಕೆಲವು ತಿಂಗಳ ಹಿಂದಷ್ಟೇ ಸೇಂಟ್ ಲೂಯಿಸ್‌ನಲ್ಲಿರುವ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಫೋನ್‌ ಬಳಸಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ರೋಮಿ – RR ವ್ಯವಸ್ಥಾಪಕನಿಗೆ ಬಿಸಿಸಿಐ ನೋಟಿಸ್‌; ಕಾಡ್ತಿದೆಯಾ ಬ್ಯಾನ್‌ ಭೀತಿ?

ಹರಿಕೃಷ್ಣ ಅವರಿಗೆ ಈಜುವುದೆಂದರೆ ಇಷ್ಟ. ಆದ್ದರಿಂದ ನೀರಿಗೆ ಇಳಿದರು. ಕೆಲವೇ ನಿಮಿಷಗಳಲ್ಲಿ, ಹರಿಕೃಷ್ಣ ನೀರಿನಲ್ಲಿ ಮುಳುಗಿದ್ದಾರೆ ಎಂದು ಸ್ನೇಹಿತರು ತಿಳಿಸಿದ್ದಾರೆ. ಕೂಡಲೇ ಅವರನ್ನು ರಕ್ಷಿಸಲು ಸ್ನೇಹಿತರು ಪ್ರಯತ್ನಿಸಿದರೂ, ನೀರಿನ ಬಲದಿಂದಾಗಿ ಅವರನ್ನು ಕಾಪಾಡಲು ಸಾಧ್ಯವಾಗಲಿಲ್ಲ. ನಂತರ ರಕ್ಷಣಾ ತಂಡ ಸ್ಥಳಕ್ಕೆ ತಲುಪಿ ಶೋಧ ಕಾರ್ಯಾಚರಣೆ ನಡೆಸಿ ಹರಿಕೃಷ್ಣ ಅವರ ದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಇದನ್ನೂ ಓದಿ: ಗುಜರಾತ್ ಹೈವೇಯಲ್ಲಿ ಯಾತ್ರಿಕರ ಮೇಲೆ ಹರಿದ ಟ್ರಕ್ – 7 ಮಂದಿ ದುರ್ಮರಣ

ಯುವ ಎಂಜಿನಿಯರ್ ಹಠಾತ್ ಸಾವಿನಿಂದಾಗಿ ಅವರ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ಸದ್ಯ ಹರಿಕೃಷ್ಣ ಅವರ ಮೃತದೇಹವನ್ನು ಭಾರತಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ.‌ ಇದನ್ನೂ ಓದಿ: ಹಿಂದೂಗಳು ಅಂತ ಹೇಳಬಾರದು, ಪಂಚಮಸಾಲಿಗಳು ಪ್ರಬಲರಾಗುತ್ತಿರುವುದ್ದಕ್ಕೆ ಟಾರ್ಗೆಟ್‌: ವಚನಾನಂದ ಸ್ವಾಮೀಜಿ

Share This Article