ಹಮಾಸ್‌ ಜೊತೆ ಗುಂಡಿನ ಚಕಮಕಿ; ತಿಂಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಸಾವು

Public TV
1 Min Read

ಟೆಲ್‌ ಅವೀವ್‌: ಹಮಾಸ್ (Hamas) ಆಳ್ವಿಕೆಯಲ್ಲಿರುವ ಗಾಜಾ ಪಟ್ಟಿಯಲ್ಲಿ 34 ವರ್ಷದ ಭಾರತೀಯ ಮೂಲದ ಇಸ್ರೇಲಿ ಯೋಧ (Indian-Origin Soldier) ಹುತಾತ್ಮರಾಗಿದ್ದಾರೆ. ಇವರು ಭಾರತದ ಮಹಾರಾಷ್ಟ್ರ ಮೂಲದವರು.

ಮಾಸ್ಟರ್ ಸಾರ್ಜೆಂಟ್. (ರೆಸ್.) ಅಶ್ಡೋಡ್‌ನ ಗಿಲ್ ಡೇನಿಯಲ್ಸ್ ಮಂಗಳವಾರ ಗಾಜಾದಲ್ಲಿ ಹತ್ಯೆಯಾದರು. ಅವರ ಅಂತ್ಯಕ್ರಿಯೆಯನ್ನು ಬುಧವಾರ ಅವರ ಹುಟ್ಟೂರಿನ ಮಿಲಿಟರಿ ಸ್ಮಶಾನದಲ್ಲಿ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಕುರಾನ್‌ ಪ್ರತಿಗಳನ್ನು ಸುಡುವಂತಿಲ್ಲ – ಮಸೂದೆಗೆ ಡೆನ್ಮಾರ್ಕ್‌ ಸಂಸತ್‌ ಅನುಮೋದನೆ

ಗಾಜಾಪಟ್ಟಿಯಲ್ಲಿ ನಡೆದ ಹೋರಾಟದಲ್ಲಿ ಹತ್ಯೆಯಾದ ಇಬ್ಬರು ಸೈನಿಕರಲ್ಲಿ ಗಿಲ್‌ ಕೂಡ ಒಬ್ಬರು ಎಂದು ಇಸ್ರೇಲ್‌ ರಕ್ಷಣಾ ಪಡೆ ದೃಢಪಡಿಸಿದೆ. ‘ಈ ಕೆಟ್ಟ ಮತ್ತು ಕ್ರೂರ ಯುದ್ಧದಲ್ಲಿ ಇಸ್ರೇಲ್ ಅನೇಕ ಸೈನಿಕರನ್ನು ಕಳೆದುಕೊಂಡಿದೆ. ಇಡೀ ಇಸ್ರೇಲ್ ರಾಷ್ಟ್ರದ ಗೌರವಕ್ಕಾಗಿ ಹೋರಾಡಲು ನಿಂತ ತನ್ನ ಅತ್ಯುತ್ತಮ ಪುತ್ರರು. ಇಂದು ನಾವು ಇನ್ನೊಬ್ಬ IDF (ಇಸ್ರೇಲ್ ರಕ್ಷಣಾ ಪಡೆಗಳು) ಸೈನಿಕನ ಸಾವಿಗೆ ಶೋಕಿಸುತ್ತೇವೆ’ ಭಾರತೀಯ ಯಹೂದಿ ಹೆರಿಟೇಜ್ ಸೆಂಟರ್ ಸಂತಾಪ ಸೂಚಿಸಿದೆ.

ಯುದ್ಧ ಪ್ರಾರಂಭವಾದ ಕೂಡಲೇ ಗಿಲ್ ಅಕ್ಟೋಬರ್ 10 ರಂದು ಮೀಸಲು ಪ್ರದೇಶಕ್ಕೆ ಹೋಗಿದ್ದರು. ಗಿಲ್, ಹೀಬ್ರೂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಾರ್ಮಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ಸ್ನೇಹಿತ ತಿರ್ಜಾ ಲವಿ ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾಗೆ ಬಿಗ್‌ ಶಾಕ್‌ – ಮಹತ್ವಾಕಾಂಕ್ಷೆಯ BRI ಯೋಜನೆಯಿಂದ ಹೊರಬಂದ ಇಟಲಿ

ಗಾಜಾದಲ್ಲಿ IDF ಕಾರ್ಯಾಚರಣೆಯನ್ನು ಆರಂಭಿಸಿದಾಗಿನಿಂದ ಸುಮಾರು 86 ಇಸ್ರೇಲಿ ಸೈನಿಕರು ಹೋರಾಟದಲ್ಲಿ ಮೃತಪಟ್ಟಿದ್ದಾರೆ. ಅಕ್ಟೋಬರ್ 7 ರಿಂದ ಕನಿಷ್ಠ ನಾಲ್ಕು ಭಾರತೀಯ ಮೂಲದ ಇಸ್ರೇಲಿ ಸೈನಿಕರು ಹತ್ಯೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Share This Article