ಆಸ್ಟ್ರೇಲಿಯಾ ಪೊಲೀಸರ ಕ್ರೌರ್ಯ – ಕೋಮಾಗೆ ಜಾರಿದ ಭಾರತೀಯ

Public TV
1 Min Read

– ನಾನೇನೂ ತಪ್ಪು ಮಾಡಿಲ್ಲ ಎಂದು ಕಿರುಚಿದರೂ ಬಿಡದ ಪೊಲೀಸರು

ಕ್ಯಾನ್‌ಬೆರಾ: ಆಸ್ಟ್ರೇಲಿಯಾ (Australia) ಪೊಲೀಸರು (Police) ಭಾರತೀಯ (India) ಮೂಲದ ವ್ಯಕ್ತಿಯೊಬ್ಬರನ್ನು ನೆಲಕ್ಕೆ ಕೆಡವಿ ಕುತ್ತಿಗೆ ಮೇಲೆ ಮೊಣಕಾಲಿನಿಂದ ಒತ್ತಿ ಹಿಡಿದಿದ್ದರಿಂದ ಅವರು ಕೋಮಾಗೆ ಜಾರಿದ್ದಾರೆ ಎಂದು ವರದಿಯಾಗಿದೆ.

ಅಡಿಲೇಡ್‌ ಪೊಲೀಸರು ಭಾರತೀಯ ಮೂಲದ ಗೌರವ್ ಕುಂಡಿ (42) ಅವರ ಜೊತೆ ಹಿಂಸಾತ್ಮಕವಾಗಿ ವರ್ತಿಸಿದ್ದು, ಅವರ ಮೆದುಳಿಗೆ ಹಾನಿಯಾಗಿದೆ ಎನ್ನಲಾಗಿದೆ. ಗುರುವಾರ ಮುಂಜಾನೆ ಅಡಿಲೇಡ್‌ನಲ್ಲಿ ಗೌರವ್ ಮತ್ತು ಅವರ ಸಂಗಾತಿ ಅಮೃತಪಾಲ್ ಕೌರ್ ಜೋರಾಗಿ ಮಾತನಾಡುತ್ತಿದ್ದರು. ಇದನ್ನು ಗಸ್ತು ತಿರುಗುತ್ತಿದ್ದ ಪೊಲೀಸರು ಕೌಟುಂಬಿಕ ಹಿಂಸಾಚಾರ ಎಂದು ತಪ್ಪಾಗಿ ಗ್ರಹಿಸಿ ಅವರನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಪಾಕ್‌ನ 48 ಗಂಟೆಗಳ ಪ್ಲ್ಯಾನ್‌, 8 ಗಂಟೆಗಳಲ್ಲೇ ಬುಡಮೇಲು; ಸಿಡಿಎಸ್

ಈ ವೇಳೆ ‘ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಗೌರವ್‌ ಕೂಗಿದ್ದಾರೆ. ಕೌರ್ ಈ ಕೃತ್ಯವನ್ನು ವೀಡಿಯೋ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಅವರ ಕತ್ತಿನ ಮೇಲೆ ಮೊಣಕಾಲಿಟ್ಟಾಗ ನನಗೆ ಭಯವಾಗಿ ವೀಡಿಯೋ ಮಾಡುವುದನ್ನು ನಿಲ್ಲಿಸಿದೆ. ಗೌರವ್‌ ತಲೆ ರಸ್ತೆಗೆ ಬಡಿದು ಪ್ರಜ್ಞಾಹೀನರಾದರು ಎಂದು ಕೌರ್‌ ಹೇಳಿಕೊಂಡಿದ್ದಾರೆ.

ಬಳಿಕ ಗೌರವ್‌ ಅವರನ್ನು ರಾಯಲ್ ಅಡಿಲೇಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ಮೆದುಳು ಮತ್ತು ಕುತ್ತಿಗೆಯ ನರಗಳಿಗೆ ತೀವ್ರ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ದಕ್ಷಿಣ ಆಸ್ಟ್ರೇಲಿಯಾ ಪೊಲೀಸರು ಈ ಬಗ್ಗೆ ಆಂತರಿಕ ತನಿಖೆ ಪ್ರಾರಂಭಿಸಿದ್ದಾರೆ. ಪೊಲೀಸರ ಬಾಡಿ-ಕ್ಯಾಮ್ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಪಿಒಕೆ ಮೂಲದ ಉಗ್ರನ ಭೂಮಿ ವಶ

Share This Article