ಅಮೆರಿಕದ ರಸ್ತೆಯಲ್ಲಿ ಭಾರತೀಯ ಮೂಲದ ವ್ಯಕ್ತಿ ಮೇಲೆ ಹಲ್ಲೆ – 41 ವರ್ಷದ ವಿವೇಕ್ ಸಾವು

By
1 Min Read

ವಾಷಿಂಗ್ಟನ್: ಇಲ್ಲಿನ ರೆಸ್ಟೋರೆಂಟ್ ಬಳಿ ಹಲ್ಲೆಗೊಳಗಾಗಿದ್ದ ಭಾರತದ ಮೂಲದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ (America)  ನಡೆದಿದೆ.

ಭಾರತೀಯ (India) ಮೂಲದ ವಿವೇಕ್ ತನೇಜಾ (41) ಮೃತ ವ್ಯಕ್ತಿ. ವರ್ಜೀನಿಯಾ ಮೂಲದ ತನೇಜಾ ಅವರು ಡೈನಮೋ ಟೆಕ್ನಾಲಜೀಸ್‌ನ ಸಹ-ಸಂಸ್ಥಾಪಕರಾಗಿದ್ದರು. ಅವರು ಕೊಲೆಯಾದ ದಿನ, ವಾಷಿಂಗ್ಟನ್‌ನಲ್ಲಿ ಇರುವ ರೆಸ್ಟೋರೆಂಟ್‌ಗೆ ಹೋಗಿದ್ದರು. ಇದನ್ನೂ ಓದಿ:  ರಾಮನಿಲ್ಲದೆ ಭಾರತವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ: ಅಮಿತ್ ಶಾ

ಅಮೆರಿಕದಲ್ಲಿ ಜಾಪನೀಸ್ ಸಹೋದರಿಯರು ನಡೆಸುವ ರೆಸ್ಟೋರೆಂಟ್‌ನಲ್ಲಿ ಇದ್ದರು. ಅದೇ ದಿನದಂದು ಶಂಕಿತ ವ್ಯಕ್ತಿ ಸಹ ಅಲ್ಲೇ ಇದ್ದ. ಮಧ್ಯರಾತ್ರಿ ರೆಸ್ಟೋರೆಂಟ್‌ನಿಂದ ಹೋಗಿದ್ದಾರೆ. ನಂತರ ರಸ್ತೆಯಲ್ಲೆ ಜಗಳ ಆರಂಭವಾಗಿದೆ. ಸರಿಯಾದ ಸಮಯ ನೋಡಿ ಆರೋಪಿ ವಿವೇಕ್ ಅವರನ್ನು ನೆಲಕ್ಕೆ ಹಾಕಿದ್ದಾನೆ. ಗಂಭೀರವಾಗಿ ಹಲ್ಲೆ ನಡೆಸಿ, ಬಳಿಕ ವಿವೇಕ್‌ನನ್ನು ಅಲ್ಲೇ ಬಿಟ್ಟು ಆರೋಪಿ ಪರಾರಿಯಾಗಿದ್ದ. ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ಜಾರಿ – ಗೃಹ ಸಚಿವ ಅಮಿತ್ ಶಾ ಭರವಸೆ

ಕೂಡಲೇ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ವಿವೇಕ್‌ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿವೇಕ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಹೀಗೆನ್ನುತ್ತಲೇ 70 ವರ್ಷ ಸರ್ಕಾರ ನಡೆಸಿಕೊಂಡು ಬಂದ್ರು – ಪಕ್ಷ ತೊರೆದ ಬಳಿಕ ಕಾಂಗ್ರೆಸ್‌ ವಿರುದ್ಧ ಶೆಟ್ಟರ್‌ ವಾಗ್ದಾಳಿ

Share This Article