ಅಮೆರಿಕಾದಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರ ಸಾವು

Public TV
1 Min Read

ವಾಷಿಂಗ್ಟನ್: ಭಾರತೀಯ ಮೂಲದ ಕುಟುಂಬವೊಂದು ಅಮೆರಿಕಾದ ತಮ್ಮ ನಿವಾಸದಲ್ಲಿ ಗುಂಡೇಟಿನಿಂದ ಮೃತಪಟ್ಟಿದ್ದಾರೆ.

ಆಂಧ್ರಪ್ರದೇಶ ಮೂಲದ ನಾಲ್ವರು ಐಯೋವಾ ರಾಜ್ಯದ ಡೆಸ್ ಮಾಯೊನೀಸ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ. ಮೃತರನ್ನು ಚಂದ್ರಶೇಖರ್ ಸುಂಕಾರ್ (44), ಲಾವಣ್ಯ (41) ಮತ್ತು ದಂಪತಿಯ 15 ಹಾಗೂ 10 ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳೆಂದು ಗುರುತಿಸಲಾಗಿದೆ.

ಗುಂಟೂರು ಜಿಲ್ಲೆಯ ಟಿ.ಸುಂದೂರು ಗ್ರಾಮದ ನಿವಾಸಿಯಾಗಿದ್ದ ಚಂದ್ರಶೇಖರ್ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ತೆರಳಿದ್ದರು. ನಂತರ ಕುಟುಂಬದವರೊಂದಿಗೆ ಅಲ್ಲಿಯೇ ನೆಲೆಸಿದ್ದರು. ಚಂದ್ರಶೇಖರ್ ಪೋಷಕರು ಹೈದರಾಬಾದ್‍ನಲ್ಲಿ ವಾಸಿಸುತ್ತಾರೆ ಎಂದು ಹೇಳಲಾಗುತ್ತಿದೆ. ಘಟನೆ ನಡೆದ ದಿನ ಮನೆಯಲ್ಲಿ ನಾಲ್ವರು ಅತಿಥಿಗಳು ಕೂಡ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಓರ್ವ ಸಹಾಯ ಕೇಳಿ ಮನೆಯ ಹೊರಗೆ ಓಡಿದ್ದಾರೆ. ಗಾಯಾಳುವಿಗೆ ಸಿಕ್ಕ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಮತ್ತು ಲಭ್ಯವಿರುವ ಆಧಾರಗಳನ್ನು ಗಮನಿಸಿದಾಗ ಘಟನೆ ನಡೆಯುವ ಮೊದಲು ಮನೆಯ ಒಳಗೆ ಹೊರಗಿನವರ ಪ್ರವೇಶವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

https://www.facebook.com/WeAreIowa/videos/2446212382267609/

ಚಂದ್ರಶೇಖರ್ ಸುಂಕಾರ್ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು. ಹಾಗಾಗಿ ಪತ್ನಿ ಮತ್ತು ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಗಳು ವ್ಯಕ್ತವಾಗಿವೆ. ಮೇಲ್ನೋಟಕ್ಕೆ ಗುಂಡಿನ ಗಾಯದಿಂದ ಮೃತಪಟ್ಟಿದ್ದಾರೆ ಎಂದು ತಿಳಿಯುತ್ತಿದೆ. ಆದರೆ ಶವ ಪರೀಕ್ಷೆಯ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಚಂದ್ರಶೇಖರ್ ಸಾರ್ವಜನಿಕ ಸುರಕ್ಷತೆಯ ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಸಹಾಯಕ ನಿರ್ದೇಶಕ ಮಿಚ್ ಮಾರ್ಟ್‍ವೆಡ್ಟನ್ ತಿಳಿಸಿದ್ದಾರೆ.

ನಾವು ತನಿಖೆಯನ್ನು ಮುಂದುವರಿಸುತ್ತೇವೆ. ಸಾಕ್ಷ್ಯಗಳು ಕೇಳುತ್ತಿರುವ ಹಲವಾರು ಪ್ರಶ್ನೆಗಳಿಗೆ ಉತ್ತರ ಪಡೆಯುವರೆಗೂ ನಮ್ಮ ತನಿಖೆ ನಿಲ್ಲಲ್ಲ. ಯಾವುದೇ ಸಮುದಾಯ ಅಥವಾ ಜನರಿಗೆ ಚಂದ್ರಶೇಖರ್ ಕುಟುಂಬಕ್ಕೆ ಬೆದರಿಕೆಗಳು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *