ಟೆಹ್ರಾನ್: ಕುವೈತ್‌ನ ವಿದ್ಯುತ್ ಸ್ಥಾವರ (Kuwait Power Plant) ಮತ್ತು ನಿರ್ಲವಣೀಕರಣ ಘಟಕದ ಮೇಲೆ ಇರಾನ್ ದಾಳಿಯಲ್ಲಿ ಭಾರತೀಯ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ದಾಳಿಯಿಂದ ವಿದ್ಯುತ್ ಘಟಕದ ಕಟ್ಟಡವೊಂದಕ್ಕೆ ಭಾರೀ ಹಾನಿಯಾಗಿದೆ.
ಭಾನುವಾರ ಸಂಜೆ ಈ ಘಟನೆ ಸಂಭವಿಸಿದ್ದು, ಇದು ದೇಶದ ಮೇಲೆ ಇರಾನ್ (Iran) ನಡೆಸಿದ ಅತಿದೊಡ್ಡ ಆಕ್ರಮಣಗಳಲ್ಲಿ ಒಂದಾಗಿದೆ ಎಂದು ಕುವೈತ್‌ನ ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ದಾಟಿದ ಭಾರತದ ಮತ್ತೆರಡು ಹಡಗು – ಮುಂಬೈ, ನವಮಂಗಳೂರಿಗೆ ಬರಲಿದೆ LPG ಟ್ಯಾಂಕರ್
ಇಸ್ರೇಲ್‌ನತ್ತ (Israel) ಉಡಾಯಿಸಲಾದ ಕ್ಷಿಪಣಿಗಳ ಮೂಲಕ ʻಭಾರತದ ಜನರಿಗೆ ಧನ್ಯವಾದಗಳುʼ ಎಂದು ಇರಾನ್ ಹೇಳಿದ ಮರುದಿನವೇ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಥವಾ ವಿದೇಶಾಂಗ ಸಚಿವಾಲಯ (MEA) ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.
ಇಸ್ರೇಲ್ ಮತ್ತು ಇತರ ದೇಶಗಳ ಮೇಲೆ ಉಡಾಯಿಸಲಾದ ಕ್ಷಿಪಣಿಗಳ ಮೇಲೆ ಭಾರತ, ಜರ್ಮನಿ, ಪಾಕಿಸ್ತಾನ ಮತ್ತು ಸ್ಪೇನ್ ದೇಶಗಳಿಗೆ ಧನ್ಯವಾದ ಅರ್ಪಿಸುವ ಕೈಬರಹದ ಚೀಟಿಗಳನ್ನು ಇರಾನ್ ಅಂಟಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಸೀಮೆಎಣ್ಣೆ ಸರಬರಾಜಿಗೆ ನಿಯಮ ಸಡಿಲಿಸಿದ ಕೇಂದ್ರ; ಪೆಟ್ರೋಲ್ ಪಂಪ್‌ಗಳ ಮೂಲಕ 60 ದಿನಗಳವರೆಗೆ ಮಾರಾಟಕ್ಕೆ ಅವಕಾಶ
ಇಸ್ರೇಲ್ ಮೇಲಿನ ದಾಳಿ ಕುರಿತಂತೆ ಮುಂಬೈಯಲ್ಲಿರುವ ಇರಾನ್‌ನ ಕಾನ್ಸುಲೇಟ್ ಕಚೇರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಮಾಹಿತಿ ನೀಡಿತ್ತು. ‘ಕ್ಷಿಪಣಿಗಳ ಮೇಲೆ ಭಾರತ, ಪಾಕಿಸ್ತಾನ, ಸ್ಪೇನ್ ಹಾಗೂ ಜರ್ಮನಿ ದೇಶದ ಜನರಿಗೆ ಧನ್ಯವಾದಗಳು’ ಎಂದು ಬರೆದಿರುವ ಫೋಟೊಗಳನ್ನೂ ಹಂಚಿಕೊಂಡಿತ್ತು. ಇದನ್ನೂ ಓದಿ: ರಾಜ್ಯ ಸರ್ಕಾರಗಳು ವಿಶ್ವಾಸದಿಂದ ಹೆಜ್ಜೆ ಇಡಬೇಕು – ತೈಲ ಅಭಾವ ವದಂತಿಗೆ ಜನ ಕಿವಿಗೊಡಂತೆ ಮೋದಿ ಕರೆ

