ಮೂರು ವರ್ಷಗಳಿಂದ ಪಾಕ್‌ ಜೈಲಲ್ಲಿದ್ದ ಭಾರತದ ಮೀನುಗಾರ ನೇಣಿಗೆ ಶರಣು

Public TV
1 Min Read

– 2022ರಿಂದ ಕರಾಚಿ ಜೈಲಲ್ಲಿದ್ದ ಮೀನುಗಾರ

ಇಸ್ಲಮಾಬಾದ್‌: ಪಾಕಿಸ್ತಾನದ (Pakistan) ಕರಾಚಿಯ ಮಲಿರ್ ಪ್ರದೇಶದ ಜೈಲಿನಲ್ಲಿ ಭಾರತೀಯ (India) ಮೀನುಗಾರನೊಬ್ಬ (Fisherman) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

ನೇಣಿಗೆ ಶರಣಾದ ವ್ಯಕ್ತಿಯನ್ನು ಗೌರವ್ ರಾಮ್ ಆನಂದ್ (52) ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ಜೈಲಿನ ಬ್ಯಾರಕ್‌ನ ಸ್ನಾನಗೃಹದಲ್ಲಿ ಆತ ಹಗ್ಗದಿಂದ ನೇಣು ಬಿಗಿದುಕೊಂಡಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಜೈಲಿನ ಸೂಪರಿಂಟೆಂಡೆಂಟ್ ಅರ್ಷದ್ ಹುಸೇನ್ ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲೇ ವೈದ್ಯೆಗೆ ಇರಿದು ಹತ್ಯೆ – ಪತಿ ವಿರುದ್ಧ ಕೊಲೆ ಆರೋಪ

ರ್ತವ್ಯ ನಿರತ ವೈದ್ಯರು ಕೈದಿಯನ್ನು ಪರೀಕ್ಷಿಸಿ ರಾತ್ರಿ 2:20ಕ್ಕೆ ಮೃತಪಟ್ಟಿದ್ದಾನೆ ಎಂದು ಖಚಿತಪಡಿಸಿದ್ದಾರೆ. ನಂತರ ನ್ಯಾಯಾಧೀಶರು ವಿಚಾರಣೆ ನಡೆಸಿ, ಕಾನೂನು ಕಾರ್ಯವಿಧಾನಗಳು ಮತ್ತು ಮುಂದಿನ ಆದೇಶಗಳು ಪೂರ್ಣಗೊಳ್ಳುವವರೆಗೆ ಶವವನ್ನು ಸೊಹ್ರಾಬ್ ಗೋತ್‌ನಲ್ಲಿರುವ ಈಧಿ ಫೌಂಡೇಶನ್‌ನ ಕೋಲ್ಡ್ ಸ್ಟೋರೇಜ್‌ನಲ್ಲಿ ಇಡಲು ಆದೇಶಿಸಿದ್ದಾರೆ.

ಫೆಬ್ರವರಿ 2022 ರಲ್ಲಿ ಡಾಕ್ಸ್ ಪೊಲೀಸರು ಗೌರವ್ ರಾಮ್ ಆನಂದ್‌ನನ್ನು ಬಂಧಿಸಿದ್ದರು. ಅದೇ ತಿಂಗಳು ಪಶ್ಚಿಮ ಕರಾಚಿ ಮ್ಯಾಜಿಸ್ಟ್ರೇಟ್ ಮಾಲಿರ್‌ನಲ್ಲಿ ಜೈಲಿಗೆ ಕಳಿಸಿದ್ದರು.

ಸಮುದ್ರ ಗಡಿಗಳನ್ನು ಸರಿಯಾಗಿ ಗುರುತಿಸಲಾಗದ ಕಾರಣ ಮತ್ತು ಅನೇಕ ದೋಣಿಗಳಲ್ಲಿ ನಿಖರವಾದ ಸ್ಥಳವನ್ನು ನಿರ್ಧರಿಸುವ ತಂತ್ರಜ್ಞಾನವಿಲ್ಲದ ಕಾರಣ ಭಾರತೀಯ ಮೀನುಗಾರರು ಹೆಚ್ಚಾಗಿ ಗಡಿ ದಾಟುತ್ತಾರೆ. ಅಂತಹ ಮೀನುಗಾರರನ್ನು ಬಂಧಿಸಲಾಗುತ್ತದೆ. ಫೆಬ್ರವರಿ 22 ರಂದು ಪಾಕ್‌ನ ಮಾಲಿರ್ ಜೈಲಿನಿಂದ ಬಿಡುಗಡೆಯಾದ 22 ಭಾರತೀಯ ಮೀನುಗಾರರನ್ನು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ: ನನ್ನ ಜಾತ್ರೆ ನಿಲ್ಸಿದ್ದೀರಿ.. ಮೂರು ದಿನಗಳಲ್ಲಿ ಮೂರು ಹೆಣ ಬೀಳುತ್ತೆ – ಮೈಮೇಲೆ ದೇವರು ಬಂದಿದೆ ಅಂತೇಳಿ ಮಹಿಳೆ ಶಾಪ!

Share This Article