ಉದ್ಯೋಗ ಬೇಕೇ – 9 ಗಂಟೆ ಮಲ್ಕೊಂಡ್ರೆ ಬರೋಬ್ಬರಿ 1 ಲಕ್ಷ ರೂ. ಸಂಬಳ

Public TV
1 Min Read

– ಕಂಪನಿಯಿಂದ ಅಭ್ಯರ್ಥಿಗಳಿಗೆ ವಿಶೇಷ ಆಫರ್

ನವದೆಹಲಿ: ನಿದ್ದೆ ಮಾಡಲು ಇಷ್ಟಪಡುವವರಿಗೆ ಭಾರತೀಯ ಸ್ಟಾಟ್‍ಅಪ್ ಇಂಟರ್ನ್‌ಶಿಪ್ ಶುರು ಮಾಡಿದ್ದು 1 ಲಕ್ಷ ರೂ. ಸಂಬಳದ ಆಫರ್ ನೀಡಿದೆ.

Wakefit ಕಂಪನಿ ತನ್ನ ವೆಬ್‍ಸೈಟ್‍ನಲ್ಲಿ ಇಂತಹದೊಂದು ಆಫರ್ ಪ್ರಕಟಿಸಿದ್ದು, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಂತೆ ಹೇಳಿದೆ. ಪ್ರತಿ ರಾತ್ರಿ 9 ಗಂಟೆ, ಪ್ರತಿ ವಾರ 100 ದಿನ ಮಲಗುವವರಿಗೆ ಕಂಪನಿ ಒಂದು ಲಕ್ಷ ರೂ. ಸಂಬಳ ನೀಡಲಿದೆ. ಕಂಪನಿ ನಿಯಮಗಳ ಪ್ರಕಾರ ಉದ್ಯೋಗಿ ಪೈಜಾಮಾ ಹಾಕಿಕೊಂಡೆ ಮಲಗಬೇಕು.

ಜೀವನದಲ್ಲಿ ನಿದ್ದೆಯನ್ನು ಆದ್ಯತೆಯನ್ನಾಗಿ ಮಾಡಲು ಯಾವುದೇ ಹಂತಕ್ಕೆ ಹೋಗುವ ಅಭ್ಯರ್ಥಿಗಾಗಿ ನಾವು ಹುಡುಕುತ್ತಿದ್ದೇವೆ. ಮನುಷ್ಯನ ಮಲಗುವ ಹವ್ಯಾಸ ಹಾಗೂ ಅದರಿಂದ ಅವರ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡುವುದು ನಮ್ಮ ಕಂಪನಿಯ ಉದ್ದೇಶ ಎಂದು ವೇಕ್‍ಫಿಟ್ ಕಂಪನಿಯ ನಿರ್ದೇಶಕ ಹಾಗೂ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ತಿಳಿಸಿದ್ದಾರೆ.

ಕಂಪನಿ ಇಂಟರ್ನಿಗಳು ಮಲಗುವ ಮಾದರಿಗಳನ್ನು ಗಮನಿಸುತ್ತದೆ. ಅಲ್ಲದೆ ಕೌನ್ಸಿಲಿಂಗ್ ಸೆಷನ್ಸ್ ಹಾಗೂ ಸ್ಲೀಪ್ ಟ್ರ್ಯಾಕರ್ಸ್‍ಗಳನ್ನು ನೋಡಲಾಗುತ್ತದೆ. ಇದರಿಂದ ಅಭ್ಯರ್ಥಿಗಳು ತಮ್ಮ ಹಾಸಿಗೆಗಳನ್ನು ಬಳಸುವ ಮೊದಲು ಹಾಗೂ ನಂತರ ಅವರು ನಿದ್ರೆಯ ಅನುಭವಗಳನ್ನು ತಿಳಿಯಲು ಇದು ಕಂಪನಿಗೆ ಸಹಾಯ ಮಾಡುತ್ತದೆ. ಕೆಲಸದ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡಲು ಈ ರೀತಿಯ ಪ್ರಯೋಗ ಮಾಡಲಾಗಿದೆ ಎಂದು ಚೈತನ್ಯ ರಾಮಲಿಂಗೇಗೌಡ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *