ಭಾರತೀಯ ಸೇನೆ ಹೊಸ ಸಮವಸ್ತ್ರ ಅನಾವರಣ – ಏನಿದರ ವಿಶೇಷತೆ?

Public TV
1 Min Read

ನವದೆಹಲಿ: ಭಾರತೀಯ ಯೋಧರಿಗೆಂದು ತಯಾರಿಸಲಾದ ನೂತನ ಸಮವಸ್ತ್ರವನ್ನು ಸೇನಾ ದಿನವಾದ ಇಂದು ಅನಾವರಣಗೊಳಿಸಲಾಯಿತು.

ಹಲವು ವಿಶೇಷತೆಗಳನ್ನು ಒಳಗೊಂಡ ಸೇನಾ ಸಮವಸ್ತ್ರವನ್ನು ಧರಿಸಿ ಪ್ಯಾರಾಚೂಟ್‌ ರೆಜಿಮೆಂಟ್‌ನ ಕಮಾಂಡೋಗಳ ತುಕಡಿ ಸೇನಾ ದಿನದ ಪಥಸಂಚನದಲ್ಲಿ ಭಾಗವಹಿಸಿತು. ಇದನ್ನೂ ಓದಿ: ಪಿಜ್ಜಾ ಆರ್ಡರ್‌ ಮಾಡುವಾಗ 9,000 ಹೋಯ್ತು – ವಾಪಸ್‌ ಪಡೆಯಲು ಹೋಗಿ 11 ಲಕ್ಷ ಕಳ್ಕೊಂಡ ವೃದ್ಧೆ

ವಿನ್ಯಾಸಕರು ಯಾರು?
ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ (ಎನ್‌ಐಎಫ್‌ಟಿ) ಸಹಯೋಗದಲ್ಲಿ ಭಾರತ ಸೇನಾಪಡೆಯು ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ.

ಏನಿದರ ವಿಶೇಷತೆ?
ಸೇನೆಗಾಗಿ ವಿನ್ಯಾಸಗೊಳಿಸಿರುವ ಹೊಸ ಸಮವಸ್ತ್ರ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಬ್ರಿಟಿಷ್‌ ಸೈನ್ಯವು ಬಳಸುವ ಮಾದರಿಯಂತೆ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ವಿವಿಧ ದೇಶಗಳ ಸೇನಾ ಸಮವಸ್ತ್ರಗಳ ವಿಶ್ಲೇಷಣೆ ಮತ್ತು ವಿಸ್ತೃತ ಚರ್ಚೆ ನಂತರ ಈ ಸಮವಸ್ತ್ರವನ್ನು ಅಂತಿಮಗೊಳಿಸಲಾಗಿದೆ. ಇದನ್ನೂ ಓದಿ: ನಾಯಕತ್ವ ತ್ಯಜಿಸಿ ಧೋನಿಗೆ ವಿಶೇಷ ಧನ್ಯವಾದ ಸಲ್ಲಿಸಿದ ಕೊಹ್ಲಿ!

ಹವಾಮಾನ ಏರಿಳಿತ ಎದುರಿಸಲು ಪೂರಕ
ಸೇನಾ ಸಿಬ್ಬಂದಿ ಬಿಸಿಲು, ಚಳಿ, ಮಳೆ-ರಾತ್ರಿ, ಹಗಲೆನ್ನದೇ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಹವಾಮಾನ ಏರಿಳಿತವನ್ನು ಎದುರಿಸಲು ಪೂರಕವಾದ ಸಮವಸ್ತ್ರ ಇದಾಗಿದೆ. ಸಿಬ್ಬಂದಿ ಕಾರ್ಯಕ್ಷೇತ್ರದ ಭೌಗೋಳಿಕ ಸ್ವರೂಪ ಹಾಗೂ ಹವಾಮಾನ ಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ.

ಮಣ್ಣು ಮತ್ತು ಹಸಿರು ಬಣ್ಣ ಮಿಶ್ರಣ
ಹೊಸ ಸಮವಸ್ತ್ರವು ಮಣ್ಣು ಮತ್ತು ಹಸಿರು ಬಣ್ಣದ ಮಿಶ್ರಣದಿಂದ ಕೂಡಿದೆ. ಹಳೆಯ ಸಮವಸ್ತ್ರಕ್ಕೆ ಹೋಲಿಸಿದರೆ ವಿಭಿನ್ನವಾಗಿದೆ. ಸೇನಾ ಸಿಬ್ಬಂದಿ ಧರಿಸಲು ತುಂಬಾ ಕಂಫರ್ಟ್‌ ಆಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: ರೈಲ್ವೆ ಉದ್ಯೋಗ ತೊರೆದು ಪೊಲೀಸ್‌ ಇಲಾಖೆ ಸೇರಿದ ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ವಿಜೇತೆ

ಡಿಜಿಟಲ್‌ ಕಣ್ಗಾವಲಿಗೂ ಸುಲಭವಾಗಿ ನಿಲುಕಲ್ಲ
ನೂತನ ಸಮವಸ್ತ್ರವು ಡಿಜಿಟಲ್‌ ಕಣ್ಗಾವಲಿಗೂ ಸುಲಭವಾಗಿ ನಿಲುಕುವುದಿಲ್ಲ. ಮೇಲ್ನೋಟಕ್ಕೆ ಸಿಬ್ಬಂದಿ ಇರುವಿಕೆಯನ್ನು ಗುರುತಿಸಲಾಗದ ಸಮವಸ್ತ್ರ ಇದಾಗಿದೆ.

ಮುಕ್ತ ಮಾರುಕಟ್ಟೆಯಲ್ಲಿ ಸಿಗಲ್ಲ
ಈ ಸಮವಸ್ತ್ರ ಮುಕ್ತ ಮಾರುಕಟ್ಟೆಯಲ್ಲಿ ಸಾರ್ವಜನಿಕವಾಗಿ ಲಭ್ಯವಿರುವುದಿಲ್ಲ ಎಂಬ ವಿಚಾರವನ್ನು ಮೂಲಗಳು ಸ್ಪಷ್ಟಪಡಿಸಿವೆ.

Share This Article
Leave a Comment

Leave a Reply

Your email address will not be published. Required fields are marked *