ಚೀನಾ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಿದ ಭಾರತ – ಶಕ್ತಿಶಾಲಿ ಹೆರಾನ್ ಡ್ರೋನ್ ನಿಯೋಜನೆ

Public TV
1 Min Read

ನವದೆಹಲಿ: ಪೂರ್ವ ಲಡಾಕ್ ಗಡಿಯ ಬಳಿಕ ಅರುಣಾಚಲ ಪ್ರದೇಶ ಗಡಿ ಬಳಿಯೂ ಭೂಮಿ ಅತಿಕ್ರಮಣಕ್ಕೆ ಪ್ರಯತ್ನಿಸುತ್ತಿರುವ ಚೀನಾಕ್ಕೆ ಭಾರತ ತಿರುಗೇಟು ನೀಡಲು ಪ್ರಯತ್ನಿಸಿದ್ದು, ಗಡಿಯಲ್ಲಿ ಅತ್ಯಾಧುನಿಕ ಡ್ರೋನ್ ಕಣ್ಗಾವಲು ಹೆಚ್ಚಿಸಿದೆ. ಅರುಣಾಚಲ ಪ್ರದೇಶದ ಬಳಿ ಇರುವ ವಾಸ್ತವ ಗಡಿ ರೇಖೆಯ ಬಳಿ ಭಾರತ, ಇಸ್ರೇಲ್ ತಂತ್ರಜ್ಞಾನದ ಡ್ರೋನ್‍ಗಳನ್ನು ಬಳಕೆ ಮಾಡಲು ಆರಂಭಿಸಿದೆ.

ಇಸ್ರೇಲ್ ನಿರ್ಮಿತ ಮಧ್ಯಮ-ಎತ್ತರದ ದೀರ್ಘ-ಸಹಿಷ್ಣುತೆಯ ಹೆರಾನ್ ಡ್ರೋನ್ ಗಳನ್ನು ಪರ್ವತಗಳಲ್ಲಿ ಹಾರಿಸಲಾಗುತ್ತಿದ್ದು, ಸುಮಾರು 30,000 ಅಡಿಗಳ ಎತ್ತರದವರೆಗೂ ಈ ಡ್ರೋನ್‍ಗಳು ಕಾರ್ಯ ನಿರ್ವಹಿಸಲಿವೆ. ಈ ಡ್ರೋನ್‍ಗಳು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳ ದೃಶ್ಯಗಳನ್ನು ಸೇನೆಗೆ ನೀಡುವಲ್ಲಿ ಸಹಕಾರಿಯಾಗುತ್ತಿವೆ.  ಇದನ್ನೂ ಓದಿ: ಮಹಾಮಳೆಯ ಭೂಕುಸಿತಕ್ಕೆ ತತ್ತರಿಸಿದ ದೇವರ ನಾಡು – ಅವಶೇಷಗಳಡಿ 26 ಶವ ಪತ್ತೆ

ಕಠಿಣಾತೀತ ಕಠಿಣ ಹವಾಮಾನದಲ್ಲೂ ಈ ಡ್ರೋನ್‍ಗಳು ಸಮರ್ಪಕವಾಗಿ ಕೆಲಸ ಮಾಡಲಿದ್ದು, 24-30 ಗಂಟೆಗಳ ಕಾಲ ನಿರಂತರವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಸಿಂಥೆಟಿಕ್ ಆರ್ಪಚರ್ ರೆಡರ್ ವ್ಯವಸ್ಥೆ ಹೊಂದಿದ್ದು ಭೂಮಿಯಿಂದ ಇದನ್ನು ನಿಯಂತ್ರಿಸಬಹುದಾಗಿದೆ. ಇದನ್ನೂ ಓದಿ: ಟಾಪ್‌ಲೆಸ್ ಅವತಾರದಲ್ಲಿ ಇಷಾ ಗುಪ್ತ – ಹೆಚ್ಚಾಯ್ತು ತುಂಡೈಕ್ಳ ಎದೆ ಬಡಿತ

ಹೆರಾನ್ ಡ್ರೋನ್‍ಗಳನ್ನು ನಾಲ್ಕೈದು ವರ್ಷಗಳ ಹಿಂದೆ ಕಾರ್ಯಚರಣೆಗೆ ಬಳಸಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಡ್ರೋನ್ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದು, ಸೆನ್ಸರ್ ಟೂ ಶೂಟರ್ ಪರಿಕಲ್ಪನೆಯಲ್ಲಿ ಕಣ್ಗಾವಲು ಹಚ್ಚಿಸಿದೆ. ಚೀನಾ ಅರುಣಾಚಲ ಪ್ರದೇಶದ ಗಡಿಗಳಲ್ಲಿ ಮೂಲ ಸೌಕರ್ಯಗಳನ್ನು ಹೆಚ್ಚು ಮಾಡುತ್ತಿದೆ. ರಸ್ತೆ, ಸೇತುವೆಗಳನ್ನು ನಿರ್ಮಿಸುತ್ತಿದೆ. ಚೀನಾ ಎಲ್ಲ ಬೆಳವಣಿಗೆ ಗಮನಿಸಲು ಈ ಡ್ರೋನ್ ಸಹಾಯ ಮಾಡಲಿದೆ ಎಂದು ಸೇನೆ ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *