ತಂಗಿ ಮದುವೆಗೆ ಬಂದಿದ್ದ ಅಣ್ಣನಿಗೆ ಸೇನೆಯಿಂದ ತುರ್ತು ಕರೆ – ಕರ್ತವ್ಯಕ್ಕೆ ಮರಳಿದ ಯೋಧ

Public TV
1 Min Read

ಬೀದರ್: ಭಾರತ-ಪಾಕ್ (India-Pak) ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ತಂಗಿಯ ಮದುವೆಗೆಂದು ಬಂದಿದ್ದ ಯೋಧನಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೇನೆಯಿಂದ ತುರ್ತು ಕರೆ ಬಂದಿದ್ದು, ಕುಟುಂಬಸ್ಥರು ಹಣೆಗೆ ತಿಲಕವಿಟ್ಟು ದೇಶ ಸೇವೆಗಾಗಿ ಕಳುಹಿಸಿಕೊಟ್ಟಿದ್ದಾರೆ.

ಬೀದರ್ (Bidar) ಜಿಲ್ಲೆಯ ಭಾಲ್ಕಿ (Bhalki) ತಾಲೂಕಿನ ಚಂದಾಪುರ ಗ್ರಾಮದ ಯೋಧ ಬಸವಕಿರಣ ಬಿರಾದಾರ ಅವರು ಪಂಜಾಬ್‌ನ (Punjab) ಅಮೃತಸರದಲ್ಲಿ (Amritsar) ಸೇವೆ ಸಲ್ಲಿಸುತ್ತಿದ್ದು, ಏ.27ರಂದು ತಂಗಿಯ ಮದುವೆಗಾಗಿ ರಜೆ ಪಡೆದು ಊರಿಗೆ ಬಂದಿದ್ದರು.ಇದನ್ನೂ ಓದಿ: ಭಾರತ-ಪಾಕ್ ಸಂಘರ್ಷ | ನವಜಾತ ಶಿಶು, ಪತ್ನಿ ಜೊತೆ ಕಾಲ ಕಳೆಯಬೇಕಿದ್ದ ಯೋಧ ಕರ್ತವ್ಯಕ್ಕೆ ವಾಪಸ್

ಸದ್ಯ ಭಾರತ-ಪಾಕಿಸ್ತಾನದ ಗಡಿ ಪಂಜಾಬ್‌ನಲ್ಲಿ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿರುವ ಹಿನ್ನೆಲೆ ಕರ್ತವ್ಯಕ್ಕೆ ಹಾಜರಾಗುವಂತೆ ಸೇನೆಯಿಂದ ತುರ್ತು ಕರೆ ಬಂದಿದೆ. ಯೋಧನ ಹಣೆಗೆ ತಿಲಕವಿಟ್ಟು, ಆರತಿ ಬೆಳಗಿ ಕುಟುಂಬಸ್ಥರು ಶುಭ ಹಾರೈಸಿ ಸೇವೆಗೆ ಕಳುಹಿಸಿಕೊಟ್ಟಿದ್ದಾರೆ.

ಇದೇ ವೇಳೆ ಯೋಧನ ಸಹೋದರಿ ವಚನಶ್ರೀ ಮಾತನಾಡಿ, ಭಾರತೀಯ ಸೈನಿಕರ ಮೇಲೆ ದೇಶದ ಎಲ್ಲ ಅಕ್ಕ-ತಂಗಿಯರ ಆಶೀರ್ವಾದವಿದೆ. ನಮ್ಮ ಸೈನಿಕರು ಉಗ್ರರನ್ನು ಮಟ್ಟ ಹಾಕಿ ವಿಜಯಶೀಲರಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.ಇದನ್ನೂ ಓದಿ: ಆಪರೇಷನ್‌ ಸಿಂಧೂರ ಮುಂದುವರಿಯುತ್ತದೆ – ಭಾರತೀಯ ವಾಯುಸೇನೆ ಅಧಿಕೃತ ಘೋಷಣೆ

Share This Article