ಭಾರತ-ಪಾಕ್ ಕ್ರಿಕೆಟ್ ಬೋರ್ಡ್‍ಗಳ ಕದನ – ಭಾರತ ಯಾರ ಮಾತನ್ನು ಕೇಳಲ್ಲ: ಅನುರಾಗ್ ಠಾಕೂರ್

Public TV
2 Min Read

ಮುಂಬೈ: ಕ್ರಿಕೆಟ್ (Cricket) ವಿಚಾರವಾಗಿ ಭಾರತ-ಪಾಕಿಸ್ತಾನ (India-Pakistan)  ಕ್ರಿಕೆಟ್ ಬೋರ್ಡ್‍ಗಳ ನಡುವೆ ಕಿತ್ತಾಟ ಆರಂಭವಾಗಿದೆ. 2023ರ ಏಷ್ಯಾ ಕಪ್ (Asia Cup) ಟೂರ್ನಿ ಪಾಕಿಸ್ತಾನದಲ್ಲಿ ನಡೆದರೆ ಆ ಟೂರ್ನಿಯಲ್ಲಿ ಭಾರತ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ (BCCI) ಘೋಷಿಸಿತ್ತು. ಈ ಮಾತಿಗೆ ಪಾಕಿಸ್ತಾನ ತಂಡ ಕೆರಳಿ ಕೆಂಡವಾಗಿದೆ. ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಕೇಂದ್ರ ಕ್ರೀಡಾ ಸಚಿವರಾದ ಅನುರಾಗ್ ಠಾಕೂರ್ (Anurag Thakur), ಭಾರತ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‍ಗೆ (World Cup) ಪಾಕಿಸ್ತಾನ ಸೇರಿದಂತೆ ಎಲ್ಲಾ ದೇಶಗಳನ್ನು ಆಹ್ವಾನಿಸುತ್ತೇವೆ. ಈ ಟೂರ್ನಿ ನಿಗದಿಯಂತೆ ನಡೆಯಲಿದೆ. ಇದು ಬಿಸಿಸಿಐ ತೆಗೆದುಕೊಂಡಿರುವ ನಿರ್ಧಾರ. ಭಾರತ ಕ್ರೀಡಾಪಟುಗಳ ತವರೂರು. ನಾವು ಈಗಾಗಲೇ ಹಲವು ಕ್ರೀಡಾಕೂಟಗಳೊಂದಿಗೆ ವಿಶ್ವಕಪ್‍ನಂತಹ ಮಹತ್ವದ ಟೂರ್ನಿಗಳನ್ನು ಆಯೋಜಿಸಿದ್ದೇವೆ. ಭಾರತವನ್ನು ಯಾವುದೇ ಕ್ರೀಡೆಯಲ್ಲಿ ನಿರ್ಲಕ್ಷಿಸುವಂತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ತೆರವಾದ KSCA ಅಧ್ಯಕ್ಷ ಹುದ್ದೆ – ಮುಂದಿನ ಬಾಸ್ ಯಾರು?

ಭಾರತದಲ್ಲಿ ನಡೆಯುವ ವಿಶ್ವಕಪ್‍ಗೆ ಸರ್ಕಾರ ಬೆಂಬಲ ನೀಡಲಿದೆ. ಗೃಹ ಸಚಿವಾಲಯದಿಂದ ಟೂರ್ನಿಗೆ ಸಿಗಬೇಕಾದ ಭದ್ರತೆ ವ್ಯವಸ್ಥೆ ಮಾಡುತ್ತೇವೆ. ಈ ಕುರಿತಾಗಿ ಭಾರತ ಯಾರ ಮಾತನ್ನು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಗ್ರೀನ್‍ಗೆ ಸಿಕ್ತು ಟಿ20 ವಿಶ್ವಕಪ್ ಗ್ರೀನ್ ಸಿಗ್ನಲ್

ಬಿಸಿಸಿಐ 2023ರ ಏಷ್ಯಾ ಕಪ್ ಟೂರ್ನಿ ಪಾಕಿಸ್ತಾನದಲ್ಲಿ ನಡೆದರೆ ಆ ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳಲ್ಲ ಎಂದ ಬಳಿಕ ಭಾರತದ ನಿರ್ಣಯ ಖಂಡಿಸಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿ ಬಹಿಷ್ಕರಿಸುವ ಸುಳಿವನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನೀಡಿದೆ. ಜೊತೆಗೆ ಏಷ್ಯಾ ಕ್ರಿಕೆಟ್ ಕೌನ್ಸಿಲ್‍ನಿಂದಲೇ ಹೊರಬರುವ ಬಗ್ಗೆ ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ (PCB) ಮುಖ್ಯಸ್ಥ ರಮೀಜ್ ರಾಜಾ ಗಂಭೀರ ಚಿಂತನೆ ನಡೆಸಿದ್ದಾರೆ.

ನಾವೀಗ ಕಠಿಣವಾಗಿ ಸ್ಪಂದಿಸಬೇಕಿದೆ. ಐಸಿಸಿ, ಎಸಿಸಿ ಟೂರ್ನಿಯಲ್ಲಿ ಭಾರತದ ವಿರುದ್ಧ ಮ್ಯಾಚ್ ಆಡದಿದ್ರೆ ಪಾಕಿಸ್ತಾನಕ್ಕೆ ಆರ್ಥಿಕವಾಗಿ ಭಾರೀ ನಷ್ಟ ಉಂಟಾಗುತ್ತದೆ. ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾ ಕಪ್ ಟೂರ್ನಿಯನ್ನು, ಬೇರೆ ಕಡೆ ಮಾಡುತ್ತೇವೆ ಎಂದು ನಿರ್ಧರಿಸಲು ಜಯ್ ಶಾ ಯಾರು ಎಂದು ಪಿಸಿಬಿ ಪ್ರಶ್ನಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *