ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಿರೋದು ಕೆಲವರಿಗೆ ಬೇಸರ ತರಿಸಿದೆ – ಕಲ್ಲಡ್ಕ ಪ್ರಭಾಕರ್ ಭಟ್

Public TV
1 Min Read

ಚಿಕ್ಕಬಳ್ಳಾಪುರ: ಟಿ20 ವಿಶ್ವಕಪ್ (T20 WorldCup) ಕ್ರಿಕೆಟ್‌ನಲ್ಲಿ ಪಾಕಿಸ್ತಾನದ (Pakistan) ವಿರುದ್ಧ ಭಾರತ ಗೆಲುವು ಸಾಧಿಸಿರುವುದು ಈ ದೇಶದಲ್ಲಿ ಕೆಲ ಜನರಿಗೆ ಬೇಸರ ಆಗಿರಬಹುದು ಅಂತ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಆರ್‌ಎಸ್‌ಎಸ್ (RSS) ಪಥ ಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಿರುವುದು, ಪಾಕಿಸ್ತಾನ (Pakistan) ಜಿಂದಾಬಾದ್ ಅಂತ ಹೇಳುವವರಿಗೆ ಬೇಸರ ಆಗಿರಬಹುದು. ಆ ರೀತಿಯ ಮಾನಸಿಕತೆ ಈ ದೇಶದಲ್ಲಿ ಕೆಲ ಮುಸ್ಲಿಮರಲ್ಲಿದೆ (Muslim Community) ಎಂದು ಕಿಡಿಕಾರಿದ್ದಾರೆ.

ಈ ದೇಶದಲ್ಲಿ ಒಳ್ಳೆಯ ಮುಸ್ಲಿಮರೂ ಇದ್ದಾರೆ. ದೇಶವನ್ನು ವಿರೋಧಿಸುವವರೂ ಇದ್ದಾರೆ. ಅವರು ಯೋಚನೆ ಮಾಡುವಾಗ ಪಾಕಿಸ್ತಾನದ ಬಗ್ಗೆಯೇ ಯೋಚನೆ ಮಾಡುತ್ತಾರೆ. ಈ ದೇಶವನ್ನು ಪಾಕಿಸ್ತಾನ ಮಾಡುವ ಉದ್ದೇಶ ಅವರದ್ದಾಗಿದೆ. ಜನಸಂಖ್ಯೆ ಹೆಚ್ಚಾದರೆ ನಮಗೆ ಲಾಭ ಆಗುತ್ತೆ ಅಂತ ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಅವರು ಭಾರೀ ದೊಡ್ಡ ಪ್ರಯತ್ನ ಮಾಡ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಜನಸಂಖ್ಯಾ ನಿಯಂತ್ರಣದ ಘೋಷಣೆಗಳು ಹಿಂದೂಗಳಿಗೆ ಮಾತ್ರ ಸೀಮಿತವಾಗಿವೆ. ಮುಸ್ಲಿಮರಿಗೆ ಈ ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಘೋಷಣೆಗಳು ಅನ್ವಯವಾಗಲ್ಲ. ಜನಸಂಖ್ಯೆ ಹೆಚ್ಚು ಮಾಡಿಕೊಂಡು ಹಿಂದೂ ವಿರೋಧಿ ಕೃತ್ಯಗಳನ್ನು ಮಾಡುತ್ತಿದ್ದಾರೆ. ಪಿಎಫ್‌ಐ ಹೆಸರಲ್ಲಿ ನಮ್ಮ ಕಾರ್ಯಕರ್ತರು ಕೊಲೆ ಪ್ರಯತ್ನ ಮಾಡ್ತಿದ್ದಾರೆ. ಎಲ್ಲ ಕಡೆ ಅವರದ್ದೇ ನಡೀತಿದೆ. ಪಥ ಸಂಚಲನ ಮಸೀದಿ ಮುಂದೆ ಹೋಗಬಾರದು ಅಂತ ಹೇಳ್ತಾರೆ. ಮಸೀದಿಗೆ ಜಾಗ ಕೊಟ್ಟವರು ಯಾರು? ನಾವು ರಂಜಾನ್ ಮೆರವಣಿಗೆಗೆ ಅಡ್ಡಿ ಮಾಡಿದ್ದೀವಾ ಎಂದು ಪ್ರಶ್ನಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *