ಕಬಡ್ಡಿಯಲ್ಲಿ ಭಾರತವೇ ವಿಶ್ವ ಚಾಂಪಿಯನ್‌ – ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದ ಮಹಿಳೆಯರು

2 Min Read

ಢಾಕಾ: ಭಾರತ ಮಹಿಳಾ ಕಬಡ್ಡಿ ತಂಡ (Team India Women Team) ಸತತ ಎರಡನೇ ಬಾರಿಗೆ ವಿಶ್ವಕಪ್‌ ಪ್ರಶಸ್ತಿಯನ್ನು (Kabaddi World Cup) ಗೆದ್ದುಕೊಂಡಿದೆ. ಬಾಂಗ್ಲಾದೇಶ (Bangladesh) ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಚೈನೀಸ್ ತೈಪೆಯನ್ನು 35–28 ಅಂಕಗಳಿಂದ ಸೋಲಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತು.

ಟೂರ್ನಿಯಾದ್ಯಂತ ಭಾರತ ಅತ್ಯುತ್ತಮ ಫಾರ್ಮ್ ಕಾಯ್ದುಕೊಂಡಿದ್ದ ಭಾರತ ಎಲ್ಲಾ ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ ಪ್ರವೇಶಿಸಿತ್ತು. ಸೆಮಿಫೈನಲ್‌ನಲ್ಲಿ ಇರಾನ್‌ ತಂಡವನ್ನು 33–21 ಅಂಕಗಳಿಂದ ಸೋಲಿಸಿ ಫೈನಲ್‌ ಪ್ರವೇಶಿಸಿತ್ತು. ಚೈನೀಸ್ ತೈಪೆ ಸೆಮಿ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಫೈನಲ್‌ಗೆ ಎಂಟ್ರಿಯಾಗಿತ್ತು. ಇದನ್ನೂ ಓದಿ:  ಅಂಧರ ಮಹಿಳಾ ಟಿ20 ವಿಶ್ವಕಪ್‌ – ಭಾರತ ಚೊಚ್ಚಲ ಚಾಂಪಿಯನ್‌

ಐತಿಹಾಸಿಕ ಗೆಲುವಿನ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ತಂಡವನ್ನು ಅಭಿನಂದಿಸಿದ್ದಾರೆ. ಗೆಲುವು ಭವಿಷ್ಯದ ಪೀಳಿಗೆಗೆ ಕ್ರೀಡೆಯನ್ನು ಆರಿಸಿಕೊಳ್ಳಲು ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.

ಇದೇ ಮೊದಲ ಬಾರಿ ಭಾರತದಿಂದ ಹೊರಗೆ ಬಾಂಗ್ಲಾದೇಶದಲ್ಲಿ ಕಬಡ್ಡಿ ವಿಶ್ವಕಪ್ ಟೂರ್ನಿ ಆಯೋಜನೆಗೊಂಡಿತ್ತು. 2012ರಲ್ಲಿ ಬಿಹಾರದ ಪಾಟ್ನಾದಲ್ಲಿ ಕೊನೆಯ ಬಾರಿ ವಿಶ್ವಕಪ್ ನಡೆದಿತ್ತು. ಈಗ 13 ವರ್ಷಗಳ ನಂತರ ಎರಡನೇ ಆವೃತ್ತಿಯ ಕಬಡ್ಡಿ ಬಾಂಗ್ಲಾದೇಶದಲ್ಲಿ ನಡೆದಿದೆ.  ಮೊದಲ ಆವೃತ್ತಿಯ ವಿಶ್ವಕಪ್‌ ನಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು.

Share This Article