ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

Public TV
2 Min Read

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಎರಡೂ ಕಡೆಗಳಲ್ಲಿ ಧಾರ್ಮಿಕ ಸ್ಥಳಗಳಿಗೆ ಯಾತ್ರಾರ್ಥಿಗಳಿಗೆ ಹೆಚ್ಚು ಅವಕಾಶ ನೀಡಬೇಕು ಎಂಬ ಪಾಕಿಸ್ತಾನ ಪ್ರಸ್ತಾವನೆ ಬಗ್ಗೆ ಚರ್ಚೆ ಮಾಡಲು ಭಾರತ ಸಿದ್ಧವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದರು.

ಲಾಹೋರ್ ಮತ್ತು ಕರಾಚಿಯಿಂದ ಭಾರತಕ್ಕೆ ಯಾತ್ರಾರ್ಥಿಗಳನ್ನು ಕೊಂಡೊಯ್ಯಲು ಪಾಕಿಸ್ತಾನ ಇಂಟರ್‍ನ್ಯಾಶನಲ್ ಏರ್‍ಲೈನ್ಸ್‍ನ ಎರಡು ಚಾರ್ಟರ್ಡ್ ವಿಮಾನಗಳಿಗೆ ಅನುಮತಿ ನೀಡಬೇಕು. ಈ ಕುರಿತು ಪಾಕಿಸ್ತಾನ್ ಹಿಂದೂ ಕೌನ್ಸಿಲ್‍ನಿಂದ ನವದೆಹಲಿಯಲ್ಲಿರುವ ಪಾಕಿಸ್ತಾನಿ ಮಿಷನ್ ಇತ್ತೀಚೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ರವಾನಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಹಿಳಾ ಪೊಲೀಸ್ ಕರ್ತವ್ಯದ ಸಮಯ ಕಡಿತ

ವಕ್ತಾರ ಅರಿಂದಮ್ ಬಾಗ್ಚಿ ಈ ಕುರಿತು ಮಾತನಾಡಿದ್ದು, 1974 ರ ದ್ವಿಪಕ್ಷೀಯ ‘ಧಾರ್ಮಿಕ ದೇವಾಲಯಗಳಿಗೆ ಭೇಟಿ ನೀಡುವ ಪ್ರೋಟೋಕಾಲ್’ ಅಡಿಯಲ್ಲಿ ಎರಡೂ ದೇಶಗಳ ಯಾತ್ರಾರ್ಥಿಗಳು ಭೇಟಿ ನೀಡಬಹುದಾದ ದೇಗುಲಗಳ ಪಟ್ಟಿಯ ವಿಸ್ತರಣೆಯನ್ನು ಚರ್ಚಿಸಲು ಭಾರತ ಸಿದ್ಧವಾಗಿದೆ ಎಂದು ಹೇಳಿದರು.

ಭಾರತ ಮತ್ತು ಪಾಕಿಸ್ತಾನದ ನಡುವಿನ 1974 ರ ಪ್ರೋಟೋಕಾಲ್ ಅಡಿಯಲ್ಲಿ, ಧಾರ್ಮಿಕ ದೇವಾಲಯಗಳಿಗೆ ನಿಯಮಿತವಾಗಿ ಭೇಟಿ ನೀಡಲಾಗುತ್ತಿದೆ. ದೇಗುಲಗಳ ಒಪ್ಪಿಗೆ ಪಟ್ಟಿ ಮತ್ತು ಪ್ರಯಾಣದ ವಿಧಾನವನ್ನು ವಿಸ್ತರಿಸಲು ಎರಡೂ ಕಡೆಗಳಲ್ಲಿ ಆಸಕ್ತಿ ಇದೆ. ಸ್ವಾಭಾವಿಕವಾಗಿ ಪ್ರೋಟೋಕಾಲ್ ಅಡಿಯಲ್ಲಿ ಈ ಚರ್ಚೆ ನಡೆಸಬೇಕಾಗಿದೆ ಎಂದು ವಿವರಿಸಿದರು.

ಕೋವಿಡ್ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಪ್ರಸ್ತುತ ಪ್ರಯಾಣದ ಮೇಲೆ ನಿರ್ಬಂಧಗಳಿವೆ. ಪರಿಸ್ಥಿತಿ ಸಾಮಾನ್ಯವಾಗುತ್ತಿದ್ದಂತೆ, ದ್ವಿಪಕ್ಷೀಯ ಪೆÇ್ರೀಟೋಕಾಲ್ ಅಡಿಯಲ್ಲಿ ಚರ್ಚೆ ನಡೆಸಲು ಈ ಸಮಯವನ್ನು ಬಳಸಿಕೊಳ್ಳಬಹುದು. ಈ ವಿಷಯದಲ್ಲಿ ಭಾರತವು ಸಕಾರಾತ್ಮಕ ಧೋರಣೆಯನ್ನು ಹೊಂದಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದರು.

Willing to engage with Pak on shrines: India – Kashmir Reader

ಪ್ರೋಟೋಕಾಲ್‍ನಲ್ಲಿ ಪ್ರಸ್ತುತ ಭಾರತದ ಭಾಗದಲ್ಲಿ ಐದು ಮುಸ್ಲಿಂ ದೇವಾಲಯಗಳನ್ನು ಮತ್ತು ಪಾಕಿಸ್ತಾನದ ಭಾಗದಲ್ಲಿ 15 ದೇವಾಲಯಗಳನ್ನು ಒಳಗೊಂಡಿದೆ. ಅವುಗಳಲ್ಲಿ ಬಹುಪಾಲು ಗುರುದ್ವಾರಗಳು. ಹೆಚ್ಚಿನ ಪಾಕಿಸ್ತಾನಿ ಮುಸ್ಲಿಮರು, ಅಜ್ಮೀರ್ ಷರೀಫ್, ನಿಜಾಮುದ್ದೀನ್ ದರ್ಗಾ ಮತ್ತು ಇತರ ದೇವಾಲಯಗಳಿಗೆ ಭೇಟಿ ನೀಡಲು ಭಾರತಕ್ಕೆ ಬರಲು ಇಚ್ಛಿಸುತ್ತಾರೆ ಎಂದು ತಿಳಿಸಿದರು.

ಭಾರತೀಯ ಯಾತ್ರಾರ್ಥಿಗಳನ್ನು ಪಾಕಿಸ್ತಾನಕ್ಕೆ ಕೊಂಡೊಯ್ಯಲು ಏರ್ ಇಂಡಿಯಾ ವಿಮಾನಗಳಿಗೆ ಅವಕಾಶ ನೀಡಬಹುದು ಎಂದು ಸಲಹೆ ನೀಡಿದರು. ಇದರಿಂದಾಗಿ ಅವರು ಖೈಬರ್-ಪಖ್ತುಂಖ್ವಾದಲ್ಲಿನ ತೇರಿ ಗ್ರಾಮದ ಪರಿಹಾನ್ಸ್ ಮಹಾರಾಜರ ಸಮಾಧಿ ಮತ್ತು ಬಲೂಚಿಸ್ತಾನದ ಹಿಂಗ್ಲಾಜ್ ಮಾತಾ ಮಂದಿರಗಳಿಗೆ ಭೇಟಿ ನೀಡಬಹುದು ಎಂದು ವಿವರಿಸಿದರು. ಇದನ್ನೂ ಓದಿ: ಟ್ರೋಲಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟ ಅಮೀರ್ ಪುತ್ರಿ ಇರಾ – ಸೋನಾ ಮೋಹಪತ್ರಾ ಸಾಥ್

2019 ರಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಭಾರತ ಮತ್ತು ಪಾಕ್ ಮಧ್ಯೆ ವ್ಯಾಪಾರ ಮತ್ತು ಹೆಚ್ಚಿನ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ದೇವಾಲಯ ನೋಡಲು ಭಕ್ತರಿಗಾಗಿ ಅವಕಾಶ ಮಾಡಿಕೊಂಡಬೇಕು ಎಂದು ಪಾಕ್ ಕೇಳಿಕೊಂಡಿದ್ದು, ಭಾರತ ಸಹ ಚರ್ಚೆ ಮಾಡಲು ಒಪ್ಪಿಗೆ ಸೂಚಿಸಿದೆ. ಪ್ರಸ್ತುತ, ಯಾತ್ರಾರ್ಥಿಗಳಿಗೆ ವಾಘಾ ಭೂ ಗಡಿ ಮತ್ತು ಕರ್ತಾರ್‍ಪುರ ಕಾರಿಡಾರ್ ಮೂಲಕ ಮಾತ್ರ ಪ್ರಯಾಣಿಸಲು ಅನುಮತಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *