ಆಟೋಪೈಲಟ್‌ನಲ್ಲಿಯೇ ಓಡಿದರೂ ವಿಕಸಿತ ಭಾರತ ಆಗೋದು ಖಚಿತ – ಮೋದಿ ನಾಯಕತ್ವದ ಬಗ್ಗೆ ಅಜಿತ್ ದೋವಲ್ ಮಾತು

1 Min Read
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಎಂತಹ ಬಲಿಷ್ಠ ಹಂತಕ್ಕೆ ತಂದಿದ್ದಾರೆ ಎಂದರೆ ಇದೀಗ ಆಟೋಪೈಲಟ್‌ನಲ್ಲಿಯೇ ಓಡಿದರೂ ವಿಕಸಿತ ಭಾರತ ಆಗುವುದು ಖಚಿತ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಹೇಳಿದ್ದಾರೆ.

ಅಭಿವೃದ್ಧಿ ಹೊಂದಿದ ಭಾರತ ಯುವ ನಾಯಕರ ಸಂವಾದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಅವರು ಯುವಜನರೊಂದಿಗೆ ಸಂವಾದ ನಡೆಸಿದರು. ಯುವಕರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಭವಿಷ್ಯ ಯುವಜನರು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಇಂದು ಎಲ್ಲವೂ ಬದಲಾಗಿರಬಹುದು, ಆದರೆ ಒಂದು ವಿಷಯ ಎಂದಿಗೂ ಹಾಗೆಯೇ ಇರುತ್ತದೆ. ಹೌದು, ನಿಮ್ಮ ಜೀವನದ ಹಾದಿಯನ್ನು ನಿರ್ಧರಿಸುವ ಕೆಲವು ಸಣ್ಣ ವಿಚಾರಗಳು, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಎಂದಿಗೂ ಹಾಗೇ ಇರುತ್ತದೆ. ನಿಮ್ಮ ಜೀವನದ ಪ್ರತಿ ಹಂತದಲ್ಲಿಯೂ ನಿರ್ಧಾರ ತೆಗೆದುಕೊಳ್ಳುತ್ತಲೇ ಇರುತ್ತೀರಿ. ನೀವು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಭಾರತ ಅಭಿವೃದ್ಧಿ ಹೊಂದುತ್ತದೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಕುಡಿದು ಸಿನಿಮಾ ಸ್ಟೈಲ್‌ಲ್ಲಿ ಡಿವೈಡರ್ ಹಾರಿಸಿದ ಕಾರು ಚಾಲಕ – 8 ಮಂದಿ ಜಸ್ಟ್ ಮಿಸ್!

ಪ್ರಪಂಚದಾದ್ಯಂತ ನಡೆಯುತ್ತಿರುವ ಎಲ್ಲಾ ಸಂಘರ್ಷಗಳು ಮತ್ತು ಯುದ್ಧಗಳಿಗೆ ಕಾರಣ ಕೆಲವು ದೇಶಗಳು ತಮ್ಮ ಇಚ್ಛೆಯನ್ನು ಇತರರ ಮೇಲೆ ಹೇರಲು ಬಯಸುತ್ತವೆ. ಅದಕ್ಕಾಗಿ ತಮ್ಮ ಶಕ್ತಿಯನ್ನು ಬಳಸಿಕೊಳ್ಳುತ್ತಿವೆ. ಆದರೆ ಮೊದಲು ನೀವು ಶಕ್ತಿಶಾಲಿಯಾಗಿ, ಸ್ವತಂತ್ರರಾಗಿರಬೇಕು. ನಿಮ್ಮಲ್ಲಿ ಆತ್ಮವಿಶ್ವಾಸವಿರಬೇಕು. ಆಗ ಮಾತ್ರ ನಿಮ್ಮ ಶಸ್ತ್ರಾಸ್ತ್ರಗಳಿಗೆ ಬಲತುಂಬಿದಂತಾಗುತ್ತದೆ. ಇಂದು ನಮ್ಮ ದೇಶದಲ್ಲಿ ಅಂತಹ ನಾಯಕತ್ವವಿರುವುದು ನಮ್ಮ ಅದೃಷ್ಟ. ಅವರ ಬದ್ಧತೆ, ಸಮರ್ಪಣೆ ಮತ್ತು ಕಠಿಣ ಪರಿಶ್ರಮ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.

ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಮಹಾತ್ಮಾ ಗಾಂಧಿ ಸೇರಿದಂತೆ ಸ್ವಾತಂತ್ರ‍್ಯ ಹೋರಾಟಗಾರರ ಬಲಿದಾನವನ್ನು ಸ್ಮರಿಸಿ, ಇತಿಹಾಸದ ಅಪಮಾನಗಳನ್ನು ಮರೆಯದೆ, ನಮ್ಮ ಮೌಲ್ಯಗಳ ಆಧಾರದ ಮೇಲೆ ಮಹಾನ್ ಭಾರತವನ್ನು ಮತ್ತೆ ನಿರ್ಮಿಸುವುದೇ ನಿಜವಾದ ಪ್ರತೀಕಾರ ಎಂದು ಯುವಜನರಿಗೆ ಕರೆ ನೀಡಿದ್ದಾರೆ.ಇದನ್ನೂ ಓದಿ: ನರೇಗಾ ವಿಚಾರದಲ್ಲಿ ಚರ್ಚೆಗೆ ನಾವು ಸಿದ್ಧ: ಕುಮಾರಸ್ವಾಮಿಗೆ ಸಿದ್ದರಾಮಯ್ಯ ಮರು ಸವಾಲ್

Share This Article