ಭಾರತೀಯರು ಅಪಾಯದಲ್ಲಿದ್ದರೆ ದೇಶ ಅವರ ಸಹಾಯಕ್ಕೆ ಯಾವತ್ತು ನಿಲ್ಲುತ್ತದೆ: ಮೋದಿ

Public TV
1 Min Read

ನವದೆಹಲಿ: ಭಾರತ ಕೊರೊನಾ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತ ಮುಂದುವರಿಯುತ್ತಿದ್ದರೂ ಕೂಡ ಅಘ್ಘಾನಿಸ್ತಾನದಂತಹ ಯುದ್ಧ ಪೀಡಿತ ಸನ್ನಿವೇಶದಲ್ಲಿರುವ ದೇಶದಿಂದ ಭಾರತೀಯರನ್ನು ರಕ್ಷಿಸಿದೆ. ಭಾರತೀಯರು ಅಪಾಯದಲ್ಲಿದ್ದರೆ ದೇಶ ಅವರ ಸಹಾಯಕ್ಕೆ ಯಾವತ್ತು ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ವಿಡೀಯೋ ಕಾನ್ಫರೆನ್ಸ್ ಮೂಲಕ ನವೀಕೃತ ಜಲಿಯನ್ ವಾಲಾಬಾಗ್ ಸ್ಮಾರಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಭಾರತ ಹಲವಾರು ಸವಾಲುಗಳನ್ನು ಮೆಟ್ಟಿನಿಂತು ಅಘ್ಘಾನಿಸ್ತಾನದಲ್ಲಿ ಅಪಾಯದಲ್ಲಿದ್ದ ಭಾರತೀಯರ ರಕ್ಷಣೆಗೆ ಮುಂದಾಗಿದೆ. ಈ ಕಾರ್ಯ ಇನ್ನೂ ಕೂಡ ಮುಂದುವರಿಯುತ್ತದೆ. ತಾಲಿಬಾನಿಗಳ ಅಟ್ಟಹಾಸದಿಂದಾಗಿ ಅಫ್ಘಾನಿಸ್ತಾನ ನಲುಗಿ ಹೋಗಿದೆ. ಈ ನಡುವೆ ಅಲ್ಲಿದ್ದ ನೂರಾರು ಭಾರತೀಯರನ್ನು ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡುವ ಮೂಲಕ ದೇಶಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ ಎಂದರು. ಇದನ್ನೂ ಓದಿ: ಮಧ್ಯರಾತ್ರಿ ಆಪರೇಷನ್ ಇಂಡಿಯನ್ಸ್ – ಕಾಬೂಲ್‍ನಿಂದ ದೋಹಾ ಮೂಲಕ ದೆಹಲಿಗೆ ಭಾರತೀಯರು

ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ನಾವು ಈ ಸಂಭ್ರಮದ ಹಿಂದೆ ಹಲವಾರು ಮಹನೀಯರ ತ್ಯಾಗ, ಬಲಿದಾನವಿದೆ ಎಂಬುದನ್ನು ಮರೆಯಬಾರದು. ನಾವಿಂದು ಜಲಿಯನ್ ವಾಲಾ ಬಾಗ್‍ನ್ನು ನವೀಕೃತಗೊಳಿಸಿ ಲೋಕಾರ್ಪಣೆಗೊಳಿಸಿದ್ದೇವೆ. ಜಲಿಯನ್ ವಾಲಾಬಾಗ್ ದೇಶದ ಸ್ವಾತಂತ್ಯಕ್ಕಾಗಿ ತಮ್ಮ ಪ್ರಾಣವನ್ನೆ ಅರ್ಪಿಸಿದ ಸರ್ದಾರ್ ಉದ್ದಮ್ ಸಿಂಗ್, ಭಗತ್ ಸಿಂಗ್ ಸೇರಿದಂತೆ ಹಲವು ಸ್ವಾತಂತ್ರ್ಯ ಸೇನಾನಿಗಳಿಗೆ ಧೈರ್ಯ ಕೊಟ್ಟ ಸ್ಥಳವಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಕಾಬೂಲ್‍ನಲ್ಲಿ ಎಟಿಎಂಗಳ ಮುಂದೆ ಜನಸಾಗರ – ಬ್ಯಾಂಕ್ ಸಿಬ್ಬಂದಿಯಿಂದ ಪ್ರತಿಭಟನೆ

Share This Article
Leave a Comment

Leave a Reply

Your email address will not be published. Required fields are marked *