ಯಾರಯ್ಯ ನೀನು? ಯಾಕ್ ವೈಡ್ ಕೊಟ್ರಿ?: ಅಂಪೈರ್ ವಿರುದ್ಧ ರೋಹಿತ್ ಅಸಮಾಧಾನ

Public TV
2 Min Read

ಕೋಲ್ಕತ್ತಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಬ್ಯಾಟ್ಸ್‌ಮ್ಯಾನ್‌ನ ಪ್ಯಾಡ್‍ಗೆ ತಗುಲಿಹೋದ ಚೆಂಡಿಗೆ ವೈಡ್ ಎಂದ ಅಂಪೈರ್ ವಿರುದ್ಧ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೈದಾನದಲ್ಲೇ ಅಸಮಾಧಾನ ಹೊರ ಹಾಕಿದ್ದಾರೆ.

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು, ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಭಾರತದ ಬೌಲರ್‌ಗಳ ದಾಳಿಗೆ ಬ್ಯಾಟಿಂಗ್ ಮಾಡಲು ಚಡಪಡಿಸಿತು. ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮ್ಯಾನ್‌ಗಳು ಒಂದು ಹಂತದಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾಗ ರವಿ ಬಿಷ್ಣೋಯ್ ದಾಳಿಗಿಳಿದರು. ಈ ವೇಳೆ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮ್ಯಾನ್‌‌ ರೋಸ್ಟನ್‌ ಚೇಸ್ ಬ್ಯಾಟಿಂಗ್ ಮಾಡುತ್ತಿದ್ದರು. ಬಿಷ್ಣೋಯ್ ಎಸೆದ ಎಸೆತವೊಂದು ಚೇಸ್‍ನ ಪ್ಯಾಡ್‍ಗೆ ತಾಗಿ ಕೀಪರ್ ರಿಷಭ್ ಪಂತ್ ಕೈಸೇರಿತ್ತು. ಈ ವೇಳೆ ಅಂಪೈರ್ ವೈಡ್ ಎಂದು ತೀರ್ಪು ನೀಡಿದರು. ಇತ್ತ ಸ್ಲಿಪ್‍ನಲ್ಲಿದ್ದ ರೋಹಿತ್ ಶರ್ಮಾ, ವೈಡ್ ಕ್ಯಾ ದೇರಹಾ ಹೈ ಯಾರ್ (ಎನ್ ನೋಡುತ್ತಿದ್ದೀರಿ ಯಾಕೆ ವೈಡ್ ಕೊಟ್ರಿ) ಎಂದು ಮೈದಾನದಲ್ಲೇ ಅಸಮಾಧಾನ ಹೊರ ಹಾಕಿದರು. ಬಳಿಕ ರಿವ್ಯೂ ತೆಗೆದುಕೊಂಡಾಗ ಮೂರನೇ ಅಂಪೈರ್‌ ವೈಡ್‌ ಎಲ್ಲ ಎಂಬ ತೀರ್ಪು ನೀಡಿದರು. ಇದನ್ನೂ ಓದಿ: ಐಪಿಎಲ್ 2022: ಕೆಕೆಆರ್ ನಾಯಕನಾಗಿ ಶ್ರೇಯಸ್ ಅಯ್ಯರ್ ನೇಮಕ

ನಂತರ ಬ್ಯಾಟಿಂಗ್ ಮುಂದುವರಿಸಿದ ವೆಸ್ಟ್ ಇಂಡೀಸ್ ನಿಕೋಲಸ್ ಪೂರನ್ ಭರ್ಜರಿ ಬ್ಯಾಟಿಂಗ್ 61 ರನ್ (43 ಎಸೆತ, 4 ಬೌಂಡರಿ, 5 ಸಿಕ್ಸ್) ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್‍ಗಳಿಸಿತು. ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ತಮಿಳುನಾಡಿನ ಅಳಿಯ – ಆಮಂತ್ರಣ ಪತ್ರಿಕೆ ವೈರಲ್

https://twitter.com/addicric/status/1493957761150844928

158 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಆರಂಭದಲ್ಲೇ ಅಬ್ಬರದ ಬ್ಯಾಟಿಂಗ್‍ಗೆ ಮುಂದಾಯಿತು. ಆರಂಭಿಕರಾದ ರೋಹಿತ್ ಶರ್ಮಾ 40 ರನ್ (19 ಎಸೆತ, 4 ಬೌಂಡರಿ, 3 ಸಿಕ್ಸ್) ಮತ್ತು ಇಶನ್ ಕಿಶನ್ 35 ರನ್ (42 ಎಸೆತ, 4 ಬೌಂಡರಿ) ಸಿಡಿಸಿ ಔಟ್ ಆದರು. ನಂತರ ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ ಅಜೇಯ 34 ರನ್ (18 ಎಸೆತ, 5 ಬೌಂಡರಿ, 1 ಸಿಕ್ಸ್) ಮತ್ತು ವೆಂಕಟೇಶ್ ಅಯ್ಯರ್ 24 ರನ್ (13 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ಇನ್ನೂ 18.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 162 ರನ್ ಬಾರಿಸಿ ಇನ್ನು ಒಂದು ಓವರ್ ಬಾಕಿ ಇರುವಂತೆ ಗೆಲುವಿನ ದಡ ಸೇರಿಸಿದರು.

Share This Article
Leave a Comment

Leave a Reply

Your email address will not be published. Required fields are marked *