ಇಂದು ಭಾರತ – ವಿಂಡೀಸ್ ಎರಡನೇ ಏಕದಿನ ಪಂದ್ಯ

Public TV
1 Min Read

ವಿಶಾಖಪಟ್ಟಣ: ಭಾರತಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಈಗಾಗಲೇ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆತಿಥೇಯರ ವಿರುದ್ಧ ಭರ್ಜರಿ ಜಯಗಳಿಸಿ ಈ ಮ್ಯಾಚ್ ಅನ್ನು ಗೆಲ್ಲುವ ತಯಾರಿಯಲ್ಲಿದ್ದಾರೆ.

ಇಂದು ವಿಶಾಖಪಟ್ಟಣದ ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ನಡೆಯಲಿದೆ. ಭಾರತ ಮೊದಲ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ.


ವಿಶಾಖಪಟ್ಟಣದ ಪಿಚ್ ಬ್ಯಾಟ್ಸ್ ಮನ್‍ಗಳಿಗೆ ಹೆಚ್ಚು ನೆರವು ನೀಡುವ ನಿರೀಕ್ಷೆ ಇದೆ. ಬ್ಯಾಟಿಂಗ್‍ನಲ್ಲೂ ಆತಿಥೇಯರು ಪರಿಣಾಮಕಾರಿ ಸಾಮರ್ಥ್ಯ ತೋರಬೇಕಿದೆ. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಮೊದಲ ಪಂದ್ಯದಲ್ಲಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡಲು ವಿಫಲರಾಗಿದ್ದರು. ಕೊಹ್ಲಿ ಕೂಡ ಹೆಚ್ಚು ಸಮಯ ಕ್ರೀಸ್ ನಲ್ಲಿ ಇರಲಿಲ್ಲ. ಮೊದಲ ಪಂದ್ಯದಲ್ಲಾದ ತಪ್ಪುಗಳನ್ನು ತಿದ್ದಿಕೊಂಡು ವಿಂಡೀಸ್ ಗೆ ತಕ್ಕ ಉತ್ತರ ಕೊಡಲು ಭಾರತ ಸಜ್ಜಾಗಿದೆ.

ಮೊದಲ ಪಂದ್ಯದಲ್ಲಿ ಭಾರತ ನೀಡಿದ್ದ 288 ರನ್‍ಗಳ ಗುರಿಯನ್ನು ಕೇವಲ ಎರಡು ವಿಕೆಟ್ ಕಳೆದುಕೊಂಡು ಮುಟ್ಟಿದ್ದ ಕೀರನ್ ಪೊಲಾರ್ಡ್ ನಾಯಕತ್ವದ ವಿಂಡೀಸ್ ತಂಡ ಈಗ ವಿಶ್ವಾಸದಲ್ಲಿದೆ.

ಇಂದಿನ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ತನ್ನ ಸಾಮಥ್ರ್ಯವನ್ನು ಪ್ರದರ್ಶಿಸಿದರೆ ಮಾತ್ರ ಗೆಲ್ಲುವ ಅವಕಾಶಗಳು ಸಿಗಲಿದೆ. ಎರಡು ತಂಡದಲ್ಲಿ ಉತ್ತಮ ಬ್ಯಾಟ್ಸ್ ಮನ್‍ಗಳಿದ್ದು, ಹೊಡಿಬಡಿ ದಾಂಡಿಗರು ಇರುವುದರಿಂದ ಹೈ ಸ್ಕೋರಿಂಗ್ ಮ್ಯಾಚ್ ಇದಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *