ಅಶ್ವಿನ್ ನೂತನ ಮೈಲಿಗಲ್ಲು – ಸಂಕಷ್ಟದಲ್ಲಿ ಲಂಕಾ

Public TV
2 Min Read

ಮೊಹಾಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯದ ಎರಡನೇ ದಿನ ಟೀಂ ಇಂಡಿಯಾ ಸ್ಪಿನ್ನರ್ ಆರ್. ಅಶ್ವಿನ್ ನೂತನ ಮೈಲಿಗಲ್ಲು ನೆಟ್ಟಿದ್ದಾರೆ.

ಅಶ್ವಿನ್ ಒಟ್ಟು 85 ಟೆಸ್ಟ್ ಪಂದ್ಯದಿಂದ 432 ವಿಕೆಟ್ ಪಡೆಯುವ ಮೂಲಕ ರಿಚರ್ಡ್ ಹ್ಯಾಡ್ಲೀ ಅವರನ್ನು ಹಿಂದಿಕ್ಕಿ ಟೆಸ್ಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದ್ದಾರೆ. ರಿಚರ್ಡ್ ಹ್ಯಾಡ್ಲೀ 86 ಟೆಸ್ಟ್‌ಗಳಿಂದ 431 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದೀಗ ಈ ದಾಖಲೆಯನ್ನು ಅಶ್ವಿನ್ ಹಿಂದಿಕ್ಕಿದ್ದಾರೆ. ಇದನ್ನೂ ಓದಿ: ಅಂದು ಸಚಿನ್, ಇಂದು ಜಡೇಜಾ – ದ್ರಾವಿಡ್, ರೋಹಿತ್ ನಡೆಗೆ ನೆಟ್ಟಿಗರು ಕಿಡಿ

ಎರಡನೇ ದಿನ ಟೀಂ ಇಂಡಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಮಿಂಚುಹರಿಸಿದೆ. ಮೊದಲ ದಿನ 85 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 375 ರನ್ ಪೇರಿಸಿದ್ದ ಭಾರತ 2ನೇ ದಿನ ರವೀಂದ್ರ ಜಡೇಜಾರ ಆಕರ್ಷಕ ಶತಕ ಮತ್ತು ಆರ್ ಅಶ್ವಿನ್‍ರ ಅರ್ಧಶತಕದ ನೆರವಿನಿಂದ 550ರ ಗಡಿದಾಟಿತು. ಇದನ್ನೂ ಓದಿ: ವಾರ್ನ್ ಭವಿಷ್ಯ ನುಡಿದ ಯುವಕ – ರಾಕ್‍ಸ್ಟಾರ್ ಜಡೇಜಾ ದಾಖಲೆಯ ಶತಕ

ಆರ್. ಅಶ್ವಿನ್ 61 ರನ್ (82 ಎಸೆತ, 8 ಬೌಂಡರಿ) ಸಿಡಿಸಿ ಔಟ್ ಆದರು. ಈ ಮೊದಲು ಜಡೇಜಾ ಜೊತೆ ಅಶ್ವಿನ್ 7ನೇ ವಿಕೆಟ್‍ಗೆ 130 ರನ್ (174 ಎಸೆತ) ಗಳ ಜೊತೆಯಾಟವಾಡಿದರು. ಎರಡನೇ ದಿನ ಜಡ್ಡು ಮನಮೋಹಕ ಹೊಡೆಗಳಿಂದ ಟೀಂ ಇಂಡಿಯಾದ ರನ್ ಶಿಖರವನ್ನು ಕಟ್ಟಿದರು. ಅಂತಿಮವಾಗಿ 129.2 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡ ಭಾರತ 574 ರನ್ ಪೇರಿಸುತ್ತಿದ್ದಂತೆ, ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು. ಜಡೇಜಾ 175 ರನ್ (228 ಎಸೆತ, 17 ಬೌಂಡರಿ, 3 ಸಿಕ್ಸ್) ಮತ್ತು ಮೊಹಮ್ಮದ್ ಶಮಿ 20 ರನ್ (34 ಎಸೆತ, 3 ಬೌಂಡರಿ) ಸಿಡಿಸಿ ಅಜೇಯರಾಗಿ ಉಳಿದರು. ಇದನ್ನೂ ಓದಿ: 10 ವರ್ಷದ ಹುಡುಗ ಎಂದಿದ್ದ ಶೇನ್ ವಾರ್ನ್ ಕನಸಲ್ಲಿ ಸಚಿನ್ ಬಂದಿದ್ದು ಹೇಗೆ..?

ನಂತರ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಆರಂಭದಲ್ಲೇ ಜಡೇಜಾ ಬೌಲಿಂಗ್‍ನಲ್ಲಿ ಶಾಕ್ ನೀಡಿದರು. ದಿಮುತ್ ಕರುಣಾರತ್ನೆ 28 ರನ್ (71 ಎಸೆತ, 5 ಬೌಂಡರಿ) ಸಿಡಿಸಿ ಜಡೇಜಾ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯೂ ಆಗಿ ವಿಕೆಟ್ ಒಪ್ಪಿಸಿದರು. ನಂತರ ಅಶ್ವಿನ್ 2 ವಿಕೆಟ್ ಕಿತ್ತು ಲಂಕಾ ಬ್ಯಾಟ್ಸ್‌ಮ್ಯಾನ್‌ಗಳಿಗೆ ಮುಳುವಾದರು. ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 108 ರನ್ ಗಳಿಸಿದ್ದು, ಇನ್ನೂ 466 ರನ್‍ಗಳ ಹಿನ್ನಡೆಯಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *