ಋತುರಾಜ್‌ – ಇಶಾನ್‌ ಶೈನ್‌, ಹರ್ಷಲ್‌ ಬೌಲಿಂಗ್‌ ಕಮಾಲ್‌ – ಭಾರತಕ್ಕೆ 48 ರನ್‌ಗಳ ಭರ್ಜರಿ ಜಯ

Public TV
3 Min Read

ಮುಂಬೈ: ಋತುರಾಜ್‌ ಗಾಯಕ್ವಾಡ್‌ ಹಾಗೂ ಇಶಾನ್‌ ಕಿಶನ್‌ ಅಮೋಘ ಅರ್ಧ ಶತಕಗಳ ಅಬ್ಬರ ಹಾಗೂ ಯಜುವೇಂದ್ರ ಚಾಹಲ್‌, ಹರ್ಷಲ್‌ ಪಟೇಲ್‌ ಅವರ ಬೌಲಿಂಗ್‌ ಕಮಾಲ್‌ ನಿಂದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 48 ರನ್‌ಗಳ ಭರ್ಜರಿ ಜಯ ಸಾಧಿಸಿತು.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 3ನೇ T20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 5 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿ, ಎದುರಾಳಿ ತಂಡಕ್ಕೆ 180 ರನ್‌ಗಳ ಗುರಿ ನೀಡಿತು. ಈ ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 19.1 ಓವರ್‌ಗಳಲ್ಲೇ 131 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಭಾರತಕ್ಕೆ ಮಂಡಿಯೂರಿತು. ಇದನ್ನೂ ಓದಿ: ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ IPL

ಕಳೆದ ಎರಡು ಪಂದ್ಯಗಳಲ್ಲಿ ಹೋರಾಡಿ ಸೋತಿದ್ದ ಭಾರತ 3ನೇ ಪಂದ್ಯದಲ್ಲಿ ಎದುರಾಳಿ ತಂಡವನ್ನು ಮಣ್ಣುಮುಕ್ಕಿಸುವ ಮೂಲಕ ಸರಣಿ ಆಥಿತೇಯರ ಕೈವಶವಾಗುವುದನ್ನು ತಪ್ಪಿಸಿತು. ಇದನ್ನೂ ಓದಿ: ಕನ್ನಡ ಸಿನಿಮಾದಲ್ಲಿ ನಟಿಸಿದ್ರಾ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ?: ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಮಾಜಿ ಕ್ರಿಕೆಟ್ ನಾಯಕ

ಟಾಸ್‌ ಸೋತು ನಂತರ ಬ್ಯಾಟಿಂಗ್‌ ಮಾಡಿದ ದಕ್ಷಿಣಾಫ್ರಿಕಾ ತಂಡ ಪವರ್‌ ಪ್ಲೇನಲ್ಲಿ ಒಂದು ವಿಕೆಟ್‌ ಕಳೆದುಕೊಂಡರೂ ಸಾಧಾರಣ ಮೊತ್ತ ದಾಖಲಿಸಿತ್ತು. 36 ಎಸೆತಗಳಲ್ಲಿ 37 ರನ್‌ಗಳನ್ನು ಕಲೆಹಾಕಿತ್ತು. ನಂತರ ತನ್ನ ಬೌಲಿಂಗ್‌ ಪರಾಕ್ರಮ ಮೆರೆದ ಟೀಂ ಇಂಡಿಯಾ ಬೌಲರ್‌ಗಳು ಪ್ರಮುಖ ಬ್ಯಾಟರ್‌ಗಳನ್ನು ಉರುಳಿಸಿದರು.

ಎಸ್‌ಎ ಕ್ಯಾಪ್ಟನ್‌ ತೆಂಬಾ ಬವುಮಾ ಪವರ್‌ ಪ್ಲೇನಲ್ಲೇ ಕೇವಲ 8 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ರೀಜಾ ಹೆನ್ರಿಕ್ಸ್ 20 ಎಸೆತಗಳಲ್ಲಿ 23 ರನ್‌ಗಳಿಸಿದರು. ಇದಕ್ಕೆ ಜೊತೆಯಾದ ಡ್ವೇನ್ ಪ್ರಿಟೊರಿಯಸ್ 16 ಎಸೆತಗಳಲ್ಲಿ 20 ರನ್‌ಗಳಿಸಿ ಪೆವಿಲಿಯನ್‌ ಸೇರಿದರು. ಇನ್ನು ಕಳೆದೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾಗಿ ಕಂಠಕವಾಗಿದ್ದ ಸ್ಫೋಟಕ ಬ್ಯಾಟ್ಸ್‌ಮನ್‌ ಡೇವಿಡ್‌ ಮಿಲ್ಲರ್‌ ಹಾಗೂ ಡುಸ್ಸೆನ್‌ ಕ್ರಮವಾಗಿ 3 ಮತ್ತು 1 ರನ್‌ಗಳಿಸಿ ಹೊರನಡೆದರು. ಹೆನ್ರಿಚ್ ಕ್ಲಾಸೆನ್ 24 ಎಸೆತಗಳಲ್ಲಿ 1 ಸಿಕ್ಸರ್‌, 3 ಬೌಂಡರಿಯೊಂದಿಗೆ 29 ರನ್‌ಗಳಿಸಿದರೆ, ಕಗಿಸೊ ರಬಾಡ 9 ರನ್‌ ಹೊಡೆದರು.

ಪ್ರಮುಖ ಬ್ಯಾಟರ್‌ಗಳ ವೈಫಲ್ಯ ತಂಡದ ಸೋಲಿಗೆ ಕಾರಣವಾಯ್ತು. ದಕ್ಷಿಣ ಆಫ್ರಿಕಾ ಪರ ಡ್ವೇನ್ ಪ್ರಿಟೊರಿಯಸ್ 2, ಕೇಶವ್ ಮಹಾರಾಜ್ 1, ತಬ್ರೆಜ್ ಶಮ್ಸಿ 1 ಹಾಗೂ ರಬಾಡ 1 ವಿಕೆಟ್ ಪಡೆದರು.  ಇದನ್ನೂ ಓದಿ: IPL: ಪ್ರತಿ ಪಂದ್ಯದ ಪ್ರಸಾರ ಹಕ್ಕು 100 ಕೋಟಿಗೂ ಅಧಿಕ – ಇಂದು ಮತ್ತಷ್ಟು ಏರಿಕೆ ಸಾಧ್ಯತೆ

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ ಋತುರಾಜ್ ಗಾಯಕ್ವಾಡ್‌ ಹಾಗೂ ಇಶಾನ್ ಕಿಶನ್ ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾಕ್ಕೆ 180 ರನ್ ಗುರಿ ನೀಡಿತು. ಇದನ್ನೂ ಓದಿ: T20 ಸರಣಿ: ದಕ್ಷಿಣ ಆಫ್ರಿಕಾಗೆ ಸತತ 2ನೇ ಗೆಲುವು – ಹೋರಾಡಿ ಸೋತ ಭಾರತ

ಗಾಯಕ್ವಾಡ್‌ ಇಶಾನ್‌ ಶೈನ್‌:
ಟೀಮ್ ಇಂಡಿಯಾಕ್ಕೆ ಆರಂಭಿಕರಾದ ಗಾಯಕವಾಡ್ ಹಾಗೂ ಇಶಾನ್ ಭದ್ರ ಬುನಾದಿ ಹಾಕಿಕೊಟ್ಟರು. ಕಳೆದ 2 ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಗಾಯಕ್ವಾಡ್‌ ಇಂದಿನ ಪಂದ್ಯದಲ್ಲಿ ಆರಂಭದಿಂದಲೇ ಅತಿಥೇಯ ತಂಡದ ಬೌಲರ್‌ಗಳ ಬೆವರಿಳಿಸಿದರು. ಗಾಯಕ್ವಾಡ್‌ 34 ಎಸೆತಗಳಲ್ಲಿ 57 ರನ್‌ ಚಚ್ಚಿ 57 ರನ್ (7 ಬೌಂಡರಿ, 2 ಸಿಕ್ಸರ್‌) ಗಳಿಸಿ ತಮ್ಮ 35ನೇ ಎಸೆತದಲ್ಲಿ ಮಹಾರಾಜ್‌ಗೆ ವಿಕೆಟ್ ಒಪ್ಪಿಸಿದರು.

ಇದೇ ವೇಳೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಇಶಾನ್‌ ಕಿಶನ್‌ ಸಹ 35 ಎಸೆತಗಳಲ್ಲಿ 54 ರನ್‌ (2 ಸಿಕ್ಸರ್‌, 5 ಬೌಂಡರಿ) ಪೇರಿಸಿದರು. ಇಬ್ಬರ ಸಾಂಘಿಕ ಬ್ಯಾಟಿಂಗ್‌ ಪ್ರರ್ಶನದಿಂದ ಟೀಂ ಇಂಡಿಯಾ 180 ರನ್‌ ಗುರಿ ನೀಡಲು ಸಾಧ್ಯವಾಯಿತು.

ನಿಗದಿತ 20 ಓವರ್‌ಗಳಲ್ಲಿ ಟೀಂ ಇಂಡಿಯಾ 200 ರನ್‌ಗಳ ಗುರಿ ತಲುಪುವ ನಿರೀಕ್ಷೆಯಿತ್ತು. ಆದರೆ ನಂತರ ಕ್ರಮಾಂಕದಲ್ಲಿ ಬಂದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಶ್ರೇಯಸ್‌ ಅಯ್ಯರ್‌ 14 ರನ್‌, ರಿಷಭ್‌ ಪಂತ್‌ 6 ರನ್‌ ದಿನೇಶ್‌ ಕಾರ್ತಿಕ್‌ 6 ರನ್‌ ಗಳಿಸಿದರೆ ಅಕ್ಷರ್‌ ಪಟೇಲ್‌ ಸಹ 6 ರನ್‌ಗಳಿಸಿ ಅಜೇಯರಾಗುಳಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಹಾರ್ದಿಕ್‌ ಪಾಂಡ್ಯ 21 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 31 ರನ್‌ ಸಿಡಿಸಿ ಅಜೇಯರಾಗುಳಿದರು.

ಚಾಹಲ್‌, ಪಟೇಲ್‌ ಬೌಲಿಂಗ್‌ ಕಮಾಲ್‌: ತಮ್ಮ ಬೌಲಿಂಗ್‌ ದಾಳಿಯಿಂದ ದಕ್ಷಿಣ ಆಫ್ರಿಕಾದ ಪ್ರಮುಖ ಬ್ಯಾಟರ್‌ಗಳನ್ನು ಉರುಳಿಸುವಲ್ಲಿ ಯಜುವೇಂದ್ರ ಚಾಹಲ್‌ ಹಾಗೂ ಹರ್ಷಲ್‌ ಪಟೇಲ್‌ ಯಶಸ್ವಿಯಾದರು. ಚಾಹಲ್‌ 4 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್‌ ಪಡೆದರೆ, ಹರ್ಷಲ್‌ ಪಟೇಲ್‌ 3.1 ಓವರ್‌ನಲ್ಲಿ 25 ರನ್‌ ನೀಡಿ 4 ವಿಕೆಟ್‌ಗಳನ್ನು ಪಡೆದರು. ಇದು ಟೀಂ ಇಂಡಿಯಾ ಗೆಲುವಿಗೆ ಸಹಕಾರಿಯಾಯ್ತು. ಅಕ್ಷರ್‌ ಪಟೇಲ್‌ 1 ವಿಕೆಟ್‌ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *