T20 World Cup final: ಭಾರತ vs ನ್ಯೂಜಿಲೆಂಡ್‌ ಫೈನಲ್‌ ಫೈಟ್‌ – ಟಿ20 ವಿಶ್ವಕಪ್‌ ಕಿರೀಟ ಯಾರ ಮುಡಿಗೆ?

2 Min Read

ಅಹಮದಾಬಾದ್: ಟಿ20 ವಿಶ್ವಕಪ್ ಪೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಭಾರತ ಮೂರನೇ ಬಾರಿಗೆ ಚಾಂಪಿಯನ್ ಆಗಿ ಇತಿಹಾಸ ಸೃಷ್ಟಿಸುವ ತವಕದಲ್ಲಿದೆ. ಟೀಂ ಇಂಡಿಯಾ ಗೆಲುವಿಗಾಗಿ ಕೋಟ್ಯಂತರ ಭಾರತೀಯರು ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ವಿಶ್ವಕಪ್ ಮೊದಲ ಟೂರ್ನಿಯಲ್ಲೇ ಇತಿಹಾಸ ನಿರ್ಮಿಸಿದ್ದ ಟೀಂ ಇಂಡಿಯಾ ಮತ್ತೆ ಕಪ್ ಗೆಲ್ಲೋಕೆ ತೆಗೆದುಕೊಂಡಿದ್ದು, ಬರೋಬ್ಬರಿ 17 ವರ್ಷ. ಈ ಸುದೀರ್ಘ ಕಾಯುವಿಕೆ ಬಳಿಕ 2024 ರಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡಕ್ಕೆ ಈಗ ಮತ್ತೊಂದು ಸುವರ್ಣ ಅವಕಾಶ. ಈ ಬಾರಿಯ ವಿಶ್ವಕಪ್ ಗೆಲುವು, ಚಾಂಪಿಯನ್ ಪಟ್ಟ ಮಾತ್ರ ಅಲ್ಲದೇ ವಿಶ್ವ ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿಗೂ ಕಾರಣವಾಗಲಿದೆ.

2007 ರಲ್ಲಿ ಮೊದಲ ಬಾರಿಗೆ ಆರಂಭವಾದ ಚುಟುಕು ಕ್ರಿಕೆಟ್‌ನಲ್ಲೇ ಭಾರತ ಚಾಂಪಿಯನ್ ಆಗಿ, ವಿಶ್ವಕಪ್ ಮೊದಲ ಚಾಂಪಿಯನ್ಸ್ ಎಂಬ ಹೆಗ್ಗಳಿಗೆ ಪಾತ್ರವಾಗಿತ್ತು. ಆದಾದ ಬಳಿಕ ಸತತ ಪ್ರಯತ್ನಗಳಾಗಿದ್ದರೂ ಭಾರತಕ್ಕೆ ಕಪ್ ಗೆಲ್ಲಲ್ಲು ಆಗಿರಲಿಲ್ಲ. 2014 ರಲ್ಲಿ ಫೈನಲ್ ಗೇರಿದ್ದರು. ಶ್ರೀಲಂಕಾ ವಿರುದ್ಧ ಸೋತು ನಿರಾಸೆ ಅನುಭಸಿತ್ತು. ಬಳಿಕ ಯಾವುದೇ ವಿಶ್ವಕಪ್‌ನಲ್ಲಿ ಭಾರತಕ್ಕೆ ಚಾಂಪಿಯನ್ ಆಗುವ ಅವಕಾಶವೇ ಸಿಕ್ಕಿರಲಿಲ್ಲ. ಆದರೆ, 2024 ರಲ್ಲಿ 17 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ ಆದ ಭಾರತ, ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತ್ತು. 17 ವರ್ಷಗಳ ಬಹು ದೂರದ ಕಾಯುವಿಕೆ ಬಳಿಕ ಟ್ರೋಪಿ ಬರ ನೀಗಿಸಿಕೊಂಡಿತ್ತು. ಈಗ ಮತ್ತೆ ಅಂತಹದ್ದೆ ಅವಕಾಶ ಸಿಕ್ಕಿದ್ದು, ಮತ್ತೆ ಇತಿಹಾಸ ನಿರ್ಮಿಸಲು ಮೆನ್ ಇನ್ ಬ್ಲ್ಯೂ ಪಡೆ ಸಿದ್ಧವಾಗಿದೆ.

ಹಾಲಿ ಚಾಂಪಿಯನ್ನರನ್ನು ಸದೆಬಡಿದು ಚೊಚ್ಚಲ ಕಪ್ ಗೆಲ್ಲಲು ನ್ಯೂಜಿಲೆಂಡ್ ಕಾಯುತ್ತಿದೆ. ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಕಿವೀಸ್ ವಿರುದ್ಧ ಒಂದು ಪಂದ್ಯದಲ್ಲೂ ಗೆದ್ದಿಲ್ಲ. ಟೂರ್ನಿಯಲ್ಲಿ ಉಭಯ ತಂಡಗಳು 3 ಬಾರಿ ಮುಖಾಮುಖಿಯಾಗಿವೆ. ಎಲ್ಲಾ ಪಂದ್ಯಗಳಲ್ಲೂ ನ್ಯೂಜಿಲೆಂಡ್ ಗೆದ್ದಿದೆ.

10ನೇ ಆವೃತ್ತಿಯ ಟಿ20 ವಿಶ್ವಕಪ್ ಫೈನಲ್ ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

ವಿಶ್ವಕಪ್ ಇತಿಹಾದಲ್ಲಿ ಭಾರತ ನಡೆದು ಬಂದ ಹಾದಿ ಹೇಗಿದೆ?
* 2007 – ಎಂಎಸ್ ಧೋನಿ ನೇತೃತ್ವದಲ್ಲಿ ಚಾಂಪಿಯನ್ಸ್
* 2009 – ಸೂಪರ್ 8 ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲ
* 2010 – ಸೂಪರ್ 8 ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲ
* 2012 – ಸೂಪರ್ 8 ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲ
* 2014 – ರನ್ನರ್-ಅಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸೋಲು
* 2016 – ಸೆಮಿಫೈನಲ್ ವೆಸ್ಟ್ ಇಂಡೀಸ್ ವಿರುದ್ಧ ಸೋಲು
* 2021 – ಸೂಪರ್ 12 ಸೆಮಿಫೈನಲ್ ತಲುಪುವಲ್ಲಿ ವಿಫಲ
* 2022 – ಸೆಮಿಫೈನಲ್ ಇಂಗ್ಲೆAಡ್ ವಿರುದ್ಧ ಸೋಲು.

Share This Article