ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಬಳಿಕ ಜಡೇಜಾ ನಿವೃತ್ತಿ?

Public TV
1 Min Read

ದುಬೈ: ಆಲ್‌ರೌಂಡರ್‌ ರವೀಂದ್ರ ಜಡೇಜಾ (Ravindra Jadeja) ಅವರು ಚಾಂಪಿಯನ್ಸ್‌ ಟ್ರೋಫಿ (Champions Trophy) ಫೈನಲ್‌ ಪಂದ್ಯದ ಬಳಿಕ ನಿವೃತ್ತಿ ಹೇಳುತ್ತಾರಾ ಹೀಗೊಂದು ಅನುಮಾನವನ್ನು ಕ್ರಿಕೆಟ್‌ ಅಭಿಮಾನಿಗಳು ಈಗ ವ್ಯಕ್ತಪಡಿಸುತ್ತಿದ್ದಾರೆ.

ನ್ಯೂಜೆಲೆಂಡ್‌ ಬ್ಯಾಟಿಂಗ್‌ ಮುಗಿದ ಬಳಿಕ ಮೈದಾನದಲ್ಲಿ ವಿರಾಟ್‌ ಕೊಹ್ಲಿ(Virat Kohli) ಮತ್ತು ರವೀಂದ್ರ ಜಡೇಜಾ ಪರಸ್ಪರ ಅಪ್ಪಿಕೊಂಡರು. ಇಬ್ಬರು ಅಪ್ಪಿಕೊಳ್ಳುವ ವೇಳೆ ಜಡೇಜಾ ಭಾವುಕರಾಗಿದ್ದರು. ಹೀಗಾಗಿ ಈ ಪಂದ್ಯದ ಬಳಿಕ ಜಡೇಜಾ ನಿವೃತ್ತಿ ಹೇಳಬಹುದು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್‌ ಗೆದ್ದ ಬಳಿಕ ಜಡೇಜಾ ಟಿ20 ಕ್ರಿಕೆಟಿಗೆ ನಿವೃತ್ತಿ ಹೇಳಿದ್ದರು. ಇದನ್ನೂ ಓದಿ: IND vs NZ | ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಬಳಿಕ ರೋಹಿತ್‌ ಶರ್ಮಾ ನಿವೃತ್ತಿ…?

ಇಂದಿನ ಪಂದ್ಯದಲ್ಲಿ ಜಡೇಜಾ 10 ಓವರ್‌ ಎಸೆದು 30 ರನ್‌ ನೀಡಿ 1 ವಿಕೆಟ್‌ ಪಡೆದಿದ್ದಾರೆ. ಎಡಗೈ ಬ್ಯಾಟ್ಸ್‌ಮನ್‌ ಟಾಮ್ ಲ್ಯಾಥಮ್ ಅವರನ್ನು ಎಲ್‌ಬಿಗೆ ಕೆಡವುವಲ್ಲಿ ಜಡೇಜಾ ಯಶಸ್ವಿಯಾಗಿದ್ದರು.

ಸದ್ಯ ಐಸಿಸಿ ಟೆಸ್ಟ್‌ ಆಲ್‌ರೌಂಡರ್‌ ಶ್ರೇಯಾಂಕ ಪಟ್ಟಿಯಲ್ಲಿ ಜಡೇಜಾ 400 ರೇಟಿಂಗ್‌ ಪಡೆದು ಮೊದಲ ಸ್ಥಾನದಲ್ಲಿದ್ದರೆ ಏಕದಿನದಲ್ಲಿ 2013 ರೇಟಿಂಗ್‌ ಪಡೆದು 9ನೇ ಸ್ಥಾನದಲ್ಲಿದ್ದಾರೆ.

 

Share This Article