IND vs NZ 3rd T20I: ಅಭಿಷೇಕ್‌, ಸೂರ್ಯ ಬ್ಯಾಟಿಂಗ್ ಅಬ್ಬರಕ್ಕೆ ಕಿವೀಸ್‌ ಕಂಗಾಲು; ಸರಣಿ ಗೆದ್ದ ಭಾರತ

0 Min Read

ಗುವಾಹಟಿ: ಅಭಿಷೇಕ್‌ ಶರ್ಮಾ (Abhishek Sharma) ಹಾಗೂ ಸೂರ್ಯಕುಮಾರ್‌ ಯಾದವ್‌ (Suryakumar Yadav) ಡಬಲ್‌ ಫಿಫ್ಟಿ ಆಟಕ್ಕೆ ಕಿವೀಸ್‌ ಪಡೆ ತಲೆಬಾಗಿತು. ಟಿ20 ಸರಣಿಯ (IND vs NZ 3rd T20I) ಮೂರನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 153 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಟೀಂ ಇಂಡಿಯಾ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನದಿಂದಾಗಿ ಇನ್ನೂ 10 ಓವರ್‌ಗಳು ಬಾಕಿ ಇರುವಾಗಲೇ ಗೆದ್ದು ಬೀಗಿತು. ಇದನ್ನೂ ಓದಿ: Padma Awards 2026: ರೋಹಿತ್ ಶರ್ಮಾ, ಹರ್ಮನ್‌ಪ್ರೀತ್ ಕೌರ್‌ಗೆ ಪದ್ಮಶ್ರೀ ಪ್ರಶಸ್ತಿ

ಓಪನರ್‌ ಸಂಜು ಸ್ಯಾಮ್ಸನ್‌ ಮೊದಲ ಬಾಲ್‌ಗೆ (ಮ್ಯಾಟ್ ಹೆನ್ರಿ ಬೌಲರ್)‌ ಕ್ಲೀನ್‌ ಬೌಲ್ಡ್‌ ಆಗಿ ಟೀಂ ಇಂಡಿಯಾಗೆ ಆಘಾತ ನೀಡಿದರು. ನಂತರ ಇಶಾನ್‌ ಕಿಶನ್‌ ಮತ್ತು ಅಭಿಷೇಕ್‌ ಶರ್ಮಾ ಜೋಡಿ ಬ್ಯಾಟಿಂಗ್‌ನಲ್ಲಿ ಕಮಾಲ್‌ ಮಾಡಿತು. ಸಿಕ್ಸರ್‌ ಮತ್ತು ಫೋರ್‌ಗಳ ಆಟದಿಂದ ಗಮನ ಸೆಳೆದರು. ಇಶನ್‌ 13 ಬಾಲ್‌ಗೆ 28 ರನ್‌ ಗಳಿಸಿ ನಿರ್ಗಮಿಸಿದರು.

ಅಭಿಷೇಕ್‌ ಮತ್ತು ಸೂರ್ಯಕುಮಾರ್‌ ಯಾದವ್‌ 102 ರನ್‌ಗಳ ಉತ್ತಮ ಜೊತೆಯಾಟವಾಡಿದರು. ಡಬಲ್‌ ಫಿಫ್ಟಿ ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು. ಅಭಿಷೇಕ್‌ ಕೇವಲ 14 ಬಾಲ್‌ಗೆ ಅರ್ಧಶತಕ ಸಿಡಿಸಿ ಮಿಂಚಿದರು. ಮ್ಯಾಚ್‌ನಲ್ಲಿ 20 ಬಾಲ್‌ಗೆ 68 ರನ್‌ (5 ಸಿಕ್ಸರ್‌, 7 ಫೋರ್)‌ ಗಳಿಸಿದರು. ಸೂರ್ಯಕುಮಾರ್‌ 26 ಬಾಲ್‌ಗೆ 57 ರನ್‌ (6 ಫೋರ್, 3‌ ಸಿಕ್ಸರ್) ಬಾರಿಸಿ ಗೆಲುವು ತಂದುಕೊಟ್ಟರು.‌

ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ತಂಡ ಕಳಪೆ ಪ್ರದರ್ಶನ ನೀಡಿತು. ಗ್ಲೆನ್ ಫಿಲಿಪ್ಸ್ 48, ಮಾರ್ಕ್ ಚಾಪ್ಮನ್ 32, ಮಿಚೆಲ್ ಸ್ಯಾಂಟ್ನರ್ 27, ಡ್ಯಾರಿಲ್ ಮಿಚೆಲ್ 14, ಟಿಮ್ ಸೀಫರ್ಟ್ 12 ರನ್‌ ಗಳಿಸಿದರು. ಟೀ ಇಂಡಿಯಾ ಬೌಲರ್‌ಗಳನ್ನು ಎದುರಿಸಲು ನ್ಯೂಜಿಲೆಂಡ್‌ ವಿಫಲವಾಯಿತು. ಇದನ್ನೂ ಓದಿ: ಐಸಿಸಿ ಚಾಟಿಗೆ ಮಂಡಿಯೂರಿದ ಪಾಕ್‌ – ಟಿ20 ವಿಶ್ವಕಪ್‌ಗೆ ತಂಡ ಪ್ರಕಟ; ಬಾಬರ್‌ ಆಜಂ ಬ್ಯಾಕ್‌

ಯಾರ್ಕರ್‌ ಕಿಂಗ್‌ ಜಸ್ಪ್ರಿತ್‌ ಬುಮ್ರಾ ಮಿಂಚಿನ ಬೌಲಿಂಗ್‌ ಮಾಡಿ 3 ವಿಕೆಟ್‌ ಕಬಳಿಸಿದರು. ಹಾರ್ದಿಕ್‌ ಪಾಂಡ್ಯ, ರವಿ ಬಿಷ್ಣೋಯ್‌ ತಲಾ 2, ಹರ್ಷಿತ್‌ ರಾಣಾ 1 ವಿಕೆಟ್‌ ಪಡೆದರು.

Share This Article