6 ರನ್ ಗಳ ರೋಚಕ ಗೆಲುವು- ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡ ಟೀಂ ಇಂಡಿಯಾ

Public TV
2 Min Read

ಕಾನ್ಪುರ: ಇಂದು ನಡೆದ ಭಾರತ ಹಾಗು ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ 6 ರನ್‍ಗಳ ಜಯವನ್ನು ದಾಖಲಿಸುವ ಮೂಲಕ ಸರಣಿಯನ್ನು ಗೆದ್ದುಕೊಂಡಿತು.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಶತಕ ಸಿಡಿಸಿದರು. ರೋಹಿತ್ ಶರ್ಮಾ ತನ್ನ ವೃತ್ತಿ ಜೀವನದ 15ನೇ ಶತಕ ದಾಖಲಿಸಿದರೆ, ಕೊಹ್ಲಿ ಶತಕ ದಾಖಲಿಸುವ ಮೂಲಕ 9 ಸಾವಿರ ರನ್ ಪೂರೈಸಿದ ದಾಖಲೆಯನ್ನು ಮಾಡಿದರು.

ಭಾರತದ ಪರ ಆರಂಭಿಕರಾಗಿ ಬ್ಯಾಟಿಂಗ್ ಆರಂಭಿಸಿದ ಶಿಖರ್ ದವನ್ 14 ರನ್ ಗಳಿಸಿದರು. ಸ್ಫೋಟಕ ಆಟಗಾರ ಪಾಂಡ್ಯ (8) ಆನಂತರದಲ್ಲಿ ಬಂದ ಧೋನಿ (25), ದಿನೇಶ್ ಕಾರ್ತಿಕ್ (4), ಕೇದರ್ ಜಾದವ್ (18) ರನ್ ಗಳಿಸಿದರು.

ವಿರಾಟ್ ಕೊಹ್ಲಿ ಏಕದಿನ ಪಂದ್ಯದಲ್ಲಿ 9 ಸಾವಿರ ರನ್ ಗಳಿಸಿದ 6ನೇ ಕ್ರಿಕೆಟಿಗ ಎಂದೆನಿಸಿದರು. ಇದಕ್ಕೂ ಮುನ್ನ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ ಹಾಗೂ ಮೊಹಮ್ಮದ್ ಅಜರುದ್ದೀನ್ ಈ ದಾಖಲೆ ಮಾಡಿದ್ದಾರೆ.

18 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ರೋಹಿತ್ ಶರ್ಮಾ 138 ಎಸೆತಗಳಲ್ಲಿ 147 ರನ್ ಗಳಿಸಿ ರೋಹಿತ್ ಶರ್ಮಾ ಔಟಾದರು. 8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ವಿರಾಟ್ ಕೊಹ್ಲಿ ಶತಕ ಬಾರಿಸಿದರು. ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾದ ಮೊದಲ ವಿಕೆಟ್ 7ನೇ ಓವರ್ ನ ಮೊದಲ ಎಸೆತದಲ್ಲಿ ಉರುಳಿತು. 14 ರನ್ ಗಳಿಸಿದ ಓಪನರ್ ಶಿಖರ್ ಧವನ್ ಸೌದಿ ಬೌಲಿಂಗ್ ನಲ್ಲಿ ಕೇನ್ ವಿಲಿಯಮ್ಸನ್ ಗೆ ಕ್ಯಾಚ್ ನೀಡಿ ಔಟಾದರು.

ಭಾರತದ ಸವಾಲಿನ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ಕಾಲಿನ್ ಮನ್ರೋ (75), ಟಾಮ್ ಲ್ಯಾಥಮ್ (65) ಮತ್ತು ನಾಯಕ ಕೇನ್ ವಿಲಿಯಂ(64) ಅವರ ಅರ್ಧ ಶತಕಗಳ ನೆರವಿನಿಂದ ಗೆಲುವಿನ ಸನಿಹದಲ್ಲಿ ಎಡವಿತು. ಬೌಲಿಂಗ್‍ನಲ್ಲಿ ಭಾರತದ ಪರ ಬೂಮ್ರ 3 ವಿಕೆಟ್, ಚಹಾಲ್ 2 ವಿಕೆಟ್, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *