ಕೊನೆಗೂ ತಂಡವನ್ನು ಗೆಲ್ಲಿಸಿದ ರಾಸ್ ಟೇಲರ್- 24 ವೈಡ್ ಎಸೆದ ಟೀಂ ಇಂಡಿಯಾ

Public TV
3 Min Read

– ನ್ಯೂಜಿಲೆಂಡಿಗೆ 4 ವಿಕೆಟ್‍ಗಳ ಜಯ
– 73 ಎಸೆತಗಳಲ್ಲಿ ಟೇಲರ್ ಶತಕ

ಹ್ಯಾಮಿಲ್ಟನ್: ಕ್ಲೀನ್‍ಸ್ವಿಪ್ ಮೂಲಕ ಟಿ20 ಸರಣಿ ಗೆದ್ದು ಬೀಗಿದ್ದ ಭಾರತವನ್ನು ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋಲಿಸಿದೆ. 4 ವಿಕೆಟ್‍ಗಳ ಜಯ ಪಡೆದ ನ್ಯೂಜಿಲೆಂಡ್ 3 ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಹ್ಯಾಮಿಲ್ಟನ್‍ನಲ್ಲಿ ಬುಧವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ್ದ 347 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 11 ಎಸೆತಗಳು ಬಾಕಿ ಇರುವಂತೆ 4 ವಿಕೆಟ್‍ಗಳಿಂದ ಗೆದ್ದು ಬೀಗಿದೆ.

ನ್ಯೂಜಿಲೆಂಡ್ ಪರ ರಾಸ್ ಟೇಲರ್ ಔಟಾಗದೆ 109 ರನ್ (84 ಎಸೆತ, 10 ಬೌಂಡರಿ, 4 ಸಿಕ್ಸರ್), ಹೆನ್ರಿ ನಿಕೋಲ್ಸ್ 78 ರನ್ (82 ಎಸೆತ, 11 ಬೌಂಡರಿ), ಟಾಮ್ ಲಾಥಮ್ 69 ರನ್ (48 ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ಮಿಂಚಿ  ಸ್ಯಾಂಟ್ನರ್ ಔಟಾಗದೆ 12 ರನ್ (9 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿದರು.

ಭಾರತದ ನೀಡಿದ್ದ 347 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‍ನ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮಾರ್ಟಿನ್ ಗಪ್ಟಿಲ್ ಹಾಗೂ ಹೆನ್ರಿ ನಿಕೋಲ್ಸ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್‍ಗೆ ಈ ಜೋಡಿಯು 85 ರನ್ ಜೊತೆಯಾಟದ ಕೊಡುಗೆ ನೀಡಿತು. ಮಾರ್ಟಿನ್ ಗಪ್ಟಿಲ್ 32 ರನ್ (41 ಎಸೆತ, ಬೌಂಡರಿ) ಸಿಡಿಸಿ ಶಾರ್ದೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಮೈದಾಕ್ಕಿಳಿದ ಟಾಮ್ ಬ್ಲುಂಡೆಲ್ 9 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತರೆಳಿದರು.

ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್ ಮುಂದುವರಿಸಿದ ಹೆನ್ರಿ ನಿಕೋಲ್ಸ್ ಗೆ ರಾಸ್ ಟೇಲರ್ ಸಾಥ್ ನೀಡಿದರು. ಈ ಜೋಡಿ 3ನೇ ವಿಕೆಟ್‍ಗೆ 62 ರನ್ ಜೊತೆಯಾಟದ ಕೊಡುಗೆ ನೀಡಿದರು. ಆದರೆ 78 ರನ್ ಗಳಿಸಿದ್ದ ಹೆನ್ರಿ ನಿಕೋಲ್ಸ್ ಇನ್ನಿಂಗ್ಸ್ ನ 29ನೇ ಓವರಿನಲ್ಲಿ ಒಂಟಿ ರನ್ ಕದಿಯಲು ಹೋಗಿ ವಿರಾಟ್ ಕೊಹ್ಲಿ ಅವರಿಂದ ರನೌಟ್ ಆದರು. ಬಳಿಕ ಮೈದಾಕ್ಕಿಳಿದ ಟಾಂಮ್ ಲಾಥಮ್ ರಾಸ್ ಟೇಲರ್ ಜೋಡಿ ಭರ್ಜರಿ ಬ್ಯಾಟಿಂಗ್ ಮಾಡಿ 138 ರನ್ ಗಳಿಸಿ ತಂಡವನ್ನು ಗೆಲುವಿ ದಡಕ್ಕೆ ಸಮೀಪಿಸಿತು.

ನಾಲ್ಕನೇ ವಿಕೆಟ್‍ಗೆ ನ್ಯೂಜಿಲೆಂಡ್ 309 ರನ್ ಪೇರಿಸಿತ್ತು. ಆದರೆ ರಾಸ್ ಟೇಲರ್‍ಗೆ ಸಾಥ್ ನೀಡಲು ವಿಫಲರಾದ ಜೇಮ್ಸ್ ನೀಶಮ್ 9 ರನ್ ಹಾಗೂ ಕಾಲಿನ್ ಡಿ ಗ್ರ್ಯಾಂಡ್‍ಹೋಮ್ 1 ರನ್‍ಗೆ ವಿಕೆಟ್ ಒಪ್ಪಿಸಿದರು. ಇನ್ನಿಂಗ್ಸ್ 47ನೇ ಮುಕ್ತಾಯಕ್ಕೆ ನ್ಯೂಜಿಲೆಂಡ್ 334 ರನ್ ಪೇರಿಸಿತ್ತು. ಕೊನೆಯ 18 ಎಸೆತಗಳಲ್ಲಿ 14 ಅಗತ್ಯವಿತ್ತು. ಆಗ ರಾಸ್ ಟೇಲರ್ ಒಂಟಿ ರನ್ ತೆಗೆದರೆ, ಮಿಚೆಲ್‌ ಸ್ಯಾಂಟ್ನರ್ ಸಿಕ್ಸ್, ಬೌಂಡರಿ ಹಾಗೂ ಒಂಟಿ ರನ್ ಗಳಿಸಿದರು. ಪಂದ್ಯದ ಕೊನೆಯವರೆಗೂ ರಾಸ್ ಟೇಲರ್ ಔಟಾಗದೆ ಇದ್ದಿದ್ದು ಗೆಲುವಿಗೆ ಕಾರಣವಾಯಿತು. ಕಳೆದ ಟಿ20 ಪಂದ್ಯದಲ್ಲಿ ರಾಸ್ ಟೇಲರ್ ವಿಕೆಟ್ ಬಳಿಕ ಎಲ್ಲಾ ಆಟಗಾರರು ಬಹುಬೇಗ ವಿಕೆಟ್ ಪೆವಿಲಿಯನ್ ತೆರಳಿದ್ದು ಸೂಪರ್ ಓವರ್ ಹಾಗೂ ಸೋಲಿಗೆ ಕಾರಣವಾಗಿತ್ತು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಭಾರತ ಶ್ರೇಯಸ್ ಅಯ್ಯರ್ ರನ್ 103 (107 ಎಸೆತ, 11 ಬೌಂಡರಿ, ಸಿಕ್ಸ್), ಕೆ.ಎಲ್.ರಾಹುಲ್ ಔಟಾಗದೆ 88 ರನ್ (64 ಎಸೆತ, 3 ಬೌಂಡರಿ, 6 ಸಿಕ್ಸರ್), ವಿರಾಟ್ ಕೊಹ್ಲಿ 51 ರನ್ (63 ಎಸೆತ, 6 ಬೌಂಡರಿ) ಹಾಗೂ ಕೇದಾರ್ ಜಾದವ್ ಔಟಾಗದೆ 26 ರನ್ (15 ಎಸೆತ, 3 ಬೌಂಡರಿ, ಸಿಕ್ಸ್) ಸೇರಿ 4 ವಿಕೆಟ್‍ಗೆ 347 ರನ್ ಪೇರಿಸಿತ್ತು.

ಇತರೇ ರನ್: ನ್ಯೂಜಿಲೆಂಡ್ ಬೌಲರ್ ಗಳು ಇತರೇ ರೂಪದಲ್ಲಿ 27 ರನ್(7 ಲೆಗ್ ಬೈ, 1 ನೋಬಾಲ್, 19 ವೈಡ್) ನೀಡಿದ್ದರೆ ಭಾರತ 29 ರನ್(4 ಲೆಗ್ ಬೈ, 1 ನೋಬಾಲ್, 24 ವೈಡ್) ನೀಡಿತ್ತು.

ನ್ಯೂಜಿಲೆಂಡ್ ರನ್ ಏರಿದ್ದು ಹೇಗೆ?
50 ರನ್- 59 ಎಸೆತ
100 ರನ್- 107 ಎಸೆತ
150 ರನ್- 153 ಎಸೆತ
200 ರನ್- 222 ಎಸೆತ
250 ರನ್- 239 ಎಸೆತ
300 ರನ್- 243 ಎಸೆತ

Share This Article
Leave a Comment

Leave a Reply

Your email address will not be published. Required fields are marked *