ಟೀಂ ಇಂಡಿಯಾ ಬೌಲರ್‌ಗಳ ಅಬ್ಬರಕ್ಕೆ ಆಂಗ್ಲರ ಪಡೆ ತತ್ತರ; ಭಾರತದ ಗೆಲುವಿಗೆ 193 ರನ್‌ ಗುರಿ

Public TV
1 Min Read

ಲೀಡ್ಸ್‌: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಅಬ್ಬರಿಸಿದ್ದಾರೆ. 192 ರನ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡ ಆಂಗ್ಲರ ಪಡೆ ಭಾರತದ ಗೆಲುವಿಗೆ 193 ರನ್‌ ಗುರಿ ನೀಡಿದೆ.

2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಬೌಲರ್‌ಗಳ ಆರ್ಭಟಕ್ಕೆ ಆಂಗ್ಲರು ಲಯ ಕಳೆದುಕೊಂಡರು. ವಿಕೆಟ್‌ಗಳು ತರಗೆಲೆಯಂತೆ ಉರುಳಿದವು. ಜೋ ರೂಟ್‌ 40, ಬೆನ್‌ ಸ್ಟೋಕ್ಸ್‌ 33, ಹ್ಯಾರಿ ಬ್ರೂಕ್‌ 23, ಜ್ಯಾಕ್ ಕ್ರಾಲಿ 22 ರನ್‌ ಗಳಿಸಿದರು.

181 ರನ್‌ಗಳಿಗೆ ಅದಾಗಲೇ 7 ವಿಕೆಟ್‌ ಕಳೆದುಕೊಂಡು ಇಂಗ್ಲೆಂಡ್‌ ತತ್ತರಿಸಿಹೋಗಿತ್ತು. ಇನ್ನು 11 ರನ್‌ಗಳ ಅಂತರದಲ್ಲಿ ಒಂದರ ಹಿಂದೆ ಒಂದರಂತೆ 3 ವಿಕೆಟ್‌ ಒಪ್ಪಿಸಿತು. ಅಂತಿಮವಾಗಿ 192 ರನ್‌ ಗಳಿಸಿ ಇಂಗ್ಲೆಂಡ್‌ ಆಲೌಟ್‌ ಆಯಿತು.

ಟೀಂ ಇಂಡಿಯಾ ಪರ ವಾಷಿಂಗ್ಟನ್‌ ಸುಂದರ್‌ 4 ವಿಕೆಟ್‌ ಪಡೆದು ಅಬ್ಬರಿಸಿದರು. ಜಸ್ಪ್ರಿತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ತಲಾ 2, ನಿತಿಶ್‌ ಕುಮಾರ್‌ ರೆಡ್ಡಿ, ಆಕಾಶ್‌ ದೀಪ್‌ ತಲಾ 1 ವಿಕೆಟ್‌ ಪಡೆದರು.

ಟೀಂ ಇಂಡಿಯಾ ಬ್ಯಾಟಿಂಗ್‌ ಆರಂಭಿಸಿದ್ದು, ಯಶಸ್ವಿ ಜೈಸ್ವಾಲ್‌ ಶೂನ್ಯ ಸುತ್ತಿ ಪೆವಿಲಿಯನ್‌ ಕಡೆ ನಡೆದರು. ಇನ್ನು ಕೆ.ಎಲ್‌.ರಾಹುಲ್‌ ಮತ್ತು ಕರುಣ್‌ ನಾಯರ್‌ ಜೋಡಿ ಬ್ಯಾಟಿಂಗ್‌ ಮಾಡುತ್ತಿದ್ದು, ಟೀಂ ಇಂಡಿಯಾ 1 ವಿಕೆಟ್‌ ನಷ್ಟಕ್ಕೆ 40 ರನ್‌ ಗಳಿಸಿದೆ.

Share This Article