World Cup 2023- ನೀವು ನಮ್ಮ ಹೆಮ್ಮೆ- ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಸಚಿನ್ ಜೆರ್ಸಿ ಗಿಫ್ಟ್

Public TV
1 Min Read

ಅಹಮದಾಬಾದ್: ವಿಶ್ವಕಪ್ 2023ರ (World Cup 2023) ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium Ahemadabad) ನಡೆದ ಒಂದು ಘಟನೆ ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಗಿದೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (sachin Tendulakr) ಅವರು ತಮ್ಮ ಸಹಿ ಇರುವ ಜೆರ್ಸಿಯನ್ನು ವಿರಾಟ್ ಕೊಹ್ಲಿಗೆ (Virat Kohli) ಉಡುಗೊರೆಯಾಗಿ ನೀಡಿದ ಪ್ರಸಂಗ ನಡೆಯಿತು. ಜೆರ್ಸಿಯಲ್ಲಿ (Jersey) ಸಹಿ ಜೊತೆಗೆ ವಿರಾಟ್, ನೀವು ನಮ್ಮನ್ನು ಹೆಮ್ಮೆ ಪಡಿಸಿದ್ದೀರಿ ಎಂಬ ಹೃತ್ಪೂರ್ವಕ ಸಂದೇಶ ಕೂಡ ಬರೆಯಲಾಗಿದೆ. ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತವು ಆಸ್ಟ್ರೇಲಿಯಾ ತಂಡವನ್ನು ಎದುರಿಸುವ ಮುನ್ನವೇ ಮಾಸ್ಟರ್ ಬ್ಲಾಸ್ಟರ್ ನ ಈ ಭಾವನಾತ್ಮಕ ನಡೆಗೆ ಕ್ರೀಡಾಭಿಮಾನಿಗಳು ಸಾಕ್ಷಿಯಾದರು.

 

View this post on Instagram

 

A post shared by ICC (@icc)

 

ಈ ಜೆರ್ಸಿಯು ಬಹಲ ಪ್ರಾಮುಖ್ಯತೆ ಪಡೆದಿದೆ. ಇದು 100 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ಮೊದಲ ಬ್ಯಾಟ್ಸ್ ಮನ್ ತೆಂಡೂಲ್ಕರ್‌ರಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ದಾಖಲೆಗಳನ್ನು ಮುರಿದು ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿರುವ ಕೊಹ್ಲಿಯವರೆಗೆ ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ರವಾನೆಯಾದ ಜ್ಯೋತಿಯನ್ನು ಪ್ರತಿನಿಧಿಸುತ್ತದೆ.

ಸಹಿ ಹಾಕಿದ ಜೆರ್ಸಿ ಕೇವಲ ಸ್ಮರಣಿಕೆಗಳಲ್ಲ; ಇದು ತೆಂಡೂಲ್ಕರ್ ಅವರ ಮನ್ನಣೆಯ ಸಂಕೇತವಾಗಿದೆ. ಭಾರತ ಕ್ರಿಕೆಟ್‍ಗೆ ಕೊಹ್ಲಿಯ ಕೊಡುಗೆಗಳನ್ನು ಮತ್ತು ರಾಷ್ಟ್ರವನ್ನು ಪ್ರೇರೇಪಿಸುವಲ್ಲಿ ಅವರ ಪಾತ್ರವನ್ನು ಗುರುತಿಸುತ್ತದೆ. ಇದನ್ನೂ ಓದಿ: ಮೂರು ಫೈನಲ್‌ ಪೈಕಿ ಟಾಸ್‌ ಸೋತ ಎರಡರಲ್ಲಿ ಭಾರತ ಚಾಂಪಿಯನ್‌ – ಈ ಬಾರಿ ಏನಾಗಬಹುದು?

ಈ ಹಿಂದೆ ಭಾರತ ಹಾಗೂ ಪಾಕಿಸ್ತಾನ (India- Pakistan) ನಡುವಿನ ಪಂದ್ಯ ಮುಗಿದ ನಂತರ ಪಾಕಿಸ್ತಾನ ನಾಯಕ ಬಾಬರ್ ಆಜಮ್ ಅವರನ್ನು ವಿರಾಟ್ ಕೊಹ್ಲಿ  ಮೈದಾನದಲ್ಲೇ ಭೇಟಿ ಮಾಡಿ ಧೈರ್ಯ ತುಂಬಿದ್ದಲ್ಲದೆ ತಮ್ಮ ಹಸ್ತಾಕ್ಷರವುಳ್ಳ ಭಾರತ ತಂಡದ 2 ಜೆರ್ಸಿಗಳನ್ನು ನೀಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು. ಈ ಫೋಟೋ ‘ಎಕ್ಸ್’ ಖಾತೆ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

Share This Article