IND vs AUS ಮೂರನೇ ಟೆಸ್ಟ್‌ | ಮೊದಲ ದಿನ ಮಳೆಗೆ ಬಲಿ

Public TV
1 Min Read

ಬ್ರಿಸ್ಬೇನ್: ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಣ ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ (Third Test) ಪಂದ್ಯ ಮೊದಲ ದಿನದ ಮಳೆಗೆ (Rain) ಬಲಿಯಾಗಿದೆ.

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohith Sharma) ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 13.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ. ಆರಂಭಿಕ ಆಟಗಾರರಾದ ಉಸ್ಮಾನ್ ಖ್ವಾಜಾ 19 ರನ್‌ ನೇಥನ್ ಮೆಕ್‌ಸ್ವೀನಿ 4 ಕ್ರೀಸಿನಲ್ಲಿದ್ದಾರೆ.

ದಿನದಾಟದ ಮೊದಲ ಅವಧಿಯಲ್ಲೇ ಸುರಿದ ಸತತ ಮಳೆಯಿಂದಾಗಿ ಭೋಜನ ವಿರಾಮವನ್ನು ಬೇಗನೇ ತೆಗೆದುಕೊಳ್ಳಲಾಯಿತು. ಎರಡನೇ ಅವಧಿಗೂ ಮಳೆ ಅಡ್ಡಿಯಾಯಿತು. ಅಂತಿಮವಾಗಿ ಟೀ ವಿರಾಮದ ಬಳಿ ಮೊದಲ ದಿನದಾಟವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಇದನ್ನೂ ಓದಿ: ಷರತ್ತು ವಿಧಿಸಿ ಹೈಬ್ರಿಡ್‌ ಮಾದರಿಗೆ ಪಾಕ್‌ ಒಪ್ಪಿಗೆ – ದುಬೈನಲ್ಲಿ ಭಾರತದ ಪಂದ್ಯ

ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆ ಮಾಡಲಾಗಿತ್ತು. ಹರ್ಷೀತ್ ರಾಣಾ ಮತ್ತು ರವಿಚಂದ್ರನ್ ಅಶ್ವಿನ್ ಜಾಗದಲ್ಲಿ ಆಕಾಶ್ ದೀಪ್ ಮತ್ತು ರವೀಂದ್ರ ಜಡೇಜಾ ಆಡುತ್ತಿದ್ದಾಎ.

ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು 1-1ರಲ್ಲಿ ಸಮಬಲಗೊಂಡಿದೆ. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 295 ರನ್ ಅಂತರದ ಜಯ ಗಳಿಸಿದ್ದರೆ ಅಡಿಲೇಡ್‌ನಲ್ಲಿ ನಡೆದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿತ್ತು.

Share This Article