ಬೌಲರ್‌ಗಳ ಆಟಕ್ಕೆ ಕಂಗಾಲು – ಮೊದಲ ದಿನವೇ ಆಸೀಸ್ ಸರ್ವಪತನ

Public TV
2 Min Read

ನವದೆಹಲಿ: ಮೊಹಮ್ಮದ್ ಶಮಿ (Mohammed Shami) ಮಾರಕ ಬೌಲಿಂಗ್ ಹಾಗೂ ರವೀಂದ್ರ ಜಡೇಜಾ (Ravindra Jadeja), ಆರ್.ಅಶ್ವಿನ್ (Ravichandran Ashwin) ಸ್ಪಿನ್ ದಾಳಿಗೆ ಕಂಗಾಲಾದ ಕಾಂಗರೂಪಡೆ ಮೊದಲ ದಿನವೇ 263 ರನ್‌ಗಳಿಗೆ ಆಲೌಟ್ ಆಗಿದೆ.

ಆಸ್ಟ್ರೇಲಿಯಾ (Australia) ಎದುರು ಇನ್ನಿಂಗ್ಸ್ ಆರಂಭಿಸಿದ ಭಾರತ (India) ಮೊದಲ ದಿನದಾಟದ ಅಂತ್ಯಕ್ಕೆ 9 ಓವರ್‌ಗಳಲ್ಲಿ 21 ರನ್‌ಗಳಿಸಿ 242 ರನ್‌ಗಳ ಹಿನ್ನಡೆಯಲ್ಲಿದೆ. ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ರಾಜೀನಾಮೆ

ಬಾರ್ಡರ್ ಗಾವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಟಾಸ್ ಗೆದ್ದು ಕ್ರೀಸ್‌ಗಿಳಿದ ಆಸ್ಟ್ರೇಲಿಯಾ ತಂಡ 78.4 ಓವರ್‌ಗಳಲ್ಲಿ 263 ರನ್‌ಗಳಿಸಿ ಸರ್ವಪತನಕಂಡಿತು. ಇದನ್ನೂ ಓದಿ: ಕ್ರಿಕೆಟಿಗ ಪೃಥ್ವಿ ಶಾ ಕಾರಿನ ಮೇಲೆ ದಾಳಿ – ಸಿನಿ ತಾರೆ ಸಪ್ನಾ ಗಿಲ್ ಅರೆಸ್ಟ್

ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ (David Warner) ಹಾಗೂ ಉಸ್ಮಾನ್ ಖವಾಜ (Usman Khawaja) ಜೋಡಿ ಅಧಿಕ ರನ್‌ಗಳಿಸುವಲ್ಲಿ ವಿಫಲವಾಯಿತು. 15.2 ಓವರ್‌ಗಳಲ್ಲಿ 50 ರನ್‌ಗಳಿಸಿದ್ದಾಗಲೇ ಆಸ್ಟ್ರೇಲಿಯಾ ತಂಡ ಮೊದಲ ವಿಕೆಟ್ ಕಳೆದುಕೊಂಡಿತು. 44 ಎಸೆತಗಳಲ್ಲಿ ಕೇವಲ 15 ರನ್‌ಗಳಿಸಿದ್ದ ಡೇವಿಡ್ ವಾರ್ನರ್ ಶೀಘ್ರವೇ ಪೆವಿಲಿಯನ್ ಸೇರಿದ್ರು. ನಂತರ ಜೊತೆಗೂಡಿದ ಮತ್ತೋರ್ವ ಆರಂಭಿಕ ಉಸ್ಮಾನ್ ಖವಾಜ ಹಾಗೂ ಮಾರ್ನಸ್ ಲಾಬುಶೇನ್ 2ನೇ ವಿಕೆಟ್ ಜೊತೆಯಾಟಕ್ಕೆ 91 ರನ್ ಪೇರಿಸಿದರು. ಈ ವೇಳೆ ಲಾಬುಶೇನ್ 4 ಬೌಂಡರಿಗಳಿಗೆ 18 ರನ್‌ಗಳಿಸಿ ಔಟಾದರು.

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಸ್ಟೀವನ್ ಸ್ಮಿತ್ (Steven Smith) ಎರಡೇ ಎಸೆತಗಳಲ್ಲಿ ಡಕೌಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಇದರ ಬೆನ್ನಲ್ಲೇ 81 ರನ್‌ಗಳಿಸಿ (12 ಬೌಂಡರಿ, 1 ಸಿಕ್ಸರ್) ಶತಕದ ನಿರೀಕ್ಷೆಯಲ್ಲಿದ್ದ ಖವಾಜ ಸಹ ಜಡೇಜಾಗೆ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಪ್ಯಾಟ್ ಕಮ್ಮಿನ್ಸ್ (Pat Cummins) 33 ರನ್ ಗಳಿಸಿ ಔಟಾಗುತ್ತಿದ್ದಂತೆ ಒಂದೊಂದೇ ವಿಕೆಟ್‌ಗಳು ಪತನಗೊಂಡಿತು.

ಅಂತಿಮವಾಗಿ ಆಸ್ಟ್ರೇಲಿಯಾ 78.4 ಓವರ್‌ಗಳಲ್ಲಿ 263 ರನ್‌ಗಳಿಸಿ ಆಲೌಟ್ ಆಯಿತು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಪೀಟರ್ ಹ್ಯಾಂಡ್ಸ್‌ಕೋಬ್‌ 9 ಬೌಂಡರಿಯೊಂದಿಗೆ 72 ರನ್‌ಗಳಿಸಿ ಅಜೇಯರಾಗುಳಿದರು.

ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 4 ವಿಕೆಟ್ ಪಡೆದು ಅಬ್ಬರಿಸಿದರೆ, ರವೀಂದ್ರ ಜಡೇಜಾ, ಆರ್. ಅಶ್ವಿನ್ ತಲಾ 3 ವಿಕೆಟ್ ಪಡೆದರು.

ಮೊದಲ ದಿನದ ಅಂತ್ಯಕ್ಕೆ ಭಾರತ 9 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 21 ರನ್‌ಗಳಿಸಿ 242 ರನ್‌ಗಳ ಹಿನ್ನಡೆಯಲ್ಲಿದ್ದಾರೆ. ನಾಯಕ ರೋಹಿತ್ ಶರ್ಮಾ (Rohit Sharma) 13 ರನ್ (34 ಎಸೆತ, 1 ಬೌಂಡರಿ) ಗಳಿಸಿದ್ದರೆ, ಕೆ.ಎಲ್ ರಾಹುಲ್ (KL Rahul) 20 ಎಸೆಗಳಲ್ಲಿ 4 ರನ್‌ಳಿಸಿದ್ದು, ಶನಿವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *