ಭಾರತಕ್ಕೆ ಸೋಲು – ಆಸೀಸ್‌ಗೆ 6 ವಿಕೆಟ್‌ಗಳ ಜಯ

Public TV
1 Min Read

ಮುಂಬೈ: ಆಸ್ಟ್ರೇಲಿಯಾ (Australia) ವಿರುದ್ಧ ಏಕೈಕ ಪಂದ್ಯದ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ (India) ಮಹಿಳಾ ಕ್ರಿಕೆಟ್​ ತಂಡ ಏಕದಿನ (1st ODI) ಸರಣಿಯ ಮೊದಲ ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ. ಆಸ್ಟ್ರೇಲಿಯಾ 6 ವಿಕೆಟ್‌ಗಳ ಜಯದೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ 8 ವಿಕೆಟ್‌ ನಷ್ಟಕ್ಕೆ 282 ರನ್‌ ಗಳಿಸಿತು. ಈ ಮೊತ್ತವನ್ನು ಚೇಸ್‌ ಮಾಡಿದ ಆಸ್ಟ್ರೇಲಿಯಾ 46.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 285 ರನ್‌ ಹೊಡೆದು ಜಯ ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ. ಇದನ್ನೂ ಓದಿ: ಭಾರತಕ್ಕೆ ಹೀನಾಯ ಸೋಲು – ಆಫ್ರಿಕಾಗೆ ಇನ್ನಿಂಗ್ಸ್‌ , 32 ರನ್‌ಗಳ ಜಯ

ಆಸ್ಟ್ರೇಲಿಯಾ ಪರ ಫೋಬೆ ಲಿಚ್‌ಫೀಲ್ಡ್ 78 ರನ್‌ (89 ಎಸೆತ, 8 ಬೌಂಡರಿ, 1 ಸಿಕ್ಸರ್‌), ಎಲ್ಲಿಸ್ ಪೆರ್ರಿ 75 ರನ್‌ (72 ಎಸೆತ, 9 ಬೌಂಡರಿ, 2 ಸಿಕ್ಸರ್‌), ಬೆತ್ ಮೂನಿ 42 ರನ್‌(47 ಎಸೆತ, 4 ಬೌಂಡರಿ), ತಹ್ಲಿಯಾ ಮೆಕ್‌ಗ್ರಾತ್ ಔಟಾಗದೇ 68 ರನ್‌(55 ಎಸೆತ, 11 ಬೌಂಡರಿ) ಹೊಡೆಯುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು.

ಭಾರತದ ಪರ ಯಸ್ತಿಕಾ ಭಾಟಿಯಾ 49 ರನ್‌ (64 ಎಸೆತ, 7 ಬೌಂಡರಿ), ಜೆಮಿಮಾ ರಾಡ್ರಿಗಸ್ 82 ರನ್‌ (77 ಎಸೆತ, 7 ಬೌಂಡರಿ), ಕೊನೆಯಲ್ಲಿ ಪೂಜಾ ವಸ್ತ್ರಕರ್ ಔಟಾಗದೇ ಸ್ಫೋಟಕ 62 ರನ್‌(46 ಎಸೆತ, 7 ಬೌಂಡರಿ, 2 ಸಿಕ್ಸರ್)‌ ಹೊಡೆದ ಪರಿಣಾಮ ಭಾರತ 280 ರನ್‌ಗಳ ಗಡಿಯನ್ನು ದಾಟಿತ್ತು. ಇದನ್ನೂ ಓದಿ: ಗುಜರಾತ್‌ನಲ್ಲಿ ಟೆಸ್ಲಾ ಘಟಕ – ಜನವರಿಯಲ್ಲಿ ಘೋಷಣೆ ಸಾಧ್ಯತೆ

 

Share This Article