ಚೀನಾ, ಪಾಕ್‌, ಬಾಂಗ್ಲಾಗೆ ಹೋಲಿಸಿದ್ರೆ ಭಾರತಕ್ಕೆ ಈಗ ಕಡಿಮೆ ಸುಂಕ

2 Min Read

ನವದೆಹಲಿ: ಯುರೋಪಿಯನ್‌ ಒಕ್ಕೂಟದ (European Union) ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಬಿದ್ದ ಬೆನ್ನಲ್ಲೇ ಅಮೆರಿಕ (USA) ಭಾರತದ (India) ಮೇಲೆ ವಿಧಿಸಿದ್ದ ಸುಂಕವನ್ನು ಕಡಿತ ಮಾಡಿದೆ.

ಟ್ರಂಪ್‌ (Donald Trump) ಅಧಿಕಾರಕ್ಕೆ ಏರಿದ ಬಳಿಕ ಪ್ರತಿ ತೆರಿಗೆ, ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ 25% ದಂಡ ಸೇರಿದಂತೆ ಭಾರತದ ವಸ್ತುಗಳಿಗೆ ಅಮೆರಿಕ 50% ಸುಂಕವನ್ನು ವಿಧಿಸಿತ್ತು. ಈ ಟ್ರಂಪ್‌ ಈಗ 18% ಮಾತ್ರ ತೆರಿಗೆ ವಿಧಿಸುವುದಾಗಿ ಹೇಳಿದ್ದಾರೆ.

ಟ್ರಂಪ್‌ ನಿರ್ಧಾರದಿಂದ ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾಕ್ಕೆ ಹೋಲಿಸಿದರೆ ಭಾರತದ ಮೇಲೆ ಕಡಿಮೆ ತೆರಿಗೆ ಬಿದ್ದಿದೆ.  ಇದನ್ನೂ ಓದಿ: ಭಾರತದ ಮೇಲಿನ ಸುಂಕ 18% ಗೆ ಇಳಿಕೆ – 500 ಶತಕೋಟಿ ಡಾಲರ್‌ ಒಪ್ಪಂದ ಘೋಷಿಸಿದ ಟ್ರಂಪ್‌

ಹೆಚ್ಚಿನ ಸುಂಕ ಯಾವ ದೇಶಕ್ಕೆ
ಚೀನಾ: 37%
ಬ್ರೆಜಿಲ್: 50%
ದಕ್ಷಿಣ ಆಫ್ರಿಕಾ: 30%
ಮ್ಯಾನ್ಮಾರ್: 40%
ಲಾವೋಸ್: 40%


ಕಡಿಮೆ ಸುಂಕ ಯಾವ ದೇಶಕ್ಕೆ?
ಯುರೋಪಿಯನ್ ಯೂನಿಯನ್: 15%
ಜಪಾನ್: 15%
ದಕ್ಷಿಣ ಕೊರಿಯಾ: 15%
ಸ್ವಿಟ್ಜರ್ಲೆಂಡ್: 15%
ಯುನೈಟೆಡ್ ಕಿಂಗ್‌ಡಮ್: 10%

ಆಗ್ನೇಯ ಏಷ್ಯಾದಲ್ಲಿ ಯಾರಿಗೆ ಎಷ್ಟು?
ಬಾಂಗ್ಲಾದೇಶ: 20%
ವಿಯೆಟ್ನಾಂ: 20%
ಮಲೇಷ್ಯಾ: 19%
ಕಾಂಬೋಡಿಯಾ: 19%
ಥೈಲ್ಯಾಂಡ್: 19%
ಪಾಕಿಸ್ತಾನ: 19%

ಟ್ರಂಪ್ ಹಾಕಿದ್ದ ಸುಂಕಗಳು ಯಾವುದು?
10% ಮೂಲ ಸುಂಕ: ಏಪ್ರಿಲ್ 2025 ರಿಂದ ಬಹುತೇಕ ಎಲ್ಲಾ ಅಮೆರಿಕದ ಆಮದುಗಳಿಗೆ ಅನ್ವಯಿಸಲಾದ ಸಾಮಾನ್ಯ ಸುಂಕ.
15% ಪ್ರತಿ ಸುಂಕ: ಅಮೆರಿಕ ಉತ್ಪನ್ನಗಳ ಮೇಲೆ ಭಾರತವು ತನ್ನದೇ ಆದ ಹೆಚ್ಚಿನ ಸುಂಕ ಹಾಕಿದ್ದಕ್ಕೆ ವಿಧಿಸಿದ ಸುಂಕ.
25% ದಂಡ ಸುಂಕ: ಆಗಸ್ಟ್ 27, 2025 ರಂದು ಹೆಚ್ಚುವರಿ ಸುಂಕವನ್ನು ಹಾಕಲಾಗುತ್ತಿದೆ. ನಿರ್ದಿಷ್ಟವಾಗಿ ರಷ್ಯಾದ ತೈಲ ಆಮದುಗಳನ್ನು ನಿಲ್ಲಿಸಲು ಭಾರತ ನಿರಾಕರಿಸಿದ್ದಕ್ಕೆ ದಂಡದ ರೂಪದಲ್ಲಿ ಹಾಕಲಾಗುತ್ತಿದೆ. ಹೀಗಾಗಿ ಒಟ್ಟು 50% ಸುಂಕವನ್ನು ಅಮೆರಿಕ ಭಾರತದ ಕೆಲ ವಸ್ತುಗಳಿಗೆ ವಿಧಿಸಿತ್ತು.

Share This Article