ಶುಭಮನ್‌ ಗಿಲ್‌ ಚೊಚ್ಚಲ ಶತಕದ ಅಬ್ಬರ – ಕ್ಲೀನ್‌ಸ್ವೀಪ್‌ನಲ್ಲಿ ಸರಣಿಗೆದ್ದ ಭಾರತ

Public TV
3 Min Read

ಹರಾರೆ: ಶುಭಮನ್ ಗಿಲ್ ಭರ್ಜರಿ ಶತಕ ಹಾಗೂ ಇಶಾನ್ ಕಿಶನ್ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ 13 ರನ್‌ಗಳ ಜಯ ಸಾಧಿಸಿತು. ಜಿಂಬಾಬ್ವೆ ವಿರುದ್ಧ ಕ್ಲೀನ್‌ಸ್ವೀಪ್‌ ಮಾಡಿರುವ ಭಾರತ ತವರಿನಲ್ಲೇ ವೈಟ್‌ವಾಶ್ ಮಾಡಿತು.

ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡದ ಯುವ ಬ್ಯಾಟ್ಸ್ಮನ್ ಶುಭಮನ್ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು.

ಟಾಸ್‌ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 289 ರನ್ ಗಳಿಸಿ ಎದುರಾಳಿ ಜಿಂಬಾಬ್ವೆಗೆ 290 ರನ್‌ಗಳ ಗುರಿ ನೀಡಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಜಿಂಬಾಬ್ವೆ 49.3 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 276 ರನ್ ಗಳಿಸಿ ತವರಿನಲ್ಲೇ ಮುಖಭಂಗ ಅನುಭವಿಸಿತು.

ಟಾಸ್‌ಗೆದ್ದು ನಂತರ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿತು. ಸೀಮಿತ ಓವರ್‌ಳಿಗೆ ತಕ್ಕಂತೆ ರನ್ ಬರುತ್ತಿದ್ದರೂ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಹೋಯಿತು. ಆರಂಭಿಕರಾಗಿ ಕ್ರೀಸ್‌ಗಿಳಿದ ತಕುದಾಜ್ವನಾಶೆ ಕೈತಾನೋ 12 ರನ್ ಹಾಗೂ ಇನ್ನೋಸೆಂಟ್ ಕೈಯಾ 6 ರನ್‌ಗಳಿಸಿ ಪೆವಿಲಿಯನ್ ಸೇರಿದರು.

2ನೇ ಕ್ರಮಾಂಕದಲ್ಲಿ ಕ್ರೀಸ್‌ಗಳಿದ ಸೇನ್ ವಿಲಿಯಮ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 64 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 45 ರನ್ ಬಾರಿಸಿದರು. ಇವರಿಗೆ ಜೊತೆಯಾದ ಟೋನಿ ಮುನಿಯೊಂಗಾ 15 ರನ್‌ಗಳಿಸಿ ಸಾಥ್ ನೀಡಿದರು. ಇದೇ ವೇಳೆಗೆ ಸೇನ್ ವಿಕೆಟ್ ಒಪ್ಪಿಸಬೇಕಾಯಿತು. ಒಟ್ಟಿನಲ್ಲಿ ಪವರ್ ಪ್ಲೇ ಮುಗಿಯುವ ಹೊತ್ತಿಗೆ ಜಿಂಬಾಬ್ವೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದು ಟೀಂ ಇಂಡಿಯಾ ಗೆಲುವಿಗೆಸುಲಭ ತುತ್ತಾಯಿತು.

ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಅಬ್ಬರಿಸಿದ ಸಿಂಕಂದರ್ ರಾಜಾ ಅವರ ಜವಾಬ್ದಾರಿಯುತ ಶತಕ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿತ್ತು. ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿದ ರಾಜಾ ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದಿದ್ದರು. 95 ಎಸೆತಗಳಲ್ಲಿ 115 ರನ್ (9 ಬೌಂಡರಿ, 3 ಸಿಕ್ಸರ್) ಸಿಡಿಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳ ಬೆವರಿಳಿಸಿದ್ದರು. ಇನ್ನೇನು ಗೆಲವು ಜಿಂಬಾಬ್ವೆಯದ್ದೇ ಅಂದುಕೊಳ್ಳುವ ವೇಳೆಗೆ 49ನೇ ಓವರ್‌ನಲ್ಲಿ ಬೌಂಡರಿ ಚಚ್ಚುವ ಬರದಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಇದರಿಂದ ತಂಡ ಗೆಲ್ಲುವ ಭರವಸೆ ಸಂಪೂರ್ಣ ಕಳೆದುಕೊಂಡಿತು. ರೆಗಿಸ್ ಚಕಬ್ವಾ 16 ರನ್, ರಯಾನ್ ಬರ್ಲ್ 8 ರನ್, ಲ್ಯೂಕ್ ಜೊಂಗ್ವೆ 14 ರನ್‌ಗಳಿಸಿದರು.

ಮಿಂಚಿದ ಬ್ರಾಡ್ ಇವಾನ್ಸ್: ಜಿಂಬಾವ್ವೆ ಪರ ಆಟಗಾರ ಬ್ರಾಡ್ ಇವಾನ್ 5 ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದರು. 10 ಓವರ್‌ಗಳಲ್ಲಿ 54 ರನ್‌ಗಳನ್ನಷ್ಟೇ ನೀಡಿದ ಬ್ರಾಡ್ ಇವಾನ್ 5 ವಿಕೆಟ್ ಪಡೆದು ಮಿಂಚಿದರು. ವಿಕ್ಟರ್, ಲ್ಯೂಕ್ ಜೊಂಗ್ವೆ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

ಗಿಲ್ ಶತಕದ ಅಬ್ಬರ: 
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಶುಭಮನ್ ಗಿಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಜಿಂಬಾಬ್ವೆ ಬೌಲರ್‌ಗಳಿಗೆ ಬೆವರಿಳಿಸಿದರು. ಆರಂಭದಿಂದಲೂ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಗಿಲ್, ಕೇವಲ 82 ಎಸೆತಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದರು.

ಪಂದ್ಯದಲ್ಲಿ ಒಟ್ಟಾರೆಯಾಗಿ 97 ಎಸೆತಗಳನ್ನು ಎದುರಿಸಿದ ಗಿಲ್, ಒಂದು ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ 130 ರನ್ ಸಿಡಿಸಿದರು. ಆ ಮೂಲಕ ಟೀಂ ಇಂಡಿಯಾ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 289 ರನ್ ದಾಖಲಿತು. ಇದಕ್ಕೂ ಮುನ್ನ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ 68 ಎಸೆತಗಳಲ್ಲಿ 40 ರನ್ ಹಾಗೂ ಕೆ.ಎಲ್.ರಾಹುಲ್ 46 ಎಸೆತಗಳಲ್ಲಿ 30 ರನ್ ಗಳಿಸಿ ಪೆವಿಲಿಯನ್ ಸೇರಿದರು.

ಇಶಾನ್ ಶೈನ್: ಇತ್ತ ಶುಭಮನ್‌ಗಿಲ್‌ಗೆ ಜೊತೆಯಾಗಿ ಸಾತ್ ನೀಡಿದ ಇಶಾನ್ ಕಿಶನ್ 61 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನೊಂದಿಗೆ 50 ರನ್ ಸಿಡಿದರು. ಉತ್ತಮ ಫಾರ್ಮ್ನಲ್ಲಿದ್ದ ಕಿಶನ್ ಅನಗತ್ಯವಾಗಿ ರನ್ ಕದಿಯಲು ಮುಂದಾಗಿ ರನೌಟ್‌ ಆದರು.

ನಂತರದಲ್ಲಿ ಕ್ರೀಸ್‌ಗಿಳಿದ ಆಟಗಾರರು ಸ್ಥಿರವಾಗಿ ಆಡದ ಕಾರಣ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 289 ರನ್‌ಗಳಿಸಲಷ್ಟೇ ಸಾಧ್ಯವಾಯಿತು. ಸಂಜು ಸ್ಯಾಮ್ಸನ್ 15 ರನ್, ಅಕ್ಷರ್ ಪಟೇಲ್, ದೀಪಕ್ ಹೂಡ ತಲಾ 1 ರನ್, ಶಾರ್ದುಲ್ ಠಾಕೂರ್ 9 ರನ್ ಗಳಿಸಿ ನಿರ್ಗಮಿಸಿದರು. ದೀಪಕ್ ಚಹಾರ್ 1 ರನ್ ಹಾಗೂ ಕುಲದೀಪ್ ಯಾದವ್ 2 ರನ್ ಗಳಿಸಿ ಅಜೇಯರಾಗುಳಿದರು.

ಟೀಂ ಇಂಡಿಯಾ ಪರ ಅವೇಶ್ ಖಾನ್ ಮೂರು ವಿಕೆಟ್, ದೀಪಕ್ ಚಹಾರ್, ಕುಲದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *