ಆಸೀಸ್‌ಗೆ ರಿಷಬ್‌ ʻಪಂಚ್‌ʼ – ಭಾರತಕ್ಕೆ 145 ರನ್‌ಗಳ ಮುನ್ನಡೆ

Public TV
3 Min Read

ಸಿಡ್ನಿ: ಇಲ್ಲಿ ನಡೆಯುತ್ತಿರುವ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ (BGT Test Series) ಅಂತಿಮ ಪಂದ್ಯದ 2ನೇ ದಿನದಾಟದಲ್ಲಿ ಟೀಂ ಇಂಡಿಯಾ ವೇಗಿಗಳು ಹಿಡಿತ ಸಾಧಿಸಿದ್ದಾರೆ.

ಮತ್ತೊಂದೆಡೆ ರಿಷಬ್‌ ಪಂತ್‌ (Rishabh Pant) ಅವರ ಸಿಡಿಲಬ್ಬರದ ಅರ್ಧಶತಕ ಬ್ಯಾಟಿಂಗ್‌ ನೆರವಿನಿಂದ ದಿನಾಂತ್ಯಕ್ಕೆ 32 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿರುವ ಭಾರತ 145 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ಮೊದಲ ದಿನದ ಅಂತ್ಯಕ್ಕೆ 3 ಓವರ್‌ಗಳಲ್ಲಿ 9 ರನ್‌ಗಳಿಗೆ 1 ವಿಕೆಟ್‌ ಕಳೆದುಕೊಂಡಿತು. ಇಂದು 2ನೇ ದಿನದ ಆಟ ಆರಂಭಿಸಿದ ಆಸೀಸ್‌ 181 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ 4 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ದಿನದ ಅಂತ್ಯಕ್ಕೆ 32 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿದೆ. ಈ ಮೂಲಕ 145 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

ರಿಷಬ್‌ ಸ್ಫೋಟಕ ಫಿಫ್ಟಿ – ವಿಶೇಷ ಸಾಧನೆ:
ಸಂಕಷ್ಟದಲ್ಲಿದ್ದ ಭಾರತಕ್ಕೆ ರಿಷಬ್‌ ಪಂತ್‌ ಅವರ ಸ್ಫೋಟಕ ಅರ್ಧಶತಕ ಬಲ ತುಂಬಿದೆ. ಆಸೀಸ್‌ ಬೌಲರ್‌ಗಳನ್ನು ಚೆಂಡಾಡಿದ ಪಂತ್‌‌ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವಿಶೇಷ ಸಾಧನೆಗೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ವೇಗಿಗಳ ಅಬ್ಬರಕ್ಕೆ ಆಸಿಸ್‌ ತತ್ತರ; 181 ರನ್‌ಗಳಿಗೆ ಆಲೌಟ್‌

ಹೌದು. 2022ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಪಂತ್‌, ಇದೀಗ ಆಸೀಸ್‌ ವಿರುದ್ಧ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಇದರೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ನಂ.1 ಹಾಗೂ ನಂ.2 ಭಾರತೀಯ ಬ್ಯಾಟರ್‌ ರಿಷಬ್‌ ಪಂತ್‌ ಅವರೇ ಆಗಿದ್ದಾರೆ. 1982ರಲ್ಲಿ ಪಾಕ್‌ ವಿರುದ್ಧ ಕಪಿಲ್‌ ದೇವ್‌ (30 ಎಸೆತ), 2021ರಲ್ಲಿ ಇಂಗ್ಲೆಂಡ್‌ ವಿರುದ್ಧ ಶಾರ್ದೂಲ್‌ ಠಾಕೂರ್‌ (31 ಎಸೆತ), 2024ರಲ್ಲಿ ಬಾಂಗ್ಲಾ ವಿರುದ್ಧ ಯಶಸ್ವಿ ಜೈಸ್ವಾಲ್‌ (31 ಎಸೆತ) ಕ್ರಮವಾಗಿ 3, 4, 5ನೇ ಸ್ಥಾನದಲ್ಲಿದ್ದಾರೆ.

ಇನ್ನುಳಿದಂತೆ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್‌ 22ರನ್‌, ಕೆ.ಎಲ್‌ ರಾಹುಲ್‌ ಮತ್ತು ಶುಭಮನ್‌ ಗಿಲ್‌ ತಲಾ 13 ರನ್‌, ವಿರಾಟ್‌ ಕೊಹ್ಲಿ 6 ರನ್‌, ನಿತೀಶ್‌ ರೆಡ್ಡಿ 4 ರನ್‌ ಗಳಿಸಿದರು. ರವೀಂದ್ರ ಜಡೇಜಾ ಅಜೇಯ 8 ರನ್‌, ವಾಷಿಂಗ್ಟನ್‌ ಸುಂದರ್‌ ಅಜೇಯ 6 ರನ್‌ ಗಳಿಸಿದ್ದು, 3ನೇ ದಿನಕ್ಕೆ ಕ್ರೀಸ್‌ ಕಾಯ್ದಿರಿಸಿದ್ದಾರೆ. ಇದನ್ನೂ ಓದಿ: ಸಿಡ್ನಿ ಪಂದ್ಯದಿಂದ ರೋಹಿತ್‌ ಔಟ್‌? – ಗೌತಮ್‌ ಗಂಭೀರ್‌ ಹೇಳಿದ್ದೇನು?

ಬೊಲ್ಯಾಂಡ್‌ ಬೊಂಬಾಟ್‌ ಬೌಲಿಂಗ್‌:
ಇದೇ ಚೊಚ್ಚಲ ಟೆಸ್ಟ್‌ ಸರಣಿಯನ್ನಾಡುತ್ತಿರುವ ಸ್ಕಾಟ್‌ ಬೊಲ್ಯಾಂಡ್‌ ಅಂತಿಮ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳ ವಿರುದ್ಧ ಹಿಡಿತ ಸಾಧಿಸಿದ್ದಾರೆ. 2ನೇ ದಿನದ ಅಂತ್ಯಕ್ಕೆ 13 ಓವರ್‌ಗಳಲ್ಲಿ 42 ರನ್‌ ಬಿಟ್ಟುಕೊಟ್ಟ ಬೊಲ್ಯಾಂಡ್‌ 4 ವಿಕೆಟ್‌ ಕಿತ್ತರೆ, ಪ್ಯಾಟ್‌ ಕಮ್ಮಿನ್ಸ್‌, ಬಿಯು ವೆಬ್‌ಸ್ಟರ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಇದನ್ನೂ ಓದಿ:  ಚಹಲ್‌, ಧನಶ್ರೀ ದಾಂಪತ್ಯದಲ್ಲಿ ಬಿರುಕು – ಮದ್ವೆಯಾಗಿ 4 ವರ್ಷದ ಬಳಿಕ ಡಿವೋರ್ಸ್?

Share This Article