ನವದೆಹಲಿ: ಫಿಂಗರ್‌ಪ್ರಿಂಟ್, ಫೇಶಿಯಲ್ ರೆಕಗ್ನಿಷನ್ ಬಳಸಿ ಯುಪಿಐ ಪಾವತಿಗಳನ್ನು ಅನುಮೋದಿಸಲು ಬಳಕೆದಾರರಿಗೆ ಭಾರತ ಅವಕಾಶ ನೀಡಲಿದೆ.
ನಾಳೆಯಿಂದಲೇ (ಅ.8) ಈ ವ್ಯವಸ್ಥೆ ಜಾರಿಗೆ ಬರಲಿದೆ. ಭಾರತದ ವಿಶಿಷ್ಟ ಗುರುತಿನ ವ್ಯವಸ್ಥೆ ಆಧಾರ್ ಅಡಿಯಲ್ಲಿ ಸಂಗ್ರಹಿಸಲಾದ ಬಯೋಮೆಟ್ರಿಕ್ ಡೇಟಾವನ್ನು ಬಳಸಿಕೊಂಡು ದೃಢೀಕರಣಗಳನ್ನು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಂಖ್ಯಾತ್ಮಕ ಪಿನ್ ಅಗತ್ಯವಿರುವ ಪ್ರಸ್ತುತ ವ್ಯವಸ್ಥೆಗೆ ಬದಲಾಗಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಡಿಜಿಟಲ್ ಪಾವತಿಗಳಿಗೆ ಕೆಲವು ಪರ್ಯಾಯ ದೃಢೀಕರಣ ವಿಧಾನಗಳನ್ನು ಅನುಮತಿಸಿದೆ.
UPI ಅನ್ನು ನಿರ್ವಹಿಸುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI), ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್‌ಟೆಕ್ ಉತ್ಸವದಲ್ಲಿ ಈ ಹೊಸ ಬಯೋಮೆಟ್ರಿಕ್ ವೈಶಿಷ್ಟ್ಯವನ್ನು ಪ್ರದರ್ಶಿಸಲು ಯೋಜಿಸಿದೆ.