ಟೆಸ್ಟ್‌ ಕ್ಯಾಪ್ಟನ್‌ ಗಿಲ್‌ಗೆ ಅನಾರೋಗ್ಯ – ಏಷ್ಯಾಕಪ್‌ ಟೂರ್ನಿಗೆ ಅಯ್ಯರ್‌ಗೆ ಸಿಗುತ್ತಾ ಚಾನ್ಸ್‌?

Public TV
2 Min Read

ಮುಂಬೈ: 2025ರ ಟಿ20 ಏಷ್ಯಾಕಪ್‌ ಟೂರ್ನಿಗೆ ಇನ್ನೂ ಕೆಲ ದಿನಗಳು ಬಾಕಿಯಿರುವಾಗಲೇ ಟೀಂ ಇಂಡಿಯಾ (Team India) ಬಿಗ್‌ ಶಾಕ್‌ ಎದುರಾಗಿದೆ. ಈಗಾಗಲೇ ಏಷ್ಯಾಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ಉಪನಾಯಕ ಶುಭಮನ್‌ ಗಿಲ್‌ (Shubman Gill) ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.

ಮುಂದಿನ ಸೆ.9 ರಿಂದ ಸೆ.28ರ ವರೆಗೆ ಯುಎಇನಲ್ಲಿ ಟಿ20 ಏಷ್ಯಾಕಪ್‌ (Asia Cup 2025) ಟೂರ್ನಿ ನಡೆಯಲಿದೆ. ಅನಾರೋಗ್ಯದಿಂದ ಬಳಲುತ್ತಿರುವ ಗಿಲ್‌, ಪ್ರಸ್ತುತ ಚಂಡೀಗಢದಲ್ಲಿರುವ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಫಿಸಿಕಲ್‌ ಫಿಟ್ನೆಸ್‌ ತಜ್ಞರು ಹೇಳುವಂತೆ ಗಿಲ್‌ ಅವರು ಏಷ್ಯಾಕಪ್‌ ಟೂರ್ನಿಗೆ ಫಿಟ್‌ ಆಗುವ ನಿರೀಕ್ಷೆಯಿದೆ. ಆದ್ರೆ ಇದೇ ಆಗಸ್ಟ್‌ 28ರಿಂದ ಸೆ.15ರ ವರೆಗೆ ನಡೆಯಲಿರುವ ಪ್ರತಿಷ್ಠಿತ ದುಲೀಪ್‌ ಟ್ರೋಫಿಯಿಂದ (Duleep Trophy 2025) ಹೊರಗುಳಿಯುವ ಸಾಧ್ಯತೆಗಳಿಗೆ ಎಂದು ವರದಿಯಾಗಿದೆ. ಇದನ್ನೂ ಓದಿ: Asia Cup 2025: ಟೀಂ ಇಂಡಿಯಾ ಪ್ರಕಟ- ಸೂರ್ಯಕುಮಾರ್‌ ನಾಯಕ, ಕನ್ನಡಿಗ ವರುಣ್‌ಗೆ ಸ್ಥಾನ

ಏಷ್ಯಾಕಪ್‌ಗೆ ಭಾರತ ತಂಡ ಹೀಗಿದೆ?
ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್‌ ಪಟೇಲ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್‌), ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್‌ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಹರ್ಷಿತ್‌ ರಾಣಾ, ರಿಂಕು ಸಿಂಗ್. ಇದನ್ನೂ ಓದಿ: ಟೀಂ ಇಂಡಿಯಾಗೆ ಅಯ್ಯರ್ ಒನ್‌ಡೇ ಕ್ಯಾಪ್ಟನ್? – ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ

ಶ್ರೇಯಸ್‌ಗೆ ಸಿಗುತ್ತಾ ಚಾನ್ಸ್‌?
ಶುಭಮನ್‌ ಗಿಲ್‌ ಏಷ್ಯಾಕಪ್‌ ಟೂರ್ನಿ ಹೊತ್ತಿಗೆ ಸುಧಾರಣೆ ಆಗದಿದ್ದರೇ ಶ್ರೇಯಸ್‌ ಅಯ್ಯರ್‌ ಅವರಿಗೆ ಚಾನ್ಸ್‌ ಸಿಗಬಹುದಾ ಎನ್ನುವ ಪ್ರಶ್ನೆಯೂ ಎದ್ದಿದೆ. ಏಕೆಂದ್ರೆ ಸೂರ್ಯಕುಮಾರ್‌ ಯಾದವ್‌ ಕೂಡ ಶ್ರೇಯಸ್‌ ಅಯ್ಯರ್‌ ಆಯ್ಕೆ ಬಗ್ಗೆ ಆಸಕ್ತಿ ಹೊಂದಿದ್ದರು. ಆದ್ರೆ ಉತ್ತರ ವಲಯದ ಕ್ರಿಕೆಟ್‌ ಕಮಿಟಿ ಗಿಲ್‌ ಸ್ಥಾನಕ್ಕೆ ಸಂಭಾವ್ಯ ಆಟಗಾರರನ್ನಾಗಿ ಶುಭಮನ್‌ ರೊಹಿಲ್ಲಾ ಅಥವಾ ಅಂಕಿತ್‌ ಕುಮಾರ್‌ ರಣಜಿ ಆಟಗಾರರನ್ನ ಸೂಚಿಸಿದೆ ಎಂದು ತಿಳಿದುಬಂದಿದೆ.

ಶ್ರೇಯಸ್‌ ಕ್ಯಾಪ್ಟನ್‌ ಎಂಬ ವದಂತಿ
ಎರಡು ದಿನಗಳ ಹಿಂದಷ್ಟೇ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾದ ಒನ್‌ಡೇ ಕ್ಯಾಪ್ಟನ್ ಆಗಿ ಮಾಡಲಾಗುತ್ತದೆ ಅನ್ನೋ ವದಂತಿಗೆ ಬಿಸಿಸಿಐ ತೆರೆ ಎಳೆದಿತ್ತು. ಇದನ್ನೂ ಓದಿ: Asia Cup 2025 | ಹೊಸ ನಾಯಕತ್ವದಲ್ಲಿ ಪಾಕ್‌ ತಂಡ ಪ್ರಕಟ – ರಿಜ್ವಾನ್‌, ಬಾಬರ್‌ ಹೊರದಬ್ಬಿದ ಪಿಸಿಬಿ

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ನಾಯಕನ ಆಯ್ಕೆ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಇದರಲ್ಲಿ ಶ್ರೇಯಸ್ ತಪ್ಪು ಏನೂ ಇಲ್ಲ, ನಮ್ಮದೂ ತಪ್ಪಿಲ್ಲ. ಟೂರ್ನಿಗೆ 15 ಜನರನ್ನಷ್ಟೇ ಆಯ್ಕೆ ಮಾಡಲು ಅವಕಾಶವಿದೆ. ಅವಕಾಶ ಬರುವವರೆಗೆ ಕಾಯಬೇಕಾಗುತ್ತದೆ ಎಂದು ತಿಳಿಸಿದ್ದರು. ಇದೀಗ ಗಿಲ್‌ ಅನಾರೋಗ್ಯದ ಬೆನ್ನಲ್ಲೇ ಅಯ್ಯರ್‌ ಅವರತ್ತ ಅಭಿಮಾನಿಗಳ ಚಿತ್ತ ಹರಿದಿದೆ.

Share This Article