ವಾಷಿಂಗ್ಟನ್: ರಾಷ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಪುಟಿನ್ ಮಾತುಕತೆಗೆ ಒಪ್ಪಲು ಭಾರತದ ಮೇಲೆ ವಿಧಿಸಿದ ಸುಂಕಗಳು ಬಹುಶಃ ಪ್ರಭಾವ ಬೀರಿರಬಹುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಫಾಕ್ಸ್ ನ್ಯೂಸ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ (India) ರಷ್ಯಾದ ಎರಡನೇ ಅತಿ ದೊಡ್ಡ ತೈಲ ಖರೀದಿಸುವ ದೇಶ. ಎರಡನೇ ಅತಿದೊಡ್ಡ ಗ್ರಾಹಕರನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ದ ಕಾರಣ ಇದು ಒಂದು ಪಾತ್ರ ಬೀರಿರಬಹುದು ಎಂದು ಹೇಳಿದರು.
ಉಕ್ರೇನ್ – ರಷ್ಯಾ ಯುದ್ಧವನ್ನು ನಿಲ್ಲಿಸುವ ಸಂಬಂಧ ಆಗಸ್ಟ್ 15 ರಂದು ಅಲಾಸ್ಕಾದಲ್ಲಿ ಟ್ರಂಪ್ ಮತ್ತು ಪುಟಿನ್ ಭೇಟಿ ನಡೆಯಲಿದೆ. ಇದನ್ನೂ ಓದಿ: ಬಾಂಗ್ಲಾ ಸರಕುಗಳ ಮೇಲೆ ಕಠಿಣ ನಿರ್ಬಂಧ ವಿಧಿಸಿದ ಭಾರತ
ಆ.1 ರಿಂದ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಅಮೆರಿಕ 25% ಸುಂಕ ವಿಧಿಸಿತ್ತು. ಈ ಬೆನ್ನಲ್ಲೇ ಟ್ರಂಪ್ ರಷ್ಯಾದಿಂದ ಭಾರತ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ಸುಂಕ ವಿಧಿಸಿದ್ದಾರೆ.