ಟಿ20 ವಿಶ್ವಕಪ್‌ಗೆ ತಂಡ ಪ್ರಕಟ – ಗಿಲ್‌ ಔಟ್‌, ಅಕ್ಷರ್‌ ಪಟೇಲ್‌ಗೆ ಉಪನಾಯಕನ ಪಟ್ಟ

1 Min Read

ಮುಂಬೈ: ಟಿ20 ವಿಶ್ವಕಪ್‌ ಕ್ರಿಕೆಟ್‌ಗೆ (T20 World Cup) ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು ಶುಭಮನ್‌ ಗಿಲ್‌ (Shubman Gill) ಅವರನ್ನು ಕೈ ಬಿಡಲಾಗಿದೆ.

ಆಲ್‌ರೌಂಡರ್‌ ಆಟಗಾರ ಅಕ್ಷರ್‌ ಪಟೇಲ್‌ (Axar Patel) ಅವರಿಗೆ ಉಪನಾಯಕನ ಪಟ್ಟವನ್ನು ನೀಡಲಾಗಿದೆ. ಸೂರ್ಯಕುಮಾರ್‌ ಯಾದವ್‌ (Surya Kumar Ydav) ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಬಹುತೇಕ ಆಫ್ರಿಕಾ ವಿರುದ್ಧ ಆಡಿರುವ ಆಟಗಾರರಿಗೆ ಸ್ಥಾನ ನೀಡಲಾಗಿದೆ.

ಗಿಲ್‌ ಜಾಗದಲ್ಲಿ ಅಭಿಷೇಕ್‌ ಶರ್ಮಾ ಜೊತೆ ಸಂಜು ಸಾಮ್ಸನ್‌ ಅಥವಾ ಇಶನ್‌ ಕಿಶನ್‌ ಆರಂಭಿಕ ಬ್ಯಾಟರ್‌ಗಳಾಗಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ಕೀಪರ್‌), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್ (ಉಪನಾಯಕ), ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷದೀಪ್ ಯಾದವರ್ ಸಿಂಗ್, ಕುಲದೀಪ್ ಯಾದವ್‌, ವರುಣ್‌ ಚಕ್ರವರ್ತಿ, ವಾಷಿಂಗ್ಟನ್‌ ಸುಂದರ್‌, ಇಶಾನ್‌ ಕಿಶಾನ್‌

ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ಕ್ರಿಕೆಟ್‌ ನಡೆಯಲಿದೆ. ಫೆ.7 ರಿಂದ ಆರಂಭವಾಗಿ ಮಾರ್ಷ್‌ 8ವರೆಗೆ 20 ಕ್ರಿಕೆಟ್‌ ಹಬ್ಬ ನಡೆಯಲಿದೆ.

Share This Article