ಅಗ್ನಿ 5 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ

Public TV
1 Min Read

ಭುವನೇಶ್ವರ: ಒಡಿಶಾದ ಚಾಂಡಿಪುರ (Chandipur) ತೀರದಲ್ಲಿ ನಡೆದ ಅಗ್ನಿ 5 ಖಂಡಾಂತರ ಕ್ಷಿಪಣಿ (Agni 5 Missile) ಪರೀಕ್ಷೆ ಯಶಸ್ವಿಯಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಮಧ್ಯಂತರ ಶ್ರೇಣಿಯ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ದೇಶಿಯವಾಗಿ ತಯಾರಿಸಿದ ಖಂಡಾಂತರ ಕ್ಷಿಪಣಿ ಅಗ್ನಿ 5,000 ಕಿ.ಮೀ ವಾಪ್ತಿಯ ಶತ್ರು ನೆಲೆಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ಅಫ್ಘಾನಿಸ್ತಾನ | ಬಸ್‌ಗೆ ಬೆಂಕಿ ತಗುಲಿ 17 ಮಕ್ಕಳು ಸೇರಿ 76 ಮಂದಿ ಸುಟ್ಟು ಕರಕಲು

ಡಿಆರ್‌ಡಿಓ (DRDO) ನೇತೃತ್ವದಲ್ಲಿ 2012ರ ಏ.19ರಂದು ಅಗ್ನಿ ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಉಡಾವಣೆ ನಡೆದಿತ್ತು. ಅಗ್ನಿ-5 ಕ್ಷಿಪಣಿ ಒಂದು ಟನ್‌ಗಿಂತಲೂ ಹೆಚ್ಚು ಭಾರದ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮಾರ್ಥ್ಯವನ್ನು ಹೊಂದಿದ್ದು, ಸ್ವಯಂಚಾಲಿತ ಸೌಲಭ್ಯವನ್ನೂ ಹೊಂದಿದೆ. ವಿವಿಧ ರೇಡಾರ್ ಮತ್ತು ಸಂಪರ್ಕ ವ್ಯವಸ್ಥೆಯ ಮೂಲಕವೂ ಮಾಹಿತಿ ಪಡೆಯುವ ವಿಶೇಷ ಗುಣ ಇದಕ್ಕಿದೆ ಎಂದು ಡಿಆರ್‌ಡಿಓ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅನನ್ಯಾ ಭಟ್ ಕೇಸ್ ಎಸ್‌ಐಟಿಗೆ ಹಸ್ತಾಂತರ

 

 

Share This Article